ಅನಾಥವಾಯ್ತು…ಕನ್ನಡ ಸಾರಸ್ವತ ಲೋಕ-ಕರುನಾಡು ಸರಸ್ವತಿ ಪುತ್ರ ಎಸ್.ಎಲ್.ಭೈರಪ್ಪ ವಿಧಿವಶ
ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಭೈರಪ್ಪನವರನ್ನು ಬೆಂಗಳೂರಿನ ರಾಜರಾಜೇಸ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಭೈರಪ್ಪನವರಿಗೆ ಹೃದಯ ಸ್ತಂಬನವಾಗಿದೆ. ವೈದ್ಯರ ಸತತ ಪ್ರಯತ್ನ ಪಟ್ಟರೂ ಭೈರಪ್ಪನವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಭೈರಪ್ಪನವರು ಮಧ್ಯಾಹ 2.38 ನಿಮಿಷಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕನ್ನಡದ ಸಾರಸ್ವತ ಲೋಕದ ಹಿರಿಯ ಕೊಂಡಿ ಡಾ ಎಸ್ ಎಲ್ ಭೈರಪ್ಪ ಬುಧವಾರದಂದು ಅಸ್ತಂಗತರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ದ ರಾ ಬೇಂದ್ರೆ, ವರಕವಿ ಕುವೆಂಪು ,ಡಾ.ಗಿರೀಶ್ ಕಾನಾ೯ಡ ಸಮಕಾಲೀನರಾಗಿದ್ದ ಭೈರಪ್ಪನವರ ನಿಧನ, ಕನಾ೯ಟಕದ ಪಾಲಿಗೆ ಅತಿ ದೊಡ್ಡ ನಷ್ಟವನ್ನುಂಟು ಮಾಡಿದೆ.

ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಭೈರಪ್ಪನವರನ್ನು ಬೆಂಗಳೂರಿನ ರಾಜರಾಜೇಸ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಭೈರಪ್ಪನವರಿಗೆ ಹೃದಯ ಸ್ತಂಬನವಾಗಿದೆ.
ವೈದ್ಯರ ಸತತ ಪ್ರಯತ್ನ ಪಟ್ಟರೂ ಭೈರಪ್ಪನವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಭೈರಪ್ಪನವರು ಮಧ್ಯಾಹ 2.38 ನಿಮಿಷಕ್ಕೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪನವರ ಏಳು ದಶಕಗಳು
1931ರ ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದ ಡಾ.ಎಸ್.ಎಲ್.ಭೈರಪ್ಪನವರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟಾಗ ಅದಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ದ ರಾ ಬೇಂದ್ರೆ , ವರಕವಿ ಕುವೆಂಪು ರಾಷ್ಟ್ರಮಟ್ಟದಲ್ಲಿ ಕನ್ನಡದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು.
1955ರಲ್ಲಿ ಭೈರಪ್ಪನವರ ಮೊದಲ ಕಥಾ ಸಂಕಲನ “ಕೃತಿ ಗತ ಜ್ಞಾನ ಮತ್ತೆರಡು ಕೃತಿಗಳು” ಮೂಲಕ ಸಾರಸ್ವತ ಲೋಕಕ್ಕೆ ಅವರು ಪ್ರವೇಶ ಮಾಡಿದ್ದರು.

ಬಳಿಕ 1958ರಲ್ಲಿ ಪ್ರಕಟಿತ ಅವರ ಮೊದಲ ಕಾದಂಬರಿ “ಭೀಮಕಾಯ” ದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ಕನ್ನಡದ ಜನ ಅವರನ್ನು ಕೈಬಿಡಲೂ ಇಲ್ಲ.
ಆಗಿನ ಕಾಲದಿಂದ ಈಗಿನ ಆಧುನಿಕ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿಯು ಸಹ ಅತಿ ಹೆಚ್ಚು ಒದುಗರನ್ನು ಸೆಳೆದಿದ್ದ ಭೈರಪ್ಪನವರ ಈ ದಾಖಲೆಯನ್ನು ಇನ್ನು ಯಾರು ಮುರಿಯಲಿಕ್ಕೆ ಸಾಧ್ಯವಿಲ್ಲ ಎಂಬಷ್ಟು ಅವರ ಕಾದಂಬರಿಗಳು ಇಂದಿನ ಯುವ ಸಮೂಹವನ್ನು ಸೆಳೆದಿವೆ ಎಂಬುದು ಮಾತ್ರ ಸುಳ್ಳಲ್ಲ.
ಮುಂದೆ 1959ರಲ್ಲಿ ಬೆಳಕು ಮೂಡಿತು, 1961ರಲ್ಲಿ ಧಮ೯ಶ್ರೀ, 1962ರಲ್ಲಿ ದೂರ ಸರಿದವರು, 1965ರಲ್ಲಿ ಮತದಾನ, ಹೀಗೆ ಸತತ ಸರಾಸರಿ ವರುಷಕ್ಕೊಂದು ಅವರು ಕಾದಂಬರಿ ಬರೆಯುತ್ತ ಬಂದರು.
1965ರಲ್ಲಿ ಅವರು ಬರೆದ ವಂಶವೃಕ್ಷ ಕಾದಂಬರಿಗೆ ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರಿಗೆ ಒಲಿದು ಬಂದಿತ್ತು.

1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ್ ಭಾರತ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಲಾಗಿತ್ತು. 2007ರಲ್ಲಿ ಗುಲಬಗಾ೯ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
ಹೀಗೆ ಹತ್ತು ಹಲವು ಪ್ರಶಸ್ತಿಗಳು ಅವರ ಜೀವಮಾನದುದ್ದಕ್ಕೂ ಅವರನ್ನು ಅರಸುತ್ತಲೇ ಬಂದವು. ಇತ್ತಿಚೇಗೆ ಅವರಿಗೆ 2023ರಲ್ಲಿ ಕೇಂದ್ರ ಸಕಾ೯ರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಕ್ಕೂ ಮುನ್ನ 2016ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿತ್ತು.
ಬಲಪಂಥೀಯ ಭೈರಪ್ಪನವರು
ಡಾ.ಎಸ್ ಎಲ್ ಭೈರಪ್ಪನವರು ತಮ್ಮ ಜೀವಮಾನದುದ್ದಕ್ಕೂ ತಮಗೆ ಅನಿಸಿದ್ದನ್ನು ಅದುಮಿ ಇಟ್ಟುಕೊಂಡವರೇ ಇಲ್ಲ. ಬಲಪಂಥೀಯ ನಿಲುವುಗಳನ್ನು ಹೊಂದಿದ್ದ ಭೈರಪ್ಪನವರು ಅನೇಕ ಟೀಕೆ,ಟಿಪ್ಪಣಿಗಳನ್ನು ಎದುರಿಸುತ್ತಲೇ ಬಂದಿದ್ದರು.
ಪ್ರಗತಿಪರತೆ ಹಾಗೂ ಸಮಾಜಮುಖಿ ನಿಲುವಿಗೆ ಅವರು ವಿರುದ್ದವಾಗಿದ್ದಾರೆ ಎಂದು ಹಲವರು ಅವರನ್ನು ನೇರವಾಗಿ ಟೀಕಿಸಿದ್ದುಇದೆ.
ಭೈರಪ್ಪನವರು ಅದೇಷ್ಟು ಕಾದಂಬರಿಗಳನ್ನು ಬರೆದು ಎಲ್ಲಿಯೂ ಜಾತಿಯ ಲವಲೇಷದ ಸೊಂಕನ್ನು ತಮ್ಮ ಬರಹದಲ್ಲಿ ತಾಕೀಸದಿದ್ದರೂ ಸಹ, ಅವರನ್ನು ಒಂದು ವಗ೯ ಅವರ ಜೀವಮಾನದುದ್ದಕ್ಕೂ ಅವರು ಈ ಜಾತಿಗೆ ಸೇರಿದವರು ಎಂದು ಅಪರೋಕ್ಷವಾಗಿ ಕೆಲವೊಮ್ಮೆ ಪರೋಕ್ಷವಾಗಿ ಹೀಯಾಳಿಸುತ್ತಲೇ ಬಂದಿದ್ದವು.
ಬ್ರಾಹ್ಮಣ ಜಾತಿಯಲ್ಲಿ ತಾವು ಜನಿಸಿದರೂ, ಜಾತಿಯತೇಯನ್ನು ಮೀರಿ ಬೆಳೆದಿದ್ದರು ಡಾ ಭೈರಪ್ಪನವರು. ಅದೇಷ್ಟು ಹೀಯಾಳಿಕೆ ಇದ್ದರೂ ಸಹ ಅವರಲ್ಲಿದ್ದ ಬರವಣಿಗೆಯ ಅಗಾಧ ಶಕ್ತಿ ಎಲ್ಲವನ್ನು ಮೀರಿಸಿ ಅವರನ್ನು ರಾಷ್ಟ್ರಮಟ್ಟಕ್ಕೆ ಬೆಳೆಸಿ ನಿಲ್ಲುವಲ್ಲಿ ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ.
ಅದ್ಯಾಗಿಯು ಆಗೀನ ಕಾಲದಲ್ಲಿ ಜಾತೀಯ ಭಾವನೆಗಳೂ ದಟ್ಟವಾಗಿದ್ದವು ಎಂದು ಭೈರಪ್ಪನವರು ತಮ್ಮ ಆತ್ಮಕಥೆಯಲ್ಲಿ ನೋವಿನಿಂದಲೇ ಪ್ರಸ್ತಾಪ ಮಾಡಿದ್ದಾರೆ. ಭೈರಪ್ಪ ಎಂಬ ಹೆಸರಿನ ಕಾರಣ ಕೆಲವು ಕಡೆ ನನಗೆ ಸಹಾಯವಾಗಿದೆ ಎಂದು ಅವರು ವಿಡಂಬನಾತ್ಮಕವಾಗಿ ವಿವರಿಸಿದ್ದಾರೆ.
ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಿಂದ ಗುಜರಾತವರೆಗೆ
ಮರಳಿ ಮೈಸೂರಿಗೆ ಬಂದ ಭೈರಪ್ಪನವರು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ, ಬಾಗೂರು, ನುಗ್ಗೆಹಳ್ಳಿ, ಗೊರೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರಿನ ಶಾರದ ವಿಲಾಸ ಹೈಸ್ಕೂಲಿನಲ್ಲಿ ಹತ್ತನೇ ತರಗತಿ ಪೂರೈಸಿದ ಭೈರಪ್ಪನವರು, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಬಿಎ ಆನಸ್೯ ಹಾಗೂ ತತ್ವಶಾಸ್ತ್ರದಲ್ಲಿಯೇ ಎಂಎ ಪದವಿಯನ್ನು ಎರಡು ಚಿನ್ನದ ಪದಕದೊಂದಿಗೆ ತಮ್ಮ ಮುಡಿಗೇರಿಸಿಕೊಂಡರು.
ಭೈರಪ್ಪನವರ ಮೊದ ವೃತ್ತಿ ಆರಂಭವಾಗಿದ್ದು ಉತ್ತರ ಕನಾ೯ಟಕದ ಗಂಡು ಮೆಟ್ಟಿನ ಸ್ಥಳ ಹುಬ್ಬಳ್ಳಿಯಲ್ಲಿ. ಇಲ್ಲಿಯ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರ ಉಪನ್ಯಾಸಕರಾಗಿ ಅವರು ಕಾಯ೯ನಿವ೯ಹಿಸಿದ್ದರು.

ಬಳಿಕ ಅವರು, ಗುಜರಾತಿನ ಆನಂದದಲ್ಲಿರುವ “ಸದಾ೯ರ ಪಟೇಲ್ ವಿದ್ಯಾಪೀಠಕ್ಕೆ” ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಉಪನ್ಯಾಸಕರಾಗಿ ಕತ೯ವ್ಯ ನಿವ೯ಹಿಸಲು ಅವಕಾಶ ಒದಗಿ ಬಂದಿತು.
ನಂತರ ಅಲ್ಲಿಂದ ಮರಳಿ ಮೈಸೂರಿಗೆ ಬಂದದ್ದು ಅಷ್ಟೇ ಕುತೂಹಲಕರ ಸಂಗತಿ. ಆದರೆ ಮೈಸೂರಿಗೆ ಬರುವ ಮುನ್ನ ಭೈರಪ್ಪನವರು ಎನ್ಸಿಇಆರ್ಟಿ ದೆಹಲಿ ಕೇಂದ್ರಕ್ಕೆ ನೇಮಕಗೊಂಡರು.
ದೆಹಲಿಯಲ್ಲಿದ್ದಾಗಲೇ ಅವರು ಭಾರತದ ಸಂಸ್ಕ್ರತಿ ಹಾಗೂ ಸಮಾಜವನ್ನು ದೀಘಾ೯ವಧಿ ಅಧ್ಯಯನ ಮಾಡಲು ಅನುಕೂಲವಾಯಿತು ಎಂದು ಭೈರಪ್ಪನವರು ತಮ್ಮ ಕೃತಿಗಳಲ್ಲಿ ಬರೆಯುತ್ತಾರೆ.
ಭೈರಪ್ಪ ಮೈಸೂರಿಗೆ ಬಂದ್ರೆ ಸಂತೋಷ-ದೇ.ಜ.ಗೌ

ಭೈರಪ್ಪನವರಿಗೆ ದೆಹಲಿಯಲ್ಲಿ ಇದ್ದರೂ ಕನ್ನಡದ ನೆಲಕ್ಕೆ ಬರಬೇಕು ಎಂಬ ಅವರ ತುಡಿತ ಮಾತ್ರ ಕೊಂಚವು ಕಮ್ಮಿಯಾಗಿರಲಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದ ಭೈರಪ್ಪನವರು , ಎನ್ಸಿಇಆರ್ಟಿ ನಿದೇ೯ಶಕರಾಗಿದ್ದ ಕನ್ನಡಿಗರೇ ಆಗಿದ್ದ ಅಯ್ಯ ಎಂಬುವವರಿಗೆ ತಮ್ಮನ್ನು ಮೈಸೂರಿಗೆ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದರು.
ಆಗ ಮೈಸೂರು ವಿಶ್ವವಿದ್ಯಾಲಯಕ್ಕೆ ದೇ ಜವರೇಗೌಡರು ಉಪಕುಲಪತಿಯಾಗಿದ್ದರು. ಮೈಸೂರು ವಿವಿ ಆಧೀನದಲ್ಲಿಯೇ ಬರುತ್ತಿದ್ದ ಮೈಸೂರಿನಲ್ಲಿದ್ದ ಎನ್ಸಿಇಆರ್ಟಿ ಸಂಸ್ಥೆಯ ಕಾಲೇಜು ಇತ್ತು.
ಅದಾಗಲೇ ಕಾದಂಬರಿಗಳಿಂದ ಪ್ರಸಿದ್ದರಾಗಿದ್ದ ಭೈರಪ್ಪನವರು ಇಲ್ಲಿಗೆ ಬರುತ್ತಾರೆ ಎಂದು ತಿಳಿದಾಗ ದೇ ಜವರೇಗೌಡರು, ಸಂತೋಷದಿಂದ ಒಪ್ಪಿಕೊಂಡರು ಎಂದು ಭೈರಪ್ಪನವರು ತಮ್ಮ ಅನೇಕ ಬರಹ , ಭಾಷಣದಲ್ಲಿ ಸ್ಮರಿಸಿದ್ದಾರೆ.
ತಾವು ಕಲಿತ ಊರಿನಲ್ಲಿಯೇ ವೃತ್ತಿ ಜೀವನದ ಮಹತ್ವದ ಘಟ್ಟವನ್ನು ಕಳೆದು ಇಲ್ಲಿಯೇ ನಿವೃತ್ತಿಯಾದರು.
ಅತಿ ಹೆಚ್ಚು ಅನುವಾದ ಮತ್ತು ಮರುಮುದ್ರಣ
ಈಗೀನ ಕಾಲದಲ್ಲಿ ಕನ್ನಡದಲ್ಲಿಯೇ ಒದುವುದು ವಿರಳವಾಗಿರುವಾಗ ಬೇರೆ ಭಾಷೆಗಳಲ್ಲಿ ಅನುವಾದಗೊಂಡ ಕೃತಿಗಳು ಅಂದರೇ ಅದು ಭೈರಪ್ಪನವರ ಬರವಣಿಗೆಯ ಹಿಂದಿನ ಶಕ್ತಿ ಹೇಗಿದೆ ಎಂಬುದನ್ನು ಊಹಿಸಲು ಅಸಾಧ್ಯ.
ಇಂಗ್ಲೀಷ್, ಹಿಂದಿ, ಉದು೯ ಸೇರಿದಂತೇ ಹಲವಾರು ಭಾಷೆಗಳಿಗೆ ಅವರ ಬಹುತೇಕ ಎಲ್ಲ ಕೃತಿಗಳು ಅನುವಾದಗೊಂಡಿವೆ.
ಅವರ ಇತ್ತೀಚಿನ ಕಾದಂಬರಿ “ಪವ೯” ರಷ್ಯಾ ಹಾಗೂ ಚೀನಿ ಭಾಷೆಗಳಿಗೆ ಅನುವಾದಗೊಂಡಿದೆ. ಈ ಒಂದು ವಿಷಯದಲ್ಲಿ ಕನ್ನಡದ ಯಾವ ಲೇಖಕರು ಈ ಸಾಧನೆಯನ್ನು ಮಾಡಲಾಗಿಲ್ಲ ಎಂಬುದನ್ನು ಒಪ್ಪಲೇಬೇಕು ಆ ಮಟ್ಟಕ್ಕೆ ಭೈರಪ್ಪನವರ ಛಾಪು ಮುಂದುವರೆದಿದೆ.
ಭೈರಪ್ಪನವರ ಕಾದಂಬರಿ ಪ್ರಕಟವಾಗುತ್ತೇ ಎಂದರೇ ಇಡೀ ವಿಶ್ವವೇ ಕಾದು ನಿಲ್ಲುತ್ತೇ ಎಂದರೇ ಕನ್ನಡದ ಈ ಲೇಖಕನ ಸಾಧನೆ ಅದೇಷ್ಟು ಅಗಾಧ ಎತ್ತರಕ್ಕೆ ಬೆಳೆದಿತ್ತು ಎಂಬುದನ್ನು ನಾವು ಕಾಣಬಹುದಾಗಿದೆ.
ಭೈರಪ್ಪನವರ ಕಾದಂಬರಿಗಳಲ್ಲಿ ಮೊದಲ ದಿನವೇ ಎರಡು ಬಾರಿ ಮುದ್ರಣ ಕಂಡಿದ್ದು “ಯಾನ”. ಬಿಡುಗಡೆಯಾದ ದಿನವೇ “ಯಾನ” ಕಾದಂಬರಿ ಬರೋಬ್ಬರಿ 15ಸಾವಿರ ಪ್ರತಿಗಳು ಮಾರಾಟಗೊಂಡಿದ್ದನ್ನು ಈವರೆಗೆ ಈ ದಾಖಲೆ ಯಾರು ಮುರಿಯಲು ಸಾಧ್ಯವಾಗಿಲ್ಲ.
ಭೈರಪ್ಪನವರ “ಪವ೯” ಕಾದಂಬರಿ 36 ಬಾರಿ ಮರುಮುದ್ರಣಗೊಂಡು ದಾಖಲೆ ನಿಮಿ೯ಸಿದೆ.
ಸಂತೋಷ ಹಾಗೂ ಆಶ್ಚಯ೯ವೆಂದರೇ ಭೈರಪ್ಪನವರು ಬರೆದ ಎಲ್ಲ ಕಾದಂಬರಿಗಳು ಹಾಗೂ ಸಾಹಿತ್ಯ ವಿಮಶೆ೯ ಮಾಡಿದ ಎಲ್ಲವೂ ಹಲವು ಮುದ್ರಣ ಕಂಡಿದ್ದು ವಿಶೇಷ.
ಪ್ರಧಾನಿ ಮೋದಿ ಸಹಿತ ಹಲವರ ಶ್ರದ್ದಾಂಜಲಿ
ಭೈರಪ್ಪನವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ಯಪಡಿಸಿದ್ದಾರೆ. ಭೈರಪ್ಪನವರ ಅಗಾಧ ಸಾಧನೆಯನ್ನು ಮನಗಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಭೈರಪ್ಪನವರೊಂದಿಗೆ ನೇರ ಸಂಪಕ೯ದಲ್ಲಿದ್ದರು.
ಭೈರಪ್ಪನವರ ನಿಧನದಿಂದ ಇಡೀ ಭಾರತವೇ ಒಬ್ಬ ಅಗಾಧ ಸಾಧಕನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಇನ್ನು ಸಿಎಂ ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಮ್ಮ ಊರಿನವರೇ ಆದ ಮಹಾನ ಸಾಧಕನ ನಿಧನವು ಅತೀವ ನೋವು ತಂದಿದೆ ಎಂದು ಹೇಳಿದ್ದಾರೆ. ಭೈರಪ್ಪನವರ ನಿಧನವು ಕನ್ನಡ ಸಾಹಿತ್ಯ ಲೋಕವನ್ನು ಬಡವಾಗಿಸಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು
ನ್ಯೂಇಂಡಿಯಾ ಕನ್ನಡ
ಬೆಂಗಳೂರು


