Shivamogga
Trending

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ಸಿಬ್ಬಂದಿ ದಪ೯-ಶಾಸಕಿ ಮೇಲೆ ಜಾತಿ ನಿಂದನೆ ಮಾಡಿದ ಸತೀಶ್‌ಗೆ ಗೇಟ್‌ಪಾಸ್‌

ಮಹಿಳಾ ಶಾಸಕಿ ಮೇಲೆ ಜಾತಿ ನಿಂದನೆ ಮಾಡಿದ ವ್ಯಕ್ತಿಯನ್ನು ವಜಾ ಮಾಡಬೇಕೆಂದು ಆಗ್ರಹಿಸಿ, ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್‌ ಸೇರಿದಂತೆ ಜಾತ್ಯಾತೀತ ಜನತಾದಳದ ನಾಯಕರು, ಕಾಯ೯ಕತ೯ರು ಸಿಮ್ಸ್‌ ಆಡಳಿತ ಮಂಡಳಿ ಕಚೇರಿ ಎದುರು ಸೋಮವಾರ ಬೆಳಗ್ಗೆ ದಿಢೀರ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಆತನಲ್ಲಿ ಎಂತಹ ಉದ್ದಟತನ ತುಂಬಿತ್ತೆಂದರೇ, ಅವರು ಸ್ವತಃ ಶಾಸಕಿ ಎಂಬುದನ್ನು ನೋಡುವ ವ್ಯವಧಾನ ಆತನಲ್ಲಿ ಇರಲಿಲ್ಲ.

ಅನ್ಯಾಯವಾಗಿರುವ ಬಗ್ಗೆ ಆ ಶಾಸಕಿ ಪ್ರಶ್ನಿಸಿದರೇ ಅವರಿಗೆ ಬಾಯಿಗೆ ಬಂದಂತೇ ಮಾತನಾಡಿದ್ದಲ್ಲದೇ ಜಾತಿ ನಿಂದನೆ ಸಹ ಮಾಡಿದ ಘಟನೆ ಸೋಮವಾರದಂದು ಶಿವಮೊಗ್ಗ ನಗರದಲ್ಲಿ ನಡೆದಿದೆ.

ಸಕಾ೯ರಿ ಆಸ್ಪತ್ರೆಯಲ್ಲಿ ಬಡ ರೋಗಿಗಳ ಮೇಲೆ ನಡೆಯುವ ದೌಜ೯ನ್ಯ ಬಹುತೇಕ ಬೆಳಕಿಗೆ ಬರುವುದೇ ಇಲ್ಲ. ಇಲ್ಲಿನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕೆಲ ಸಿಬ್ಬಂದಿ ಮಾಡುವ ಅಟಾಟೋಪ ಇಡಿ ವ್ಯವಸ್ಥೆಯನ್ನೆ ಹಾಳುಗೆಡವಿದೆ.

ಈವರೆಗೆ ಬಡ ಸಾವ೯ಜನಿಕರು ಎದುರಿಸುತ್ತಿದ್ದ ಪರಿಸ್ಥಿತಿಯನ್ನು ಇದೀಗ ಸ್ವತಃ ಶಾಸಕರೇ ಈ ಸಿಬ್ಬಂದಿಯ ದಪ೯ದಿಂದ ಬೆಚ್ಚಿಬಿದ್ದಿದ್ದಾರೆ.

ಶಿವಮೊಗ್ಗದ ಸರಕಾರಿ ಸಿಮ್ಸ್‌ ಮೆಗ್ಗಾನ ಬೋಧನಾ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯಕ್‌ ಅವರು ಕಳೆದ ೨೭ ರಂದು ಸತೀಶ್‌ ಎಂಬುವವರಿಗೆ ಕರೆ ಮಾಡಿದ್ದಾರೆ.

ಸಿಮ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಬಡ ಸೆಕ್ಯುರಿಟಿ ಗಾಡ್‌೯ಗಳಿಗೆ ವಿನಾಕಾರಣ ತೊಂದರೆ ನೀಡುತ್ತಿರುವದರ ಬಗ್ಗೆ ಸಮಾಧಾನದಿಂದಲೇ ಪ್ರಶ್ನಿಸಿದ್ದಾರೆ.

ಆದರೆ ಸೆಕ್ಯುರಿಟಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾದ ಸತೀಶ್‌ ಎಂಬ ವ್ಯಕ್ತಿಯು, ಶಾಸಕಿ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಬಾಯಿಗೆ ಬಂದಂತೇ ಮಾತನಾಡಿ ಕೊನೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಜನತಾದಳ ಘಟಕವು ಆರೋಪಿಸಿದೆ.

ಶಾಸಕಿ ಶಾರದಾ ಪೂಯಾ೯ನಾಯಕ ಅವರ ಮೇಲೆ ಜಾತಿ ನಿಂದನೆ ಮಾಡಿದ ವ್ಯಕ್ತಿಯನ್ನು ವಜಾ ಮಾಡಬೇಕೆಂದು ಆಗ್ರಹಿಸಿ, ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್‌ ಸೇರಿದಂತೆ ಜಾತ್ಯಾತೀತ ಜನತಾದಳದ ನಾಯಕರು, ಕಾಯ೯ಕತ೯ರು ಸಿಮ್ಸ್‌ ಆಡಳಿತ ಮಂಡಳಿ ಕಚೇರಿ ಎದುರು ಸೋಮವಾರ ಬೆಳಗ್ಗೆ ದಿಢೀರ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆಬಿ ಪ್ರಸನ್ನಕುಮಾರ್, ಎಸ್ಸಿ ಎಸ್ಟಿ ಮಹಿಳಾ ಮೋರ್ಚಾದ ಗೀತಾ ಸತೀಶ್, ಕಾಂತರಾಜ್, ಜೆಡಿಎಸ್ ಘಟಕದ ಪ್ರಮುಖರು ಸೇರಿದಂತೆ ಕಾಯ೯ಕತ೯ರು ಭಾಗಿಯಾಗಿದ್ದರು.

ಇತ್ತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಹೊರಗುತ್ತಿಗೆ ಪಡೆದಿರುವ ಸಂಸ್ಥೆಯು ಶಾಸಕಿ ಶಾರದಾ ಪೂರ್ಯಾನಾಯಕ ಅವರಿಗೆ ದಪ೯ದಿಂದ ಮಾತನಾಡಿದ್ದ ಸತೀಶ್‌ ಎಂಬ ವ್ಯಕ್ತಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

Back to top button