DistrictShivamogga

ಶಿವಮೊಗ್ಗದಲ್ಲಿ ಇದ್ದಾನೆ ೨೫ ದಿನಗಳ ಪ್ರತಿಷ್ಠಾಪನಾ ಗಣಪ- ಕಾಶಿಪುರದಲ್ಲಿ ಉಗ್ರನರಸಿಂಹನಾಗಿ ನಿಂತಿದ್ದಾನೆ ಗಜಮುಖ

ಪ್ರತಿ ವರುಷ ಗಣಪತಿಯ ವಿಭಿನ್ನ ರೂಪ ದಶ೯ನ

ಕಾಶಿಪುರ ದ್ರೌಪದಮ್ಮ ಸರ್ಕಲ್ ಬಳಿ ಕಾಶೀಪುರ ವಿನಾಯಕ ಸಮಿತಿ ಪ್ರತಿಷ್ಠಾಪಿಸಿರುವ ಉಗ್ರನರಸಿಂಹ ಪರಿಕಲ್ಪನೆ ಎಲ್ಲರ ಗಮನ ಸೆಳಯುತ್ತಿದೆ. ಮುಖ್ಯ ದ್ವಾರದಲ್ಲಿ ಪರುಶರಾಮನ ಪ್ರತಿಮೆ ಸಿಗುತ್ತದೆ. ಮುಂದೆ ಸಾಗಿದರೇ, ಅಲ್ಲಿ ಈಶ್ವರನ ಮೂರ್ತಿ ಕಾಣಸಿಗುತ್ತದೆ. ಇನ್ನು ಈಶ್ವರನಿಗೆ ವಂದಿಸಿ ಮುನ್ನಡೆದರೆ ಗಣೇಶ ಉಗ್ರನರಸಿಂಹನಾಗಿ ವರ ನೀಡುವ ಗಣಪನಾಗಿ ಕಂಗೊಳಿಸುತ್ತಾನೆ.

ಉಗ್ರನರಸಿಂಹ ಗಣೇಶ, ರಾಜಗೋಪುರದಲ್ಲಿ ಪರುಶರಾಮ ವಿರಾಜಮಾನರಾಗಿರೋದು ಶಿಲ್ಪಿ ಮಾರುತಿಯ ಕೈಚಳಕದಲ್ಲಿ. 18 ವರ್ಷಗಳಿಂದ‌‌‌ ಗಣೇಶೋತ್ಸವ ಆಚರಿಸುತ್ತಿದ್ದು ಪ್ರತೀ ಬಾರಿಯೂ ಹೊಸ ಬಗೆಯ ಆಲೋಚನೆಯೊಂದಿಗೆ ಗಣೇಶ ಒಡಮೂಡುತ್ತಾನೆ. ಕಳೆದ ವರ್ಷ ರಾಘವೇಂದ್ರಸ್ವಾಮಿ ಅವತಾರದಲ್ಲಿ ಗಣೇಶನ ಕಲಾಕೃತಿ ಮಾಡಲಾಗಿತ್ತು.

Leave a Reply

Your email address will not be published. Required fields are marked *

Back to top button