EducationKarnataka

1ನೇ ತರಗತಿ ಪ್ರವೇಶಕ್ಕೆ 6 ವರುಷ ಕಡ್ಡಾಯವಿಲ್ಲ|ಎರಡು ತಿಂಗಳು ಸಡಿಲಿಕೆ-ಶೀಘ್ರವೇ ಹೊಸ ಕಾನೂನು|ಪೋಷಕರಲ್ಲಿ ಮಂದಹಾಸ ಮೂಡಿಸಿದ ಸಚಿವ ಮಧು ಬಂಗಾರಪ್ಪ ನಿರ್ಧಾರ

ಒಂದನೇ ತರಗತಿ ಪ್ರವೇಶಕ್ಕೆ ಆರು ವರಷ ಕಡ್ಡಾಯ ಎಂಬ ನೀತಿಯಿಂದ, ಒಂದೆರಡು ತಿಂಗಳ ವಯಸ್ಸಿನ ಅಂತರದಿಂದ ಇಡೀ ಒಂದು ವರುಷ ಶಿಕ್ಷಣದಿಂದ ವಂಚಿತರಾಗುವ ಪೋಷಕರ ಆತಂಕವನ್ನು ರಾಜ್ಯ ಸರ್ಕಾರ ದೂರ ಮಾಡಿದೆ.

ಬೆಂಗಳೂರು: ಒಂದನೆಯ ತರಗತಿಗೆ ಸೇರಿಸಲು ವಯಸ್ಸಿನ ಮಿತಿಯಿಂದಾಗಿ ಆತಂಕದಲ್ಲಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ಎಂಬ ನಿಯಮದಲ್ಲಿ 2 ತಿಂಗಳು ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

2026-27ರ ಶೈಕ್ಷಣಿಕ ಸಾಲಿಗೆ ಈ ವಿನಾಯಿತಿ ಇರಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅದೇ ರೀತಿ ಎಲ್.ಕೆ.ಜಿ ಹಾಗು ಯು.ಕೆ.ಜಿಗೂ ಸಹ ಹೊಸ ನೀತಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಒಂದನೇ ತರಗತಿ ಪ್ರವೇಶಕ್ಕೆ ಆರು ವರಷ ಕಡ್ಡಾಯ ಎಂಬ ನೀತಿಯಿಂದ, ಒಂದೆರಡು ತಿಂಗಳ ವಯಸ್ಸಿನ ಅಂತರದಿಂದ ಇಡೀ ಒಂದು ವರುಷ ಶಿಕ್ಷಣದಿಂದ ವಂಚಿತರಾಗುವ ಪೋಷಕರ ಆತಂಕವನ್ನು ರಾಜ್ಯ ಸರ್ಕಾರ ದೂರ ಮಾಡಿದೆ.

ಗುರುವಾರದಂದು ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಯೋಮಿತಿ ನಿಯಮ ಸಡಿಲಿಕೆ ವಿಚಾರ ಪ್ರಸ್ತಾಪಿಸಿದ ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಪೋಷಕರಿಂದ ಪ್ರತೀವರ್ಷ ನಿಯಮ ರಿಯಾಯಿತಿ ಬೇಡಿಕೆ ಒತ್ತಾಯ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿ ಪ್ರವೇಶಕ್ಕೆ 60 ದಿನಗಳ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಿಸಿದರು. 60 ದಿನಗಳ ವಯೋಮಿತಿ ವಿನಾಯಿತಿಯು ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳ ದಾಖಲಾತಿಗೂ ಅನ್ವಯವಾಗಲಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸೂಕ್ತ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದರಿಂದ ಆಗಿಂದಾಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ.

ಪ್ರತಿ ವರ್ಷ ಸುತ್ತೋಲೆ ಹೊರಡಿಸುವ ಬದಲು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಶೀಘ್ರದಲ್ಲೇ ಹೊಸ ನಿಯಮಾವಳಿ ಹಾಗೂ ಕಾನೂನನ್ನು ರೂಪಿಸಿ ಸದನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಮಕ್ಕಳ ದಾಖಲಾತಿ ವಿಚಾರದಲ್ಲಿ ಪೋಷಕರು ಗಾಬರಿಗೊಂಡು ಶಾಲೆಯಿಂದ ಶಾಲೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂದಿನಿಂದಲೇ ಅನ್ವಯವಾಗುವಂತೆ ಈ 60 ದಿನಗಳ ವಿನಾಯಿತಿಯನ್ನು ನೀಡಲಾಗಿದೆ.

ಪೋಷಕರು ಇನ್ನು ಮುಂದೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅಭಯ ನೀಡಿದರು.

ಒಟ್ಟಾರೆ 1 ನೇ ತರಗತಿ ಪ್ರವೇಶಾತಿಗೆ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ ಆದೇಶವು ಪೋಷಕರು ನಿಟ್ಟುಸಿರುಬಿಡುವಂತೆ ಮಾಡಿದೆ.

Follow Us

Leave a Reply

Your email address will not be published. Required fields are marked *

Back to top button