ಮೋದಿ ಕೊಟ್ಟ ಸೈಲೆಂಟ್ ಹೊಡೆತಕ್ಕೆ ಥರಗುಟ್ಟಿದ America – “I will always be friends with Modi.. ಎಂದ Donald Trump
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಸಿಕೆ ವ್ಯಕ್ತಪಡಿಸಿರುವ ಆಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಯಾವಾಗಲು ನಮ್ಮ ಸ್ನೇಹಿತ. ಅವರೊಂದಿಗೆ ಹಾಗು ಭಾರತದೊಂದಿಗೆ ಮಿತೃತ್ವ ಬಯಸುತ್ತೇನೆ ಎಂದು ಹೇಳಿದ್ದಾರೆ.

ಒಂದು ಕಾಲವಿತ್ತು. ವಿಶ್ವದ ದೊಡ್ಡಣ್ಣ ಆಮೇರಿಕದ ವಿರುದ್ದ ಸೊಲ್ಲೆತ್ತಲು ನೂರು ಸಲ ಯೋಚಿಸಬೇಕಿತ್ತು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶಾಂತ ರೀತಿಯಿಂದಲೇ ಕೊಟ್ಟ ಹೊಡೆತ, ಆಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ರನ್ನು ಅಲುಗಾಡಿಸಿಬಿಟ್ಟಿದೆ.

ಯಾರಿಗೂ ಎಂದಿಗೂ ತಲೆಬಾಗದ ಆಮೇರಿಕ, ಇಂದು ಭಾರತದ ಮನವೊಲಿಸಲು ಮುಂದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಸಿಕೆ ವ್ಯಕ್ತಪಡಿಸಿರುವ ಆಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಯಾವಾಗಲು ನಮ್ಮ ಸ್ನೇಹಿತ. ಅವರೊಂದಿಗೆ ಹಾಗು ಭಾರತದೊಂದಿಗೆ ಮಿತೃತ್ವ ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ತಮ್ಮ ಎಕ್ಸ್ ಸಾಮಾಜಿಕ ಖಾತೆಯಲ್ಲಿ ಉತ್ತರ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ಅವರ ಭಾವನೆಗಳನ್ನು ಭಾರತ ಗೌರವಿಸುತ್ತದೆ ಎಂದಿದ್ದಾರೆ.
“ಭಾರತ ಮತ್ತು ಅಮೆರಿಕ ಬಹಳ ಸಕಾರಾತ್ಮಕ ಮತ್ತು ಭವಿಷ್ಯತ್ತಿನ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ” ಟ್ರಂಪ್ ಅವರ ಸಕಾರಾತ್ಮಕ ಅನಸಿಕೆಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ,
ನ್ಯೂ ಇಂಡಿಯಾ ಕನ್ನಡ



