ಹೋಟೆಲ್ ಕಾರ್ಮಿಕನ ಮೇಲೆ ಪೊಲೀಸರಿಂದ ಥಳಿತ|ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ|ಎಸ್.ಐ. ನಾರಾಯಣ್ ಮೇಲೆ ಕ್ರಮಕ್ಕೆ ಸಚಿವ ಸಂತೋಷ್ ಲಾಡ್ ಸೂಚನೆ!
ಕಾನೂನುಬಾಹಿರ ಚಟುವಟಿಕೆಗಳು ಶಿವಮೊಗ್ಗದಲ್ಲಿ ನಡೆಯುತ್ತಿದ್ದರೂ ಅದನ್ನು ತಹಬಂದಿಗೆ ತರದ ಪೊಲೀಸರು, ಒಬ್ಬ ಬಡ ಕಾರ್ಮಿಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದು ಜಿಲ್ಲಾ ಯುವಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.

ಶಿವಮೊಗ್ಗ : ಹೋಟೆಲ್‌ವೊಂದರ ಕಾರ್ಮಿಕನ ಮೇಲೆ ದೊಡ್ಡಪೇಟೆ ಪೊಲೀಸ ಠಾಣೆ ಎಸ್.ಐ. ನಾರಾಯಣ ಮಧುಗಿರಿ ಹಾಗು ಸಿಬ್ಬಂದಿ, ಏಕಾಏಕಿ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಹೊಟೇಲ್ ಕಾರ್ಮಿಕನನ್ನು ಅಮಾನವೀಯವಾಗಿ ಥಳಿಸಿದ ಎಸ್.ಐ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ಬಸ್ ನಿಲ್ದಾಣದ ಬಳಿ|
ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ|
ವೈರಲ್ ವಿಡಿಯೋದಲ್ಲಿ ಏನಿದೆ?
ಸಿಸಿಟಿವಿ ದೃಶ್ಯಾವಳಿ ಪ್ರಕಾರ, ಪ್ರತಿದಿನದಂತೇ ಯಥಾಪ್ರಕಾರ ರಾತ್ರಿ ಡ್ಯೂಟಿಯಲ್ಲಿದ್ದ ದೊಡ್ಡಪೇಟೆ ಠಾಣೆ ಪೊಲೀಸರು ಶನಿವಾರದಂದು ಶಿವಮೊಗ್ಗ ಬಸ್‌ನಿಲ್ದಾಣದ ಎದುರು ಇರುವ ಹೋಟೆಲ್ ಆಗಮಿಸುತ್ತಾರೆ.
ತಡರಾತ್ರಿವರೆಗೆ ಹೊಟೇಲ್ ಬಂದ್ ಮಾಡದೇ ಇರುವದರ ಬಗ್ಗೆ ಆರಂಭದಲ್ಲಿ ಮಾತನಾಡುವ ದೃಶ್ಯ ಕಾಣುತ್ತದೆ. ಬಳಿಕ ಏಕಾಏಕಿ ಹೊಟೇಲ್ ಬಾಗಿಲು ಪಕ್ಕ ನಿಂತಿದ್ದ ವ್ಯಕ್ತಿ ಮೇಲೆ ಪೊಲೀಸ್‌ರೊಬ್ಬರು ಕಪಾಳಕ್ಕೆ ಎರಡು ಬಾರಿ ಹೊಡೆಯುತ್ತಾರೆ.
ಪಕ್ಕದಲ್ಲಿದ್ದ ಇನ್ನೋರ್ವ ಪೊಲೀಸ್ ಸಿಬ್ಬಂದಿಯು ಲಾಠಿಯಿಂದ ಹೊಡೆಯುತ್ತಾರೆ. ನಂತರ ಪೊಲೀಸರು ಬಹುಶಃ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದ್ದಾರೆ. ಇದಿಷ್ಟು ವೈರಲ್ ಆಗಿರುವ ವಿಡಿಯೋದಲ್ಲಿದೆ.
ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಿ
ಯುವಕಾಂಗ್ರೆಸ್ನಿಂದ ಪ್ರತಿಭಟನೆ

ಕಾನೂನುಬಾಹಿರ ಚಟುವಟಿಕೆಗಳು ಶಿವಮೊಗ್ಗದಲ್ಲಿ ನಡೆಯುತ್ತಿದ್ದರೂ ಅದನ್ನು ತಹಬಂದಿಗೆ ತರದ ಪೊಲೀಸರು, ಒಬ್ಬ ಬಡ ಕಾರ್ಮಿಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದು ಜಿಲ್ಲಾ ಯುವಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.
ಹೊಟ್ಟೆಪಾಡಿಗೆ ದುಡಿಯಲು ಪರ ಊರಿನಿಂದ ಬಂದಿದ್ದ ಕಾರ್ಮಿಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ಅಮಾನವೀಯ.
ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿ ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾನೂನು ಬಾಹಿರ ಚಟುವಟಿಕೆಗಳಿಗೆ, ಗಾಂಜಾ,ಇಸ್ಪೀಟ್ ಜೂಜುಕೋರರಿಗೆ ಪೊಲೀಸರ ರಕ್ಷಣೆ ನೀಡುವ ಪೊಲೀಸರು ಬಡೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸಚಿವ ಸಂತೋಷ್ ಲಾಡ್ ಸೂಚನೆ!

ಕಾರ್ಮಿಕನ ಮೇಲೆ ಹಲ್ಲೆ ಪೊಲೀಸರು ನಡೆಸಿದ ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೇ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಘಟನೆಯ ಮಾಹಿತಿ ಪಡೆದಿದ್ದಾರೆ.
ಬಳಿಕ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಎಸ್ ಪಿ ಮಿಥುನ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತಾಡಿದ ಸಂತೋಷ್ ಲಾಡ್.
ಹಲ್ಲೆಗೊಳಗಾದ ಕಾರ್ಮಿಕನಿಗೆ ನ್ಯಾಯ ಒದಗಿಸಿ, ತಪ್ಪಿತಸ್ಥ ಎಸ್ ಐ ನಾರಾಯಣ ಮಧುಗಿರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಎಸ್ ಕುಮರೇಶ, ಶರತ್ ಮರಿಯಪ್ಪ, ರಂಗನಾಥ್, ಎಸ್ ಜೆ ಮಿಥುನ್ ಕಿರಣ್ ಇದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







