ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ-ಭಾರತದ ದಿಕ್ಕನ್ನೇ ಬದಲಿಸಿದೆ-ಬಿ ವೈ ವಿಜಯೀಂದ್ರ
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಶತಾಬ್ದಿಯ ಈ ಸಂದರ್ಭದಲ್ಲಿ ಬಿ ವೈ ವಿಜಯೀಂದ್ರ ಅವರು ಹಾರ್ದಿಕ ಶುಭಾಶಯ ಕೋರಿದ್ದಾರೆ.

ದೇಶದಾದ್ಯಂತ ರಾಷ್ಟ್ರಭಕ್ತರಿಗೆ ಸ್ಫೂರ್ತಿ ನೀಡುತ್ತಾ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ರಾಷ್ಟ್ರ ನಿರ್ಮಾಣದ ಸಂಘಟನೆಯು ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೀಂದ್ರ ಹೇಳಿದ್ದಾರೆ.

ಶಿಕಾರಿಪುರದ ಶಿರಾಳಕೊಪ್ಪದಲ್ಲಿ ನವೆಂಬರ್ ೧ರಂದು ನಡೆದ ಆರ್ಎಸ್ಎಸ್ ಭವ್ಯ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿದ್ದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಿಸಿದೆ ಎಂದಿದ್ದಾರೆ.

1925 ರ ವಿಜಯದಶಮಿಯಂದು ಆರಂಭಗೊಂಡ ಆರ್ಎಸ್ಎಸ್ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಶತಾಬ್ದಿಯ ಈ ಸಂದರ್ಭದಲ್ಲಿ ಬಿ ವೈ ವಿಜಯೀಂದ್ರ ಅವರು ಹಾರ್ದಿಕ ಶುಭಾಶಯ ಕೋರಿದ್ದಾರೆ.

ಪಥಸಂಚಲನದಲ್ಲಿ ಆರ್ಎಸ್ಎಸ್ ನ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ರವೀಂದ್ರ , ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಕೆ ಎಸ್ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮೇಘರಾಜ್ ಸೇರಿದಂತೆ ಸಾವಿರಾರು ಗಣವೇಷಧಾರಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


