Bengaluru UrbanDistrictKarnataka

ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ-2025-26ರ ಸಾಲಿಗೆ 31 ಶಿಕ್ಷಕರು ಆಯ್ಕೆ-ಸಕಾ೯ರದಿಂದ ಅಧಿಸೂಚನೆ

ಪ್ರಶಸ್ತಿ ಪಡೆದ ಸಾಧಕರಿಗೆ ಪ್ರಶಸ್ತಿ ಫಲಕ ಹಾಗು ೨೫ ಸಾವಿರ ರೂ ನಗದು ಪುರಸ್ಕಾರ ನೀಡಲಾಗುತ್ತದೆ.

ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ ೨೦ ಶಿಕ್ಷಕರು ಹಾಗು ಪ್ರೌಢಶಾಲಾ ವಿಭಾಗದಿಂದ ೧೧ ಜನರನ್ನು ೨೦೨೫ -೨೬ ನೇ ಸಾಲಿಗೆ ಆಯ್ಕೆ ಮಾಡಿ, ರಾಜ್ಯ ಸಕಾ೯ರ ಇಂದು ಅಧಿಸೂಚನೆ ಹೊರಡಿಸಿದೆ.

ಈ ಕುರಿತು ಹೊರಡಿಸಿರುವ ಅಧಿಸೂಚನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಧೀನ ಕಾಯ೯ದಶಿ೯ ಶ್ರೀಮತಿ ವಿದ್ಯಾ ಹೆಚ್‌ ಪೈ, ಪ್ರಶಸ್ತಿ ಪಡೆದ ಸಾಧಕರಿಗೆ ಪ್ರಶಸ್ತಿ ಫಲಕ ಹಾಗು ೨೫ ಸಾವಿರ ರೂ ನಗದು ಪುರಸ್ಕಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪಡೆದ ಮಹನಿಯರಲ್ಲಿ ಚಂದ್ರನಾರಾಯಣ ಬಿಲ್ಲವ, ಎಸ್‌ ಬಿ ಶಿವಣ್ಣ , ಎಂ ಹರೀಶ್‌ಕುಮಾರ್‌, ಎಚ್‌ ಆರ್ ಗೋವಿಂದ್‌ರಾಜ್‌, ಜಗದೀಶ್‌ ಶೆಟ್ಟಿ, ಟಿ ರಾಮಚಂದ್ರಪ್ಪ, ಮಹಾಂತೇಶ ಮೇಟಿ, ಶ್ರೀಮತಿ ಎಸ್‌ ಜಿ ಮಡಿವಾಳಮ್ಮ, ವೈ ಇ ಲೋಹಿತೇಶ್‌, ಜಿ ಮಂಜುನಾಥ್‌ ಸೇರಿದಂತೆ ಒಟ್ಟು ೩೧ ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

Back to top button