InternationalPolitical

Nepal-Social Media ಹಿಂಸಾಚಾರಕ್ಕೆ ದೇಶವೇ ಧಗ..ಧಗ..-ಮಾಜಿ ಪ್ರಧಾನಿ ಹೆಂಡತಿಯ ಸಜೀವ ದಹನ-ಪ್ರಧಾನಿ ಓಲಿ ಎಸ್ಕೇಪ್?..

ಸಕಾ೯ರದ ವಿರುದ್ದ ಸಾಮಾಜಿಕ ಜಾಲತಾಣಗಳಿಂದ ಕಿಡಿಕಾರುತ್ತಿದ್ದರಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದ್ದರಿಂದ ಅದು ಇಡಿ ನೇಪಾಳವನ್ನೆ ಅಪೋಶನ ತೆಗೆದುಕೊಳ್ಳುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಖಂಡಿಸಿ, ದಂಗೆ ಎದ್ದಿರುವ ನೇಪಾಳ ಯುವ ಜನಾಂಗ ಜೆನರೇಷನ್‌ ಝಿ ಸಂಘಟನೆಯ ಹಿಂಸಾಚಾರಕ್ಕೆ ಕಠ್ಮಂಡು ಧಗಧಗಿಸಿ ಉರಿಯುವಂತೆ ಮಾಡಿದೆ.

Photo Credit-Aljazeera

ಮಂಗಳವಾರದಂದು ರಾಜಧಾನಿ ಕಠ್ಮಂಡು ಸೇರಿದಂತೆ ದೇಶಾದ್ಯಂತ ನಡೆದ ಹಿಂಸಾಚಾರಕ್ಕೆ ಪ್ರಧಾನಿ ಓಲಿ ನಿವಾಸ, ಸಂಸತ್‌ ಕಟ್ಟಡ, ಸುಪ್ರಿಂಕೋಟ್‌೯ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.

Photo Credit-Amensty International

ಈ ಎಲ್ಲ ಘಟನೆಗಳ ನಂತರ ಪ್ರಧಾನಿ ಕೆ ಪಿ ಶಮಾ೯ ಓಲಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಮೂಲಗಳು ಹೇಳಿವೆ. ಇದೇ ವೇಳೆ ಪ್ರತಿಭಟನಕಾರರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಸಹ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗಿದೆ.

ಮತ್ತೊಂದು ಘಟನೆಯೊಂದರಲ್ಲಿ ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖನಾಲ್ ಮನೆಗೆ ಬೆಂಕಿ ಇಟ್ಟ ಪರಿಣಾಮ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಗಂಭೀರ ಗಾಯಗೊಂಡು ಸಜೀವ ದಹನವಾಗಿದ್ದಾರೆ ಎಂದು ಖಬರ್‌ಹುಬ್ ವರದಿ ಮಾಡಿದೆ.

ಪ್ರತಿಭಟನಾಕಾರರ ಆಕ್ರೋಶಕ್ಕೆ ಬೆಂಕಿಗಾಹುತಿಯಾದ ಮಾಜಿ ಪ್ರಧಾನಿ ಜಲನಾಥ್ ಖನಾಲ್ ಮನೆ

ಇನ್ನೊಂದು ಘಟನೆಯಲ್ಲಿ ಪ್ರತಿಭಟನಾಕಾರರು, ಹಣಕಾಸು ಸಚಿವ ಬಿಷ್ಣುಪ್ರಸಾದ್‌ ಪೌಡೆಲ್‌ ಅವರನ್ನು ಓಡಾಡಿಸಿ ಹೊಡೆಯುತ್ತಿರುವ ದೃಶ್ಯ ವೈರಲ್‌ ಆಗಿದೆ. ಇನ್ನು ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರ ಸಕಾ೯ರಿ ಬಂಗ್ಲೆಗೆ ಬೆಂಕಿ ಇಡಲಾಗಿದೆ.

ಇಷ್ಟೆಲ್ಲ ಹಿಂಸಾಚಾರದ ನಂತರ ಕೊನೆಗೂ ನೇಪಾಳ ಸಕಾ೯ರವು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಸು ಪಡೆದುಕೊಂಡಿದೆ. ಆದರೂ ಈವರೆಗೂ ಹಿಂಸಾಚಾರ ನಿಲ್ಲದಿರವುದು ಕಂಡು ಬಂದಿದೆ.

Photo Credit- France24

ಸಕಾ೯ರದ ವಿರುದ್ದ ಸಾಮಾಜಿಕ ಜಾಲತಾಣಗಳಿಂದ ಕಿಡಿಕಾರುತ್ತಿದ್ದರಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದ್ದರಿಂದ ಅದು ಇಡಿ ನೇಪಾಳವನ್ನೆ ಅಪೋಶನ ತೆಗೆದುಕೊಳ್ಳುವಂತೆ ಮಾಡಿದೆ. ಸೋಮವಾರದಂದು ಜೆನ್‌ ಝಿ ಸಂಘಟನೆಯಿಂದ ಶುರು ಆದ ಪ್ರತಿಭಟನೆ ಲಕ್ಷಾಂತರ ಯುವ ಸಮೂಹ ಬೀದಿಗಿಳಿಯುವಂತೆ ಮಾಡಿತು.

Photo Credit-Aljazeera

ಸಕಾ೯ರದ ವಿರುದ್ದ ಮುಗಿಬಿದ್ದ ಯುವ ಪಡೆ ಭದ್ರತಾ ಪಡೆಗಳೊಂದಿಗೆ ಸಂಘಷ೯ಕ್ಕಿಳಿದ ಪರಿಣಾಮ ಶಾಲಾ ವಿದ್ಯಾಥಿ೯ಗಳು ಸೇರಿದಂತೆ ೧೯ ಜನರು ಹಿಂಸಾಚಾರದಲ್ಲಿ ಮೃತಪಟ್ಟರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಕಠ್ಮಂಡು ಸೇರಿದಂತೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕಫ್ಯೂ೯ ಹೇರಲಾಯಿತು.

Photo Credit – Aljazeera

ಆದರೆ ಇದ್ಯಾವುದು ಯುವ ಸಮೂಹವನ್ನು ತಡೆಯಲಿಕ್ಕೆ ಆಗಲೇ ಇಲ್ಲ. ಕಫ್ಯೂ೯ ಇದ್ದರೂ ಬೀದಿಗಿಳಿದ ಯುವ ಸಮೂಹ, ಜೆನರೇಷನ್‌ ಝಿ ನೇತೃತ್ವದಲ್ಲಿ ಭ್ರಷ್ಟನಾಯಕರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕೆಲ ಹೊತ್ತಿನಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದೆ. ರಾಜಕೀಯ ನಾಯಕರ ಮನೆ, ಕಚೇರಿಗಳನ್ನು ಗುರಿಯಾಗಿಸಿಕೊಂಡ ಯುವ ಪಡೆ ಅಲ್ಲಿಗೆ ನುಗ್ಗಿ ಬೆಂಕಿ ಹಚ್ಚ ತೊಡಗಿದರು.

Photo Credit-The Fedral

ಇದರ ಪರಿಣಾಮ ಪ್ರಧಾನಿ ಓಲಿ ನಿವಾಸ, ಸಂಸತ್‌ ಕಟ್ಟಡ, ನೇಪಾಳ ಅಧ್ಯಕ್ಷರ ಮನೆ , ಮಾಜಿ ಪ್ರಧಾನಿಗಳಾದ ರಾಮ್‌ಚಂದ್ರ್‌ ಪೌಡೆಲ್‌, ಪುಷ್ಪ್‌ ಕಮಲ್‌ ದಹಾಲ್‌, ಶೇರ್‌ ಬಹದ್ದೂರ ದೇವುಬಾ, ಜಲನಾಥ್‌ ಖಾನಲ್‌, ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ್‌, ಮಾಜಿ ಗೃಹ ಸಚಿವ ರಮೇಶ್‌ ಲೇಖಕ್‌ ಅವರ ನಿವಾಸಗಳು ಸೇರಿದಂತೆ ದೇಶದ ಸುಪ್ರಿಂಕೋಟ್‌೯ ಸಹ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿವೆ.

Photo Credit-The CSR Journal

ಯುವ ಸಮೂಹದ ಆಕ್ರೋಶ ಯಾವ ಮಟ್ಟಕ್ಕೆ ತಿರುಗಿತ್ತು ಎಂದರೇ, ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖನಾಲ್ ಮನೆಗೆ ಬೆಂಕಿ ಇಟ್ಟಾಗ ಮನೆಯೊಳಗೆ ಇದ್ದ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಹೊರಗೆ ಬರಲಾಗದೇ ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡು ಸಜೀವ ದಹನಗೊಂಡ ಘಟನೆ ನಡೆದಿದೆ.

Photo Credit-Newyork Times

ನೇಪಾಳದಲ್ಲಿ ದಿಢೀರ ಉಂಟಾದ ಹಿಂಸಾಚಾರ ವಿಕೋಪಕ್ಕೆ ಹೋಗುತ್ತಿದ್ದಂತೆ ನೇಪಾಳ ಪ್ರಧಾನಿ ಕೆ ಪಿ ಶಮಾ೯ ಓಲಿ ದೇಶದಿಂದಲೇ ಪಲಾಯನಗೈದಿದ್ದಾರೆಂದು ಮೂಲಗಳು ಹೇಳಿವೆ. ಈ ಮಧ್ಯೆ ಪ್ರಧಾನಿ ಸ್ಥಾನಕ್ಕೆ ಓಲಿ ರಾಜೀನಾಮೆ ನೀಡಿದ್ದನ್ನು ನೇಪಾಳ ಅಧ್ಯಕ್ಷ ಪೌಡೆಲ್‌ ಅಂಗೀಕರಿಸಿದ್ದಾರೆ. ಆದರೆ ಇದರಿಂದ ಪ್ರತಿಭಟನಾಕಾರರು ಶಾಂತಗೊಳ್ಳುತ್ತಿಲ್ಲ ಎಂದು ಮನಗಂಡ ಹಲವು ಪ್ರಮುಖ ನಾಯಕರ ಜೊತೆ ಓಲಿ ಹೆಲಿಕ್ಯಾಪ್ಟರ್‌ನಲ್ಲಿ ತೆರಳಿದ್ದಾರೆಂದು ಹೇಳಲಾಗಿದೆ.

ಪ್ರಧಾನಿ ಸ್ಥಾನಕ್ಕೆ ಓಲಿ ರಾಜೀನಾಮೆ ನೀಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ವಾಪಸು ಪಡೆದಿರುವದರಿಂದ ಪ್ರತಿಭಟನೆಯನ್ನು ನಿಲ್ಲಿಸಬೇಕೆಂದು ನೇಪಾಳ ಸಕಾ೯ರದ ಸೇನಾ ಮುಖ್ಯಸ್ಥ ಅಶೋಕ್‌ ರಾಜ್‌ ಸಿಗ್ಡಲ್‌, ಮುಖ್ಯ ಕಾಯ೯ದಶಿ೯ ಏಕ್‌ ನಾರಾಯಣ್‌ ಅಯ೯ಲ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಯುವ ಸಮೂಹಕ್ಕೆ ಮನವಿ ಮಾಡಿದ್ದಾರೆ.

ನೇಪಾಳದಲ್ಲಿ ತೀವ್ರ ಹಿಂಸಾಚಾರ ಮುಂದುವರೆದಿದ್ದರಿಂದ ನೇಪಾಳಕ್ಕೆ ದೆಹಲಿ-ಕಠ್ಮಂಡು ಮಧ್ಯೆ ಪ್ರತಿದಿನ ಹಾರಾಟ ನಡೆಸುತ್ತಿದ್ದ ನಾಲ್ಕು ಏರ್‌ ಇಂಡಿಯಾ ವಿಮಾನಗಳು, ಇಂಡಿಗೋ ವಿಮಾನಗಳು ತಮ್ಮ ಹಾರಾಟವನ್ನು ರದ್ದುಪಡಿಸಿದೆ.

ಈ ಮಧ್ಯೆ ಕಠ್ಮಂಡುವಿಗೆ ಭಾರತದಿಂದ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನವು ಹಿಂಸಾಚಾರದ ತೀವ್ರತೆ ಹಾಗೂ ನೇಪಾಳದ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ವಿಷಯ ತಿಳಿದು ಮಾಗ೯ ಮಧ್ಯೆ ವಾಪಸು ನವದೆಹಲಿಗೆ ಆಗಮಿಸಿದೆ.

Leave a Reply

Your email address will not be published. Required fields are marked *

Back to top button