Education

10ನೇ ತರಗತಿ ಹಿಂದಿ ಪರೀಕ್ಷೆ ಮಾರ್ಚ್‌ 31ಕ್ಕೆ ಮುಂದೂಡಿಕೆ|ಪರೀಕ್ಷಾ ಕೇಂದ್ರಗಳಿಗೆ ಕನ್ನಡಪರ ಸಂಘಟನೆಗಳಿಂದ ಮುತ್ತಿಗೆ ಸಾಧ್ಯತೆ?

ಮಹಾವೀರ ಜಯಂತಿ ಸಾರ್ವತ್ರಿಕ ರಜೆಯನ್ನು ಮಂಗಳವಾರದ ಬದಲು ಸೋಮವಾರಕ್ಕೆ ಮಾರ್ಪಡಿಸಿದೆ.

ಬೆಂಗಳೂರು: ಎಸ್.ಎಸ್‌.ಎಲ್.ಸಿ ಪರೀಕ್ಷಾ ವೇಳಾಪಟ್ಟಿಯಂತೆ ಮಾರ್ಚ್‌ ೩೦ ರಂದು ಸೋಮವಾರ ನಡೆಯಬೇಕಿದ್ದ ತೃತೀಯ ಭಾಷೆ ಹಿಂದಿ ಪರೀಕ್ಷೆ ಮಾರ್ಚ್‌ 31, ಮಂಗಳವಾರದಂದು ಮುಂದೂಡಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.

ಮಹಾವೀರ ಜಯಂತಿ ಸಾರ್ವತ್ರಿಕ ರಜೆಯನ್ನು ಮಂಗಳವಾರದ ಬದಲು ಸೋಮವಾರಕ್ಕೆ ಮಾರ್ಪಡಿಸಿದೆ.

ಈ ಮಧ್ಯೆ ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆ ವಿರೋಧಿಸಿ, ಎಸ್.ಎಸ್‌.ಎಲ್.ಸಿ ಯಲ್ಲಿ ಹಿಂದಿ ವಿಷಯದ ಪರೀಕ್ಷೆ ರದ್ದು ಪಡಿಸುವಂತೆ ಆಗ್ರಹಿಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದ್ದವು.

ಈ ಮಧ್ಯೆ ಶಾಲಾ ಪರೀಕ್ಷಾ ಮೌಲ್ಯನಿರ್ಣಯ ಮಂಡಳಿಯು ಪೊಲೀಸ್ ಇಲಾಖೆಗೆ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ನೀಡಲು ಮನವಿ ಸಲ್ಲಿಸಿದೆ.

Follow Us

Leave a Reply

Your email address will not be published. Required fields are marked *

Back to top button