ಕನ್ನಡ ಚಿತ್ರರಂಗದ ಮಾನ ಹರಾಜು ಹಾಕಿದ ಜೋಗಿ ಪ್ರೇಮ್|ಸರ್ಕೆ ಚುನರ..ಹಿಂದಿ ಸಾಂಗ್‌ಗೆ ಕೇಂದ್ರದಿಂದ ಬ್ಯಾನ್|ಕನ್ನಡದಲ್ಲಿಯು ನಿಷೇಧಕ್ಕೆ ಮಹಿಳಾ ಆಯೋಗ ಒತ್ತಾಯ
ದೇಶಾದ್ಯಂತ ಹಾಡಿನ ಅಶ್ಲೀಲತೆ ಬಗ್ಗೆ ಛೀಮಾರಿ ಆದ ನಂತರವೂ ಈ ಜೋಗಿ ಪ್ರೇಮ್ ಇನ್ನು ಬುದ್ದಿ ಕಲಿತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಪ್ರೇಮ್, ತಮ್ಮದೇನು ತಪ್ಪು ಇಲ್ಲ ಎಂಬಂತೇ ಮಾತಾನಾಡಿದ್ದಾರೆ.

ಅಶ್ಲೀಲ ಸಾಹಿತ್ಯ ಬರೆದು ಹಾಡು ರಿಲೀಸ್ ಮಾಡಿದ್ದ ಜೋಗಿ ಪ್ರೇಮ್‌ಗೆ ನಾಡಿನ ಜನರು ಛೀಮಾರಿ ಹಾಕಿದ್ದ ಬೆನ್ನಲ್ಲೇ, ಅಶ್ಲೀಲ ಸರ್ಸೆ..ಸರ್ಸೆ ಹಿಂದಿ ಆವತರಣಿಕೆಯ ಹಾಡನ್ನು ಕೇಂದ್ರ ಸರ್ಕಾರವೇ ನಿಷೇಧ ಹೇರಿದೆ. ಕನ್ನಡ ನಾಡಿನ ಸಿನಿಮಾ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಟ್ಟಿರುವ ಜೋಗಿ ಪ್ರೇಮ್‌ನ ವರ್ತನೆ, ಕನ್ನಡ ಸಿನಿಮಾ ಲೋಕವೇ ತಲೆ ಬಾಗಿಸುವಂತೇ ಮಾಡಿದೆ.

ಕನ್ನಡ ಸಿನಿಮಾ ಲೋಕವನ್ನು ಮೇರು ಎತ್ತರಕ್ಕೆ ಬೆಳೆಸಿದ್ದವರು ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕ್ರತ ಡಾ.ರಾಜ್‌ಕುಮಾರ್, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ, ಡಾ.ಅಂಬರೀಷ್ ಸೇರಿದಂತೆ ಹಲವರನ್ನು ಇವತ್ತಿಗೂ ಭಾರತೀಯ ಚಿತ್ರರಂಗ ಗೌರವಿಸುತ್ತದೆ.
ಆದರೆ ಈ ಗೌರವವನ್ನು ಕ್ಷಣ ಮಾತ್ರದಲ್ಲಿ ಹಾಳು ಮಾಡಿದ್ದಾರೆ ಜೋಗಿ ಪ್ರೇಮ್. ಚಿತ್ರದ ಬಿಟ್ಟಿ ಪ್ರಚಾರಕ್ಕೆ ತಮ್ಮ “ಕೆಡಿ” ಚಿತ್ರದಲ್ಲಿ ಸಾಹಿತಿಯೇ ಅಲ್ಲದ ಈ ಕೇಡಿ ಪ್ರೇಮ್, ಹಾಡೊಂದಕ್ಕೆ ಅಶ್ಲೀಲ ಸಾಹಿತ್ಯ ತುಂಬಿದ್ದಾರೆ. ಆ ಹಾಡು ಕುಟುಂಬ ಸಮೇತ ಕುಳಿತು ಕೇಳಿಸಿಕೊಳ್ಳಲಿಕ್ಕೆ ಆಗುವದಿಲ್ಲ.

ಹಿಂದಿಯ ಕ್ಯಾಬರೆ ಡ್ಯಾನ್ಸ್‌ರ್ ನೋರಾ ಫತೇಹಿ ಎಂಬುವರಿಂದ ಸರ್ಸೆ..ಸರ್ಸೆ ಎಂದು ಡ್ಯಾನ್ಸ್ ಮಾಡಿಸಿದ್ದಾರೆ. ಈಕೆಗೆ ಡ್ಯಾನ್ಸ್‌ನಲ್ಲಿ ಸಾಥ್ ಕೊಟ್ಟವರು ಹಿಂದಿ ಚಿತ್ರರಂಗದ ಒಂದು ಕಾಲದ ನಾಯಕ ನಟ ಸಂಜಯ್ ದತ್ತ. ಬಹುಭಾಷಾ ಚಿತ್ರವಾಗಿರುವ ಈ “ಕೆಡಿ” ಚಿತ್ರದಲ್ಲಿ ಆಯಾ ಭಾಷೆಯಲ್ಲಿ ತರ್ಜುಮೆ ಮಾಡಿ ಸಾಂಗ್ ಬರೆಯಲಾಗಿದೆ.
ಅಶ್ಲೀಲ ಹಾಡಿಗೆ ಬೆಚ್ಚಿ ಬಿದ್ದ ಹಿಂದಿ ಚಿತ್ರರಂಗ!

ಚಿತ್ರರಂಗದ ದಿಗ್ಗಜ ಹಿಂದಿ ಭಾಷೆಯಲ್ಲಿಯು ರಿಲೀಸ್ ಆಗಿರುವ ಈ ಸರ್ಸೆ..ಸರ್ಸೆ ಹಾಡು ಕೇಳಿ ಅಲ್ಲಿನ ಚಿತ್ರರಂಗದವರೂ ಅಷ್ಟೇ ಅಲ್ಲ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ನೋರಾ ಫತೇಹಿಯ ಕ್ಯಾಬರೆ ಡ್ಯಾನ್ಸ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಕೋಟ್ಯಾಂತರ ಜನರು ವೀಕ್ಷಿಸಿದ್ದಾರೆ.
ಅಶ್ಲೀಲ ಹಾಡನ್ನು ನಿಷೇಧಿಸಿದ ಕೇಂದ್ರ ಸರ್ಕಾರ|
ಕನ್ನಡ ಚಿತ್ರರಂಗದ ಮಾನ ಕಳೆದ ಜೋಗಿ ಪ್ರೇಮ್!
“ಕೆಡಿ” ಚಿತ್ರದ ಹಾಡಿನ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಜೋಗಿ ಪ್ರೇಮ್ ಬರೆದ ಅಶ್ಲೀಲ ಹಾಡನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕನ್ನಡ ಚಿತ್ರರಂಗದ ಮಾನವನ್ನು ಲೋಕಸಭೆವರೆಗೆ ಒಯ್ದು ಹರಾಜು ಹಾಕಿದ ಜೋಗಿ ಪ್ರೇಮ್‌ನ ಈ ಹಾಡಿನ ಬಗ್ಗೆ ಬುಧವಾರದಂದು ಸದನದಲ್ಲಿ ಚರ್ಚೆ ನಡೆಯುವಂತೇ ಮಾಡಿದ್ದಾರೆ.
ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ಹೇಳಿದರು.
ಸಂವಿಧಾನದ ವಿಧಿ 19(2) ಉಲ್ಲೇಖಿಸಿದ ಸಚಿವ ಅಶ್ವಿನಿ ವೈಷ್ಣವ್, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.
ಈ ಮಧ್ಯೆ ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುತ್ತಿದ್ದಂತೇ ಜೋಗಿ ಪ್ರೇಮ್ ಯುಟ್ಯೂಬ್‌ನಲ್ಲಿದ್ದ ಹಿಂದಿ ಆವತರಣಿಕೆಯ ಸಾಂಗ್ ಅನ್ನು ಡಿಲಿಟ್ ಮಾಡಿದ್ದಾರೆ.
ಮಾನ ಹೋದ ಮೇಲೆ ಬಂದ ಪ್ರೇಮ್!
ದೇಶಾದ್ಯಂತ ಹಾಡಿನ ಅಶ್ಲೀಲತೆ ಬಗ್ಗೆ ಛೀಮಾರಿ ಆದ ನಂತರವೂ ಈ ಜೋಗಿ ಪ್ರೇಮ್ ಇನ್ನು ಬುದ್ದಿ ಕಲಿತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಪ್ರೇಮ್, ತಮ್ಮದೇನು ತಪ್ಪು ಇಲ್ಲ ಎಂಬಂತೇ ಮಾತಾನಾಡಿದ್ದಾರೆ.

ಜೋಗಿ ಪ್ರೇಮ್ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ಸರ್ಸೆ ಹಾಡು ಬರೆದಾಗ ಬೇರೊಂದು ದೃಷ್ಟಿಕೋನ ಇತ್ತೆಂದು ಮೊಂಡುತನದಿಂದಲೇ ಹೇಳಿದ್ದಾರೆ.
ಇಡೀ ಕನ್ನಡ ಚಿತ್ರರಂಗದ ಮಾನವನ್ನು ಕ್ಷಣಾರ್ಧದಲ್ಲಿ ಹರಾಜು ಹಾಕಿದ ಪ್ರೇಮ್, ತಾವು ಮಾಡಿದ ಕೆಲಸಕ್ಕೆ ವಿಡಿಯೋದಲ್ಲಿ ಎಲ್ಲಿಯು ತಪ್ಪಾಗಿದೆ ಎಂದು ಹೇಳಿಲ್ಲ. ಇನ್ನು ಕೆಲವರು ತಮ್ಮ ಕಾಲೆಳೆಯಲು ಹೀಗೆ ಮಾಡಿದ್ದಾರೆ ಎಂದು ಧಿಮಾಕಿನಿಂದ ಹೇಳಿದ್ದಾರೆ.
ಕನ್ನಡದಲ್ಲಿ ಎದ್ದ ಅಶ್ಲೀಲ ಹಾಡಿನ ಕಿಡಿ!
ನಿಷೇಧಕ್ಕೆ ಆಗ್ರಹಿಸಿದ ಮಹಿಳಾ ಆಯೋಗ|

ಲೋಕಸಭೆಯಲ್ಲಿ “ಕೆಡಿ” ಚಿತ್ರದ ಹಾಡಿನ ವಿಚಾರ ಪ್ರಸ್ತಾಪ ಆಗುವ ಮುನ್ನವೇ ಕರ್ನಾಟಕದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಹೆಣ್ಣಿನ ಘನತೆಗೆ ಧಕ್ಕೆ ತರುವಂತಹ ಅತ್ಯಂತ ಕೆಳಮಟ್ಟದ ಅಶ್ಲೀಲ ಚಲನ ಚಿತ್ರ ಸಾಹಿತ್ಯ ಸಂಭಾಷಣೆಗಳಿಗೆ ನಿಷೇಧ ಹೇರುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕೇವಲ ಪಬ್ಲಿಸಿಟಿಯ ಗಿಮಿಕ್‌ಗಾಗಿ ಪ್ರೇಮ್ ಕನ್ನಡ ಚಲನಚಿತ್ರರಂಗದ ಘನತೆಯನ್ನ ಕೆಳಮಟ್ಟಕ್ಕೆ ಒಯ್ಯುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೇ, ಡಾ.ರಾಜ್‌ಕುಮಾರ್ ಅಂತಹ ದಿಗ್ಗಜ, ಮೇರು ವ್ಯಕ್ತಿತ್ವದವರು ಬೆಳೆಸಿದ ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ಛೀಮಾರಿ ಹಾಕುವಂತೆ ಮಾಡಿದ ಜೋಗಿ ಪ್ರೇಮ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಚಿತ್ರ ಗೆಲ್ಲಬೇಕೆಂದು ಅಶ್ಲೀಲ ಸಾಹಿತ್ಯವನ್ನು ತುಂಬುವ ಇಂತಹ ನಿರ್ದೇಶಕರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಜನರ ಅಭಿಪ್ರಾಯವಾಗಿದೆ.
ವರದಿ: ಸೌಮ್ಯ ರೆಡ್ಡಿ
ಸಿನಿಮಾ ಬ್ಯುರೋ
ನ್ಯೂಇಂಡಿಯಾ ಕನ್ನಡ







