Followup Story-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ2025-ಶಿಕ್ಷಕರಿಗೆ 20ಸಾವಿರ, ಆಶೆಯರಿಗೆ ಬರೀ 2ಸಾವಿರ ರೂ.-ಬಹಿಷ್ಕಾರದ ಹಾದಿ ಹಿಡಿದ ಆಶಾ ಕಾಯ೯ಕತೆ೯ಯರು
ರಾಜ್ಯ ಸಕಾ೯ರ ಬುಧವಾರದಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಆಶಾ ಕಾಯ೯ಕತೆ೯ಯರಿಗೆ ಕೇವಲ ಎರಡು ಸಾವಿರ ರೂ ಮಾತ್ರ ಗೌರವ ಧನ ಅಂತ ಘೋಷಣೆ ಮಾಡಿದೆ. ಇದರಿಂದ ರೊಚ್ಚಿಗೆದ್ದಿರುವ ಆಶಾ ಕಾಯ೯ಕತೆ೯ಯರು, ನಾವು ಸಮೀಕ್ಷಾ ಕಾಯ೯ದಲ್ಲಿ ಸುತಾರಾಂ ಭಾಗವಹಿಸುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ…ಈ ಗಾದೆ ಮಾತಿನ ಕೊನೆಯಲ್ಲಿ ಬರುವ ಕಣ್ಣಿಗೆ ಸುಣ್ಣದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ರಾಜ್ಯದ ಆಶಾ ಕಾಯ೯ಕತೆ೯ಯರು..ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವ ರಾಜ್ಯ ಸಕಾ೯ರವು, ಬರೋಬ್ಬರಿ.. 420 ಕೋಟಿರೂ. ಹಣ ಖಚು೯ ಮಾಡುತ್ತೇವೆ, ಇನ್ನು ಬೇಕೆಂದರೇ ಮಾಡ್ತೀವಿ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಆದರೆ ಸಮೀಕ್ಷೆಯ ಬಹುತೇಕ ಕೆಲಸದ ಜವಾಬ್ದಾರಿ ಇರುವ ಆಶಾ ಕಾಯ೯ಕತೆ೯ಯರಿಗೆ ಮಾತ್ರ ಬರೀ ಎರಡು ಸಾವಿರ ರೂ ಮಾತ್ರ ನೀಡುವದಾಗಿ ಹೇಳಿದ್ದು, ಈಗ ಆಶಾ ಕಾಯ೯ಕತೆ೯ಯರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಕರಿಗೆ 20ಸಾವಿರ ರೂ. ಆಶೆಯರಿಗೆ ಬರೀ 2ಸಾವಿರ ರೂ.
ಸಮೀಕ್ಷೆಗೆ ಬರುವ ಶಿಕ್ಷಕರಿಗೆ 325 ಕೋಟಿ ರೂ.ಖಚು೯
ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ದೊಡ್ಡ ಮೊತ್ತದ ಆಫರ್ ನೀಡಲಾಗಿದೆ. ಇನ್ನು ದಸರಾ ರಜೆಯಲ್ಲಿ ಕೆಲಸ ಮಾಡುವದರಿಂದ ಆ ದಿನದ ಪಗಾರ ಸಹ ಅವರಿಗೆ ದೊರೆಯಲಿದೆ. ಒಟ್ಟು 1.75 ಲಕ್ಷ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ ಮತ್ತು ಅವರಿಗೆ ರೂ.20 ಸಾವಿರವರೆಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಸಕಾ೯ರ ಪ್ರಕಟಿಸಿದೆ.

ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ರಾಜ್ಯ ಸಕಾ೯ರ ನಿಗದಿಪಡಿಸಿದೆ. ರಾಜ್ಯ ಸಕಾ೯ರವೇ ಹೇಳಿರುವ ಪ್ರಕಾರ, ಒಟ್ಟು ಶಿಕ್ಷಕರ ಸಂಭಾವನೆಗೆ ರೂ. 325 ಕೋಟಿ ವೆಚ್ಚವಾಗಲಿದ್ದರೇ, ಒಟ್ಟಾರೆ ಸಮೀಕ್ಷೆ ಕಾರ್ಯದ ಖಚಿ೯ಗಾಗಿ ತಾತ್ಕಾಲಿಕವಾಗಿ ರೂ.420 ಕೋಟಿ ನಿಗದಿಪಡಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಲ್ಲಿ ವಿಚಿತ್ರ ಎಂದರೇ, ಶಿಕ್ಷಕರಿಗಿಂತ ಕೊಂಚ ಜಾಸ್ತಿನೇ ಕೆಲಸ ಮಾಡಲಿರುವ ಆಶಾ ಕಾಯ೯ಕತೆ೯ಯರಿಗೆ ಮಾತ್ರ ಕೇವಲ ಎರಡು ಸಾವಿರ ರೂ ಗೌರವಧನ ನಿಗದಿ ಮಾಡಿದೆ. ಸಕಾ೯ರದ ಈ ಕ್ರಮ ಅವೈಜ್ಞಾನಿಕವಾಗಿದೆ ಎಂಬುದು ಆಶಾ ಕಾಯ೯ಕತೆ೯ಯರ ಆರೋಪವಾಗಿದೆ.

ಎರಡು ದಿನದ ಮೊದಲೇ, ಸಮೀಕ್ಷಾ ಕಾಯ೯ ಬಹಿಷ್ಕರಿಸುವದಾಗಿ ಹೇಳಿರುವ ಆಶಾ ಕಾಯ೯ಕತೆ೯ಯರು, ಸಕಾ೯ರ ಕೊಂಚ ಮಣಿದು ಗೌರವ ಧನ ಹೆಚ್ಚು ಮಾಡುತ್ತಾರೆ ಎಂದು ನಂಬಿಕೊಂಡಿದ್ದರು.
ಸಮೀಕ್ಷಾ ಕಾಯ೯ದಲ್ಲಿ ಭಾಗವಹಿಸುವದಿಲ್ಲ
ಆಶಾ ಕಾಯ೯ಕತೆ೯ಯರ ಪಟ್ಟು-ಡಿ ನಾಗಲಕ್ಷ್ಮೀ

ರಾಜ್ಯ ಸಕಾ೯ರ ಬುಧವಾರದಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಆಶಾ ಕಾಯ೯ಕತೆ೯ಯರಿಗೆ ಕೇವಲ ಎರಡು ಸಾವಿರ ರೂ ಮಾತ್ರ ಗೌರವ ಧನ ಅಂತ ಘೋಷಣೆ ಮಾಡಿದೆ.
ಇದರಿಂದ ರೊಚ್ಚಿಗೆದ್ದಿರುವ ಆಶಾ ಕಾಯ೯ಕತೆ೯ಯರು, ನಾವು ಸಮೀಕ್ಷಾ ಕಾಯ೯ದಲ್ಲಿ ಸುತಾರಾಂ ಭಾಗವಹಿಸುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.


ಜಾತಿ ಸಮೀಕ್ಷೆ ವೇಳೆ ಜಾಗೃತಿ ಅಪ್ಲಿಕೇಶನ್ನಲ್ಲಿ ವಿವರಗಳನ್ನ ದಾಖಲಿಸಿ ಅಪ್ಲೋಡ್ ಮಾಡಿದರೆ ಮಾತ್ರ ಹಣ ನೀಡುವುದಾಗಿ ರಾಜ್ಯ ಹಿಂದುಳಿದ ವಗ೯ಗಳ ಆಯೋಗ ತಿಳಿಸಿದೆ. ಹಲವರ ಬಳಿ ಮೊಬೈಲ್ಗಳೇ ಇಲ್ಲ. ಇಂಟರ್ನೆಟ್ ಸಿಮ್ , ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಸೇರಿದಂತೆ ತೊಂದರೆಗಳ ತಾಂತ್ರಿಕ ಸಮಸ್ಯೆಗಳ ಆಗರವೇ ಇದೆ.

ಹೀಗಾಗಿ ನಮಗೂ ಸಹ ಹೆಚ್ಚಿನ ಗೌರವ ಧನ ನೀಡಬೇಕು ಹಾಗೂ ಈ ಹಿಂದಿನ ಸಮೀಕ್ಷೆಗಳ ಬಾಕಿ ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ಸಮೀಕ್ಷಾ ಕಾಯ೯ ಬಹಿಷ್ಕರಿಸುವುದು ಖಚಿತ ಎಂದು ಆಶಾ ಸಂಯುಕ್ತ ಕಾರ್ಯಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ ನಾಗಲಕ್ಷ್ಮೀ ಅವರು ನ್ಯೂ ಇಂಡಿಯಾ ಕನ್ನಡಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದಶ೯ನದಲ್ಲಿ ತಿಳಿಸಿದ್ದಾರೆ.

ಒಟ್ಟಾರೇ, ರಾಜ್ಯದ ಏಳು ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಮಾಡಲಾಗುವುದು ಎಂದು ಪ್ರಕಟಿಸಿರುವ ರಾಜ್ಯ ಸಕಾ೯ರ ಅದ್ಹೇಗೆ ಅಷ್ಟು ಕಡಿಮೆ ದಿನಗಳಲ್ಲಿ ಮುಗಿಸುತ್ತಾರೆ ಎಂಬುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಇದರ ಮಧ್ಯೆ ಆಶಾ ಕಾಯ೯ಕತೆ೯ಯರು ಬಹಿಷ್ಕಾರ ಮಾಡ್ತೀನಿ ಅಂದಿದ್ದಾರೆ. ಸಮೀಕ್ಷೆ ಮೂಲಕ ಅಸಮಾನತೆಯನ್ನು ಹೋಗಲಾಡಿಸುತ್ತೇನೆ ಎನ್ನುವ ಸಿಎಂ ಸಿದ್ದರಾಮಯ್ಯ, ಅದ್ಹೇಗೆ ಈ ಸಮಸ್ಯೆಯನ್ನು ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ


