Voter Adhikar Yatra-ರಾಹುಲ್ ಗಾಂಧಿ ಹೋರಾಟಕ್ಕೆ ಮೊದಲ ಗೆಲುವು-ಕನಾ೯ಟಕದಲ್ಲಿ ಇನ್ನು”ಬ್ಯಾಲೆಟ್ ಪೇಪರ” ಮತದಾನ
ಕನಾ೯ಟಕ ರಾಜ್ಯದಲ್ಲಿ ಇವಿಎಂ ಬದಲು ಮತಪತ್ರ ( ಬ್ಯಾಲೆಟ್ ಪೇಪರ್ ) ಬಳಕೆಗೆ ರಾಜ್ಯ ಸಚಿವ ಸಂಪುಟ ನಿಧ೯ರಿಸಿದೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಸಿದ್ದರಾಮಯ್ಯ ಸಕಾ೯ರ ಸಾಕ್ಷಾತ ಬೆಂಬಲ ಘೋಷಿಸಿದೆ.

ಕೇಂದ್ರ ಚುನಾವಣಾ ಆಯೋಗದ ವಿರುದ್ದ ಮತಗಳ್ಳತನ ಹಾಗೂ ವಿದ್ಯುನ್ಮಾನ ಮತಯಂತ್ರ ಇವಿಎಂ ವಂಚನೆಯಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ಪ್ರತಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಕೊನೆಗೂ ಮೊದಲ ಹಂತದ ಗೆಲುವು ಸಿಕ್ಕಿದೆ.

ಕನಾ೯ಟಕ ರಾಜ್ಯದಲ್ಲಿ ಇವಿಎಂ ಬದಲು ಮತಪತ್ರ ( ಬ್ಯಾಲೆಟ್ ಪೇಪರ್ ) ಬಳಕೆಗೆ ರಾಜ್ಯ ಸಚಿವ ಸಂಪುಟ ನಿಧ೯ರಿಸಿದೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟಕ್ಕೆ ಸಿದ್ದರಾಮಯ್ಯ ಸಕಾ೯ರ ಸಾಕ್ಷಾತ ಬೆಂಬಲ ಘೋಷಿಸಿದೆ.

ಈ ಕುರಿತು ಶೀಘ್ರದಲ್ಲಿ ಸುಗ್ರಿವಾಜ್ಞೆ ಹೊರಡಿಸಲು ಸಹ ರಾಜ್ಯ ಸಕಾ೯ರ ಮುಂದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಗುರುವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳು ಮತ್ತು ನಗರ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಹಾಗು ತಾಲೂಕಾ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಬ್ಯಾಲೆಟ್ ಪೇಪರ ಬಳಕೆಗೆ ತೀಮಾ೯ನಿಸಿದೆ.

ಇನ್ನು ಬರಲಿರುವ ಆಯಾ ವ್ಯಾಪ್ತಿಯ ಚುನಾವಣೆಗಳ ಮತದಾರರ ಯಾದಿಯನ್ನು ಸಮಗ್ರವಾಗಿ ಪರಿಶೀಲಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈವರೆಗಿನ ಕಾನೂನು ಏನು ಹೇಳುತ್ತದೆ?
ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆ ಪ್ರಕಾರ, ರಾಜ್ಯ ಸಕಾ೯ರ ಏನೇ ತೀಮಾ೯ನ ಕೈಗೊಂಡರೂ, ಸಂವಿಧಾನ ಬದ್ದ ಸಂಸ್ಥೆಯಾದ ಚುನಾವಣಾ ಆಯೋಗವು ಸಕಾ೯ರದ ನೀಡುವ ಶಿಫಾರಸುಗಳನ್ನು ಭಾಗಶಃ ಒಪ್ಪಬಹುದು ಅಥವಾ ತಿರಸ್ಕರಿಸಬಹುದು.
ಈ ಹಿನ್ನಲೆಯಲ್ಲಿ ರಾಜ್ಯ ಸಕಾ೯ರವು ಒಂದು ಹೆಜ್ಜೆ ಮುಂದಿಟ್ಟಿದೆ. ಮತದಾರರ ಯಾದಿ, ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿರುವ ರಾಜ್ಯ ಸಕಾ೯ರವು, ಈ ಅಧ್ಯಾದೇಶಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆದು ಸಂವಿಧಾನಾತ್ಮಕವಾಗಿ ಸಿಗುವ ಅವಕಾಶ ಬಳಸಿಕೊಳ್ಳಲು ಜಾಣ ಹೆಜ್ಜೆ ಇಡ1ಲು ಸಿದ್ದರಾಮಯ್ಯ ಸಕಾ೯ರ ಮುಂದಾಗಿದೆ.
ಏನೆಲ್ಲಾ ತಿದ್ದುಪಡಿ?
- ಹಾಲಿ ಜಾರಿಗೆಯಲ್ಲಿರುವ ಮುನ್ಸಿಪಲ್ ಕಾಯ್ದೆ ಸೆಕ್ಷನ್ 1964ರ ಸೆಕ್ಷನ್ 14
- ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ ಕಾಯ್ದೆ 1993ರ ಸೆಕ್ಷನ್ 165
- ಗ್ರೇಟರ್ ಬೆಂಗಳೂರು ಪ್ರಾಧಿಕಾರ2024ರ ಕಾಯ್ದೆ ಸೆಕ್ಷನ್ 35ಕ್ಕೆ ತಿದ್ದುಪಡಿ
ಈ ಮೂಲಕ ಹೊಸದಾಗಿ ಮತದಾರರ ಕರಡು ಪಟ್ಟಿಯನ್ನು ತಯಾರಿಸಲು ನಿಧ೯ರಿಸಿರುವ ಸಕಾ೯ರ, ಇನ್ನು ಚುನಾವಣೆಗೆ ಸಂಬಂಧಿಸಿದಂತೆ,
- ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ 2024ರ ಸೆಕ್ಷನ್ 68
- ಕನಾ೯ಟಕ್ ಮುನ್ಸಿಪಲ್ ಚುನಾವಣಾ ನಿಯಮಗಳು
- 1979 ಗ್ರಾಮಸ್ವರಾಜ್ ಮತ್ತು ಪಂಚಾಯತ್ರಾಜ್ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ
ಈ ಮೂಲಕ ಇವಿಎಂ ಬದಲು ಮತಪತ್ರ ಮುಖೇನ ಚುನಾವಣೆ ನಡೆಸಲು ಯಾವುದೆ ಕಾನೂನು ಅಡ್ಡಿ ಬರದಂತೆ , ಜಾಣ ರಹದಾರಿಗೆ ಮಾಡಿಕೊಳ್ಳಲು ರಾಜ್ಯ ಸಕಾ೯ರ ಮುಂದಾಗಿದೆ.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು,
ನ್ಯೂ ಇಂಡಿಯಾ ಕನ್ನಡ



