CrimeNationalSpecial Stories

ಆಪ್‌ ಶಾಸಕನ ಮೇಲೆ ಆತ್ಯಾಚಾರ ಆರೋಪ ಪೋಲಿಸರ ಮೇಲೆ ಗುಂಡು ಹಾರಿಸಿ ಪರಾರಿ

ಶಾಸಕ ಹಮಿ೯ತ್‌ಸಿಂಗ್‌ ಪಠಾಣಮಜ್ರಾ 2013 ರಿಂದ ತನ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು 45 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸೋಮವಾರ ತಡರಾತ್ರಿ ಪಟಿಯಾಲಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪಠಾಣಮಜ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಆತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧಿಸಲಾಗಿದ್ದ ಪಂಜಾಬ್‌ ರಾಜ್ಯದ ಆಡಳಿತ ಎಎಪಿ ಪಕ್ಷದ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಪೋಲಿಸರ ಮೇಲೆ ಗುಂಡು ಹಾರಿಸಿ ಪರಾರಿಯಾದ ಘಟನೆ ಹರಿಯಾಣದ ಕನಾ೯ಲ್‌ ದಾಬ್ರಿ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಪೊಲೀಸ್‌ರ ತಂಡವೊಂದು ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ದಾಬ್ರಿ ಗ್ರಾಮದಲ್ಲಿನ ಮನೆಯೊಂದರಿಂದ ಅವರನ್ನು ಬಂಧಿಸಿ , ಠಾಣೆಗೆ ಕರೆದ್ಯೊಯುವಾಗ ಮಾಗ೯ ಮಧ್ಯದಲ್ಲಿ ಎರಡು ವಾಹನಗಳಲ್ಲಿ ಬಂದ ಶಾಸಕರ ಬೆಂಬಲಿಗರು ಮತ್ತು ಗ್ರಾಮಸ್ಥರು ವಾಹನಗಳನ್ನು ಅಡ್ಡಗಟ್ಟಿದ್ದಾರೆ.

ಈ ವೇಳೆ ಪೋಲಿಸರ ಮೇಲೆ ಗುಂಡು ಹಾರಿಸಿ, ಕಲ್ಲು ತೂರಾಟ ನಡೆಸಿ, ಶಾಸಕರ ಹಿಂಬಾಲಕರು ಕೊನೆಗೆ ತಮ್ಮ ನಾಯಕನನ್ನು ಬಿಡಿಸಿಕೊಳ್ಳಲು ಪೋಲಿಸರ ಮೇಲೆ ಸತತ ಗುಂಡಿನ ದಾಳಿ ನಡೆಸಿ, ಶಾಸಕರನ್ನು ಅಲ್ಲಿಂದ ಪರಾರಿ ಮಾಡುವಲ್ಲಿ ಯಶಸ್ವಿಯಾದರು ಎಂದು ಪಟಿಯಾಲ ಸಿಪಿಐ ಗಿಪ್ಪಿ ಬಾಜ್ವಾ ತಿಳಿಸಿದ್ದಾರೆ.

ಸದ್ಯ ಶಾಸಕ ಹಮಿ೯ತ್‌ಸಿಂಗ್‌ ಪಠಾಣಮಜ್ರಾ ಅವರ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 420 (ವಂಚನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸನೂರ್ ಶಾಸಕ ಹಮಿ೯ತ್‌ಸಿಂಗ್‌ ಪಠಾಣಮಜ್ರಾ ಬಂಧನದ ಹಿಂದೆ ಅವರದೇ ಪಕ್ಷದ ಸಕಾ೯ರವನ್ನು ಟೀಕಿಸಿದ್ದರ ಫಲ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ವತಃ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಆರೋಪಿಸಿದ್ದಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮದೇ ಸರ್ಕಾರ ಸಿದ್ಧತೆ ನಡೆಸಿಲ್ಲ ಎಂದು ಆರೋಪಿಸಿ ಸಾರ್ವಜನಿಕವಾಗಿ ಮಾತನಾಡಿದ್ದರು. ರಾಜ್ಯವು ಪ್ರಸ್ತುತ ವಿನಾಶಕಾರಿ ಪ್ರವಾಹದಿಂದ ತತ್ತರಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

ಬಂಧನಕ್ಕೂ ಮುನ್ನ ಮಂಗಳವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ, ಶಾಸಕ ಪಠಾಣಮಜ್ರ, ತಮ್ಮ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ.

ಆಪ್‌ನ “ದೆಹಲಿ ತಂಡದ” ವಿರುದ್ಧ ದಂಗೆಯ ಬಾವುಟ ಹಾರಿಸಿದ್ದು, ” ದಿಲ್ಲಿವಾಲಾಸ್ ” ವಿರುದ್ಧ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರು.

ಶಾಸಕರ ಬೆಂಬಲದೊಂದಿಗೆ ದೆಹಲಿಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ದಂಗೆಯನ್ನು ಪ್ರಾರಂಭಿಸುವಂತೆ ಅವರು ಮಾನ್ ಅವರನ್ನು ಕೇಳಿಕೊಂಡಿದ್ದು ದೆಹಲಿ ಆಪ್‌ ನಾಯಕರ ಸಿಟ್ಟಿಗೆಳುವುಂತೆ ಮಾಡಿದ್ದರ ಫಲವಾಗಿ ಮೂರು ವರುಷದ ಹಿಂದಿನ ಪ್ರಕರಣದಲ್ಲಿ ತಮ್ಮನ್ನುಸಿಲುಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಷಯವು ಈಗಾಗಲೇ ಹೈಕೋರ್ಟ್‌ನಲ್ಲಿದೆ ಮತ್ತು ಮಹಿಳೆಯ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪಠಣಮಜ್ರಾ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅಲವತ್ತುಕೊಂಡಿದ್ದಾರೆ.

ಈ ಮಧ್ಯೆ ಶಾಸಕ ಪಠಾಣ್‌ಮಜ್ರಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನುಪಂಜಾಬ್‌ ಸಕಾ೯ರ ವಾಪಸು ಪಡೆದಿದೆ. ಬಿಹಾರ ಶಾಲಾ ಪರೀಕ್ಷಾ ಮಂಡಳಿಯಿಂದ ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ಶಾಸಕ ಪಠಣಮಜ್ರಾ, ಶಿರೋಮಣಿ ಅಕಾಲಿ ದಳದ ಹರಿಂದರ್ ಪಾಲ್ ಸಿಂಗ್ ಚಂದಮಜ್ರಾ ಅವರನ್ನು ಕಳೆದ ಚುನಾವಣೆಯಲ್ಲಿ ಸುಮಾರು 50,000 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಚುನಾಯಿತರಾಗಿದ್ದರು.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button