DistrictNationalPoliticalShivamoggaSpecial Storiesದೇಶದೆಲ್ಲಡೆ ಮೋದಿ ಹುಟ್ಟು ಹಬ್ಬದ ಸಂಭ್ರಮಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮ ದಿನಾಚರಣೆ-ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಸಂಸದ ಬಿ ವೈ ರಾಘವೇಂದ್ರ ಭಾಗಿ
ಮೂರನೇ ಅವಧಿಯಲ್ಲಿಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶವು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಬಲವಾಗಲಿ, ದೇಶದ ಬಗೆಗಿನ ನಿಮ್ಮ ಪ್ರತಿಯೊಂದು ಅಶೋತ್ತರಗಳು ಪರಿಪೂರ್ಣವಾಗಲಿ, ಜನ ಸಾಮಾನ್ಯರೆಡೆಗಿನ ನಿಮ್ಮ ತುಡಿತಕ್ಕೆ ಭಗವಂತ ಮತ್ತಷ್ಟು ಅಗಾಧವಾದ ಶಕ್ತಿ ತುಂಬಲಿ ಎಂದು ಸಂಸದ ಬಿ ವೈ ರಾಘವೇಂದ್ರ ಹಾರೈಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮ ದಿನಾಚರಣೆಯ ನಿಮಿತ್ತ ಶಿವಮೊಗ್ಗ ನಗರ ಬಿಜೆಪಿ ಘಟಕದಿಂದ ಐತಿಹಾಸಿಕ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬುಧವಾರ ಬೆಳಗ್ಗೆ ಆಯೋಜಿಸಲಾಗಿತ್ತು.

ಕೋಟೆ ಆಂಜನೇಯ ಸ್ವಾಮಿ ಸಮ್ಮುಖದಲ್ಲಿ ನಡೆದ ಪೂಜೆಯಲ್ಲಿ ಸಂಸದ ಬಿ ವೈ ರಾಘವೇಂದ್ರ ಪಾಲ್ಗೊಂಡಿದ್ದರು.



ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್ ಕೆ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಎಸ್ ಪ್ರಧಾನ ಕಾಯ೯ದಶಿ೯ ದೀನದಯಾಳ್, ಮಾಧ್ಯಮ ಸಂಚಾಲಕ ಎನ್ ಶ್ರೀನಾಗ, ಜಿಲ್ಲಾ ಪದಾಧಿಕಾರಿಗಳು,ಮಾಜಿ ಪಾಲಿಕೆ ಸದಸ್ಯರುಗಳು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


