EducationKarnataka

ಎಸ್.ಎಸ್‌.ಎಲ್‌.ಸಿ ತೃತೀಯ ಭಾಷೆಗೆ ಗ್ರೇಡಿಂಗ್‌ ವ್ಯವಸ್ಥೆ|ಸರ್ಕಾರದ ನಿರ್ಧಾರದ ವಿರುದ್ಧ ಶಿಕ್ಷಣ ತಜ್ಞರ ಆಕ್ರೋಶ|ನ್ಯೂ ಇಂಡಿಯಾ ಕನ್ನಡದಿಂದ ಅಭಿಯಾನ

ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡ ಉಳಿಸೋ ನಿಲುವೆಂಬ ಸರ್ಕಾರದ ಸಮರ್ಥನೆ ಹಿಂದೆ ಕನ್ನಡ ಶಾಲೆಗಳೇ ಮುಚ್ಚುವ ಮತ್ತೊಂದು ಮುಖದ ಬಗ್ಗೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದ ಜನರ ಅಭಿಪ್ರಾಯಗಳ ವಿಶೇಷ ಸರಣಿ ವರದಿಗಳನ್ನು ನ್ಯೂ ಇಂಡಿಯಾ ಕನ್ನಡ ಪ್ರಕಟಿಸಲಿದೆ.

ಎಸ್.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆ‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸರ್ಕಾರದ ನಿಲುವಿಗೆ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಪರೀಕ್ಷಾ ಸಮಯದಲ್ಲಿ ಇಂತಹ ಏಕಪಕ್ಷೀಯ ನಿರ್ಧಾರ ಗೊಂದಲಕ್ಕೆ ನೂಕಿದ್ದು ಮಾತ್ರವಲ್ಲ ಕನ್ನಡಕ್ಕೆ ಪ್ರಾಧಾನ್ಯತೆ ಹೆಸರಲ್ಲಿ ತೃತೀಯ ಭಾಷೆ ಕನ್ನಡ ಓದುವ ಮಕ್ಕಳಿಗೆ, ಉತ್ತಮ ಅಂಕ ಗಳಿಕೆ ಕನಸಿಗೆ ದೊಡ್ಡಕೊಳ್ಳಿ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರ್ಕಾರದ ನಿಲುವಿನಿಂದಾಗುವ ಅನಾಹುತಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಒಕ್ಕೂಟವು ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದೆ.

ತೃತೀಯ ಭಾಷೆಗಳಿಗೆ ಗ್ರೇಡಿಂಗ್‌ ನೀಡುವ ಕುರಿತು ಸರ್ಕಾರದ ತೀರ್ಮಾನವು, ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವ ಹಾಗೂ ತೃತೀಯ ಭಾಷೆ ಕನ್ನಡ ಆಯ್ಕೆ ಮಾಡಿದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಉಂಟಾಗಿದೆ ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಎಸ್.ಎಸ್‌.ಎಲ್‌.ಸಿಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಶಿಕ್ಷಣ ತಜ್ಞರ ಸಲಹೆ ಪಡೆಯದೇ ಕೇವಲ ಒಂದು ವರ್ಗದ ಒತ್ತಾಯಕ್ಕೆ ಮಣಿದು ಏಕಪಕ್ಷೀಯ ನಿರ್ಧಾರ ಪ್ರಕಟಿಸಿರುವುದು, ವಿದ್ಯಾರ್ಥಿಗಳ ಹಿತಕ್ಕೆ ಮಾರಕ, ಇಡೀ ಶಿಕ್ಷಣ ವ್ಯವಸ್ಥೆಯ ಆತ್ಮಹತ್ಯೆಗೆ ಸಮ ಎಂದು ಒಕ್ಕೂಟ ಖಂಡಿಸಿದೆ.‌

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್

ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಒಕ್ಕೂಟದಿಂದ ಸುದೀರ್ಘ ಪತ್ರ ಬರೆದು ಗ್ರೇಡಿಂಗ್‌ ವ್ಯವಸ್ಥೆ ಕೈಬಿಡಲು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

ಕೇಂದ್ರ ಪಠ್ಯಕ್ರಮದಲ್ಲಿ ತೃತೀಯಭಾಷೆಯಯಲ್ಲಿ ಹೆಚ್ಚು ಅಂಕಗಳಿಸಿದರೆ ಕಡಿಮೆ ಅಂಕದ ವಿಷಯದ ಬದಲು ಲೈಫ್ ಲೈನ್ ರೀತಿ ತೃತೀಯ ಭಾಷೆ ಅಂಕ ಪರಿಗಣನೆ ಅವಕಾಶವಿದೆ.

ಆದರೆ ರಾಜ್ಯ ಪಠ್ಯಕ್ರಮದ ಮಕ್ಕಳಿಗೆ ಅಂಕವೇ ಪರಿಗಣಿಸದಿರೋದು ಅನ್ಯಾಯದ ಪರಮಾವಧಿ ಈ ತರಾತುರಿಯ ನಿರ್ಧಾರವನ್ನು ಖಂಡಿಸುವದಾಗಿ ಅವರು ಹೇಳಿದ್ದಾರೆ.

ತೃತೀಯ ಭಾಷೆಗಳಿಗೆ ಅಂಕ ನೀಡದೇ ಗ್ರೇಡ್ ನೀಡಿದರೆ ವಿದ್ಯಾರ್ಥಿಗಳಿಗಾಗುವ ಹಾನಿಯೇನು? ತೃತೀಯ ಭಾಷೆ ಅಂದ್ರೆ ಕೇವಲ ಹಿಂದಿ ಮಾತ್ರಾನಾ? ಸರ್ಕಾರ ಕೇವಲ ಹಿಂದಿ ಭಾಷೆ ಮಾತ್ರ ಗಮನಿಸಿ ರಾಜಕೀಯ ಪ್ರೇರಿತ ನಿಲುವು ತಳೆದಿದೆಯಾ? ದ್ವಿಭಾಷಾ ನೀತಿ ಹೆಸರಲ್ಲಿ ಕನ್ನಡ ಉಳಿಸೋ ನಿಲುವೆಂಬ ಸರ್ಕಾರದ ಸಮರ್ಥನೆ ಹಿಂದೆ ಕನ್ನಡ ಶಾಲೆಗಳೇ ಮುಚ್ಚುವ ಮತ್ತೊಂದು ಮುಖದ ಬಗ್ಗೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದ ಜನರ ಅಭಿಪ್ರಾಯಗಳ ವಿಶೇಷ ಸರಣಿ ವರದಿಗಳನ್ನು ನ್ಯೂ ಇಂಡಿಯಾ ಕನ್ನಡ ಪ್ರಕಟಿಸಲಿದೆ.

Follow Us

Leave a Reply

Your email address will not be published. Required fields are marked *

Back to top button