ಚೀನಾದ ಜೊತೆ ಭಾರತ, ರಷ್ಯಾ ಭಾಯಿ..ಭಾಯಿ..ಇದನ್ನು ನಂಬಲಿಕ್ಕೆ ಆಗುತ್ತಿಲ್ಲ ಎಂದ Donald Trump
ಭಾರತ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ ಎಂದು ತಿಳಿದಾಗ ನನಗೆ ತುಂಬಾ ನಿರಾಶೆಯಾಗಿತ್ತು ಇದನ್ನು ನಾನು ಅದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದೇನೆ.

ಚೀನಾದಂತಹ ರಾಷ್ಟ್ರದ ಜೊತೆ ಭಾರತ ಮತ್ತು ರಷ್ಯಾವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಹನೆ ಮತ್ತು ಅಷ್ಟೇ ಅಕ್ರೋಶದಿಂದ ಪ್ರತಿಕ್ರಿಯೆ ನೀಡಿರುವ ಘಟನೆ ನಡೆದಿದೆ.
ತಮ್ಮ ಟ್ರೂಥ್ ಸೋಶೀಯಲ್.ಕಾಮ್ಗೆ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ಟ್ರಂಪ್, ಇಂತಹ ಘಟನೆ ಸಂಭವಿಸಿದೆ ಎಂದರೇ ನಂಬಲಿಕ್ಕೆ ಆಗುತ್ತಿಲ್ಲ ಎಂದಿದ್ದಾರೆ.

ಶ್ವೇತಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವುದಕ್ಕೆ ತಮ್ಮ ನಿರಾಶೆ ವ್ಯಕ್ತಪಡಿಸಿದರು.
ಶುಕ್ರವಾರದಂದು ತಮ್ಮ ಪೋಸ್ಟ್ನಲ್ಲಿ ಭಾರತವನ್ನು ಚೀನಾ ವಿರುದ್ಧ ಸೋತಿದ್ದಕ್ಕೆ ಯಾರನ್ನು ದೂಷಿಸುತ್ತೀರಿ ಎಂದು ಮಾಧ್ಯಮದವರ ಪ್ರಶ್ನೆಗೆ, ಟ್ರಂಪ್ “ನಮಗೆ ಹಾಗೆ ಆಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಭಾರತ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ತೈಲ ಖರೀದಿಸುತ್ತಿದೆ ಎಂದು ತಿಳಿದಾಗ ನನಗೆ ತುಂಬಾ ನಿರಾಶೆಯಾಗಿತ್ತು ಇದನ್ನು ನಾನು ಅದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದೇನೆ.
ಟಿಯಾಂಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾ ನಾಯಕರು ಒಟ್ಟಾಗಿ ನಿಂತ ಕೆಲವು ದಿನಗಳ ನಂತರ, ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ನಲ್ಲಿ “ಅಮೆರಿಕವು ರಷ್ಯಾ ಮತ್ತು ಭಾರತವನ್ನು ಕರಾಳ ಚೀನಾಕ್ಕೆ ಕಳೆದುಕೊಂಡಿದೆ” ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಈಗ ಚಚೆ೯ಗೆ ಕಾರಣವಾಗಿದೆ.



