ಕೆ.ಇ.ಕಾಂತೇಶ್ ಜನ್ಮದಿನ ಅದ್ದೂರಿ ಆಚರಣೆ|ಸಾವಿರಾರು ಅಭಿಮಾನಿಗಳಿಂದ ಶುಭಹಾರೈಕೆ|ಜನಸೇವೆ ಮಾಡಲು ಪುತ್ರನಿಗೆ ಆಶೀರ್ವದಿಸಿ-ಕೆ.ಎಸ್.ಈಶ್ವರಪ್ಪ
ಕೆ.ಇ.ಕಾಂತೇಶ್ ಅವರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಬಿಗ್ಬಾಸ್ ವಿಜೇತ ಗಿಲ್ಲಿ, ಕಾಂತೇಶ್ ಅವರು ಸರಳ ವ್ಯಕ್ತಿತ್ವದ ಜನಪರ ನಾಯಕನಾಗಿದ್ದು ಮುಂದಿನ ಎಂಎಲ್ಎ ಪಕ್ಕಾ ಎಂದು ಹಾರೈಸಿದರು.

ಶಿವಮೊಗ್ಗ: ಯುವಕರ ಆಶಾಕಿರಣ, ಮುಖಂಡ ಕೆ.ಇ.ಕಾಂತೇಶ್ ಅವರ ಜನ್ಮದಿನ ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ಬೆಳಗ್ಗೆಯಿಂದಲೇ ಅಭಿಮಾನಿಗಳ ಮಹಾಪೂರ ಕಾಂತೇಶ್ ಅವರ ಮನೆಗೆ ಆಗಮಿಸಿ ಶುಭ ಕೋರಿದರು.

ಕಾಂತೇಶ್ ಅವರ ಅಭಿಮಾನಿಗಳ ಸಂಘದ ಸದಸ್ಯರು ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ತಮ್ಮ ನಾಯಕನಿಗೆ ಮೇರುತ್ತೆರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸಿದರು.

ಕಾಂತೇಶ್ ಅವರಿಗೆ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಹಾಗೂ ನಾದಾನಂದ ಶ್ರೀಗಳು ಆಶೀರ್ವಚನ ನೀಡಿ ಹಾರೈಸಿದರು.
ಕಾಂತೇಶ್ಗೆ ಅದ್ದೂರಿ ಸನ್ಮಾನ|
ಹರಿದು ಬಂದ ಸಾವಿರಾರು ಅಭಿಮಾನಿಗಳು|
ಅಭಿಮಾನಿಗಳ ಪಾಲಿಗೆ ಭಾವಿ ಶಾಸಕ ಎಂದೇ ಗುರುತಿಸಲ್ಪಡುವ ಕೆ.ಇ.ಕಾಂತೇಶ್ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಅದ್ದೂರಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖಾಸಗಿ ಸಮುದಾಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಹಾಗೂ ನಾದಾನಂದ ಶ್ರೀಗಳು, ಬಿಗ್ಬಾಸ್ ವಿಜೇತ ಗಿಲ್ಲಿ, ಕಾಫಿನಾಡು ಚಂದು, ಮುಖಂಡ ಇ.ವಿಶ್ವಾಸ್ ಸೇರಿದಂತೇ ಹಲವು ಮುಖಂಡರು ಭಾಗವಹಿಸಿದ್ದರು.
ಜನಸೇವೆ ಮಾಡಲು ಅವಕಾಶ ನೀಡಿ|
ಕೆ.ಎಸ್.ಈಶ್ವರಪ್ಪ ಮನವಿ|
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪುತ್ರನ ಸೇವಾಮನೋಭಾವ ಜನಪರ ಕಾಳಜಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರಲ್ಲದೇ ಕಾಂತೇಶ್ ಮತ್ತಷ್ಟು ಜನಸೇವೆ ಮಾಡಲು ಅವಕಾಶ ನೀಡಿ ಆರ್ಶಿವದಿಸುವಂತೆ ಜನರಲ್ಲಿ ಮನವಿ ಮಾಡಿದರು.


ಇದೇ ವೇಳೆ ಹೊಳಲೂರಿನ ಜನತೆ ಜಿಲ್ಲಾಪಂಚಾಯಿತ್ ಸದಸ್ಯನಾಗಲು ಅವಕಾಶಕೊಟ್ಟಿದ್ದನ್ನು ಸ್ಮರಿಸಿದರು. ಹಲವಾರು ಸಮಾಜಮುಖಿ ಸಂಘಸಂಸ್ಥೆಗಳ ಮೂಲಕ ಜನಪರ ಸೇವೆ ಸಲ್ಲಿಸಲು ಮೂಲ ಸ್ಪೂರ್ತಿಯೇ ಸ್ವಯಂಸೇವಾ ಸಂಘ ಎಂದು ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಶಿವಮೊಗ್ಗಕ್ಕೆ ಸಾಫ್ಟವೇರ್ ಕಂಪನಿಗಳು|
ಅಭಿವೃದ್ಧಿಗೆ ಪಣತೊಟ್ಟ ಕಾಂತೇಶ್!
ಭವಿಷ್ಯದಲ್ಲಿ ಸಾಫ್ಟವೇರ್ ಕಂಪನಿಗಳು ಶಿವಮೊಗ್ಗಕ್ಕೆ ಬರುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂದು ಕೆ.ಇ.ಕಾಂತೇಶ್ ಹೇಳಿದ್ದಾರೆ.


ಕೆಲಸ ಅರಸಿ ದೂರದ ಊರು ದೇಶಗಳಿಗೆ ಹೋಗಿ ತಂದೆ ತಾಯಿಯಿಂದ ದೂರ ಉಳಿದ ಮಕ್ಕಳು ಮರಳಿ ಶಿವಮೊಗ್ಗದಲ್ಲೇ ತಂದೆತಾಯಿಯೊಟ್ಟಿಗೆ ಇರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.

ಅದಕ್ಕಾಗಿ ದೊಡ್ಡ ಕೈಗಾರಿಕೆಗಳು, ಸಾಫ್ಟವೇರ್ ಕಂಪನಿಗಳು ಶಿವಮೊಗ್ಗದಲ್ಲಿ ಬರುವಂತೆ ಸತತ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಕಾಂತೇಶ್ ಭಾವಿ ಶಾಸಕ|
ಬಿಗ್ಬಾಸ್ ಗಿಲ್ಲಿ ಹಾರೈಕೆ|
ಕೆ.ಇ.ಕಾಂತೇಶ್ ಅವರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಬಿಗ್ಬಾಸ್ ವಿಜೇತ ಗಿಲ್ಲಿ, ಕಾಂತೇಶ್ ಅವರು ಸರಳ ವ್ಯಕ್ತಿತ್ವದ ಜನಪರ ನಾಯಕನಾಗಿದ್ದು ಮುಂದಿನ ಎಂಎಲ್ಎ ಪಕ್ಕಾ ಎಂದು ಹಾರೈಸಿದರು.

ಗಂಡು ಮಕ್ಕಳ ಕುರಿತ ಫೇಮಸ್ ಡೈಲಾಗ್ ಹೇಳಿ ಅವರು ರಂಜಿಸಿದರು. ಇನ್ನು ಕಾಫಿನಾಡು ಚಂದು ತಮ್ಮದೇ ಶೈಲಿಯಲ್ಲಿ ಮನೋರಂಜನೆ ನೀಡಿದರು. ಇದೇ ವೇಳೆ ಸ್ಟೆಪ್ ಹೋಲ್ಡರ್ಸ್ ತಂಡದ ಮಕ್ಕಳು ನೃತ್ಯಮಾಡಿದ್ದು ವಿಶೇಷವಾಗಿತ್ತು.
ಇದೇ ವೇಳೆ ಯುವ ಮುಖಂಡ ಕೆ.ಇ.ಕಾಂತೇಶ್ ಅವರ ಅಭಿಮಾನಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಸೇರಿ ಕಾಂತೇಶ್ ಅವರಿಂದ ಬೃಹತ್ ಕೇಕ್ ಕಟ್ ಮಾಡಿಸುವ ಮೂಲಕ ಶುಭಕೋರಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








