ಶೈಕ್ಷಣಿಕ ಜಗತ್ತಿನ ಅತಿ ದೊಡ್ಡ ಮಾಫಿಯಾ| ಹಣ ಕೊಟ್ಟರೇ ಸಿಗುತ್ತೇ..ಗೌರವ ಡಾಕ್ಟರೇಟ್| ಹುಬ್ಬಳ್ಳಿ ರೇಲ್ವೆ ಗುತ್ತಿಗೆದಾರ ಖರೀದಿಸಿದ್ದ ‘ಗೌ.ಡಾ.ಡಿಗ್ರಿ’ಯ ಹಿಂದಿನ ಅಸಲಿ ಕಥೆ! ಭಾಗ-01
ಪ್ರಚಾರದ ಗೀಳು ಅಂಟಿಸಿಕೊಂಡಿರುವ ಹುಬ್ಬಳ್ಳಿಯ ಯಕಃಶ್ಚಿತ ಆ ರೇಲ್ವೆ ಗುತ್ತಿಗೆದಾರ, ವರುಷಗಳ ಹಿಂದೆಯೇ ಶ್ರೀಲಂಕಾದ ಫೇಕ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದ. ನಂತರ ಅವರಿವರ ಕಾಲು ಹಿಡಿದು ಕಳೆದ ವರುಷ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಶೈಕ್ಷಣಿಕ ಜಗತ್ತಿನ ಅತಿ ದೊಡ್ಡ ಮಾಫಿಯಾ ದಂಧೆ ಮತ್ತು ಅದರ ವಿಸ್ತಾರವನ್ನು ಎಳೆಎಳೆಯಾಗಿ “ನ್ಯೂಇಂಡಿಯ ಕನ್ನಡ” ಡಿಜಿಟಲ್ ಕನ್ನಡ ಪತ್ರಿಕೆ ಬಯಲು ಮಾಡಲು ಹೊರಟಿದೆ.
ಈ ಮಾಫಿಯಾದಲ್ಲಿರುವ ವ್ಯಕ್ತಿಗಳು ನಡೆಸುವ? ವಿಶ್ವವಿದ್ಯಾಲಯಗಳು ಕೇವಲ ಆನಲೈನ್ನಲ್ಲಿ ಮಾತ್ರ ನೋಡಬಹುದು. ಅವರು ಕೊಡುವ ವಿಳಾಸಕ್ಕೆ ಹೋದರೆ ಏನು ಇರಲ್ಲ.
ಬೇರೆ ದೇಶಗಳಲ್ಲಿ ಇರುವ ಮಾನ್ಯತೆ ಪಡೆಯದ ಈ ವಿಶ್ವವಿದ್ಯಾಲಯಗಳ ಮುಖ್ಯ ದಂಧೆ ನಕಲಿ ಪದವಿ ನೀಡುವುದು. ದುಡ್ಡು ಕೊಟ್ಟರೇ ಸಾಕು ಎಂತಹ ಪದವಿ ಬೇಕಾದರೂ ಸಿಗುತ್ತೆ. ಇವರ ಮುಖ್ಯ ಟಾರ್ಗೆಟ್ ನಮ್ಮ ಭಾರತ.
ಶ್ರೀಲಂಕಾದಲ್ಲಿದೆ ಶೈಕ್ಷಣಿಕ ಮಾಫಿಯಾ ದಂಧೆ!
ತಿನ್ನುವ ಅನ್ನಕ್ಕೂ ಪರದಾಟ ನಡೆಸಿದಂತಹ ದೇಶ ಶ್ರೀಲಂಕಾ. ಆದರೆ ಅಲ್ಲಿರುವ ಕೆಲ ಮಹಾನ ಜಾಣರು(?) ನಡೆಸುವ ದಂಧೆಯೇ ನಕಲಿ ಪದವಿ ಹಂಚುವ ವಿಶ್ವವಿದ್ಯಾಲಯಗಳು.

ನೋಡಿ, ಅಲ್ಲಿಯ ಜನರು ಈ ಪದವಿಗಳ ಹಿಂದೆ ಬೆನ್ನತ್ತಿದ್ದವರಲ್ಲ. ಯಾಕೆಂದರೆ ವಿಶ್ವವಿದ್ಯಾಲಯಗಳು ನಕಲಿ ಎಂದು ಆ ದೇಶದ ಆಡಳಿತವು ಎಚ್ಚರಿಕೆ ನೀಡಿದೆ.
ಮತ್ತು ಅಸಲಿಗೆ ಈ ದಂಧೆಯನ್ನು ಅಲ್ಲಿನ ಸರ್ಕಾರ ನಡೆಸಲು ಬಿಟ್ಟಿಲ್ಲ. ಒಂದು ವೇಳೆ ಅಲ್ಲಿ ಬಾಲ ಬಿಚ್ಚಿದರೇ ಸೀದಾ ಜೈಲಿಗೆ ಅಟ್ಟುತ್ತಾರೆ.

ಇವತ್ತು ಶ್ರೀಲಂಕಾದ ಮೆಡಿಸಿನಾ ಅಲ್ಟರನೆಟಿವಾ ಎಂಬ ವಿಶ್ವವಿದ್ಯಾಲಯವು ಕೊಲಂಬೊದ ಓಪನ್ಯುನಿವರ್ಸಿಟಿ ಫಾರ್ಕಾಂಪ್ಲಿಮೆಂಟರಿ ಮೆಡಿಸಿನ್ಸ್ದಿಂದ ಮಾನ್ಯತೆ ಪಡೆದಿದೆ ಎಂಬುದರಿಂದ ಈ ನಕಲಿ ಮಾಫಿಯಾ ಶುರು ಆಗುತ್ತದೆ.
ಈ ವಿಶ್ವವಿದ್ಯಾಲಯವು (?) ಹಲವು ಕೋರ್ಸಗಳನ್ನು, ಪದವಿಗಳನ್ನು ನಮ್ಮಲ್ಲಿ ಕಲಿಯಬಹುದಾಗಿದೆ. ಶ್ರೀಲಂಕಾಕ್ಕೆ ನೀವು ಬರುವುದು ಬೇಡ. ಆನ್ಲೈನ್ ಮುಖಾಂತರವೇ ಹಣ ಪಾವತಿಸಿ ಪದವಿ ಪಡೆಯಬಹುದು ಎಂದು ಆಫರ್ನೀಡುತ್ತದೆ.

ಇಲ್ಲಿ ಇನ್ನೊಂದು ವಿಷಯ ಅದು ಹೇಳುತ್ತದೆ. ದುಡ್ಡು ಕೊಟ್ಟ ನಂತರ ಯಾವುದೇ ಕಾರಣಕ್ಕೂ ಪದವಿ ಪ್ರಮಾಣ ಪತ್ರ ಮಿಸ್ಮಾಡಲ್ಲ ಎನ್ನುತ್ತದೆ.
ವಿಚಿತ್ರ ಎಂದರೇ ಯಾವುದೇ ಕೋರ್ಸ್ಅಥವಾ ಪದವಿ ಇಲ್ಲಿ ಎರಡು ತಿಂಗಳಲ್ಲಿ ಪಡೆಯಬಹುದು. ಇದು ವಿಚಿತ್ರ ಆದರೂ ಸತ್ಯ.
ಫೇಲಾದ ದಡ್ಡರೇ ಟಾರ್ಗೆಟ್|
ಕಾಲೇಜಿನಿಂದ ಪಡೆಯುತ್ತಾರೆ ದಡ್ಡರ ಲಿಸ್ಟ್|
ಪದವಿ ಮಾರಾಟದಿಂದ ಬರುವ ಹಣವೇ ನೂರಾರು ಕೋಟಿರೂ!
ಶ್ರೀಲಂಕಾದಲ್ಲಿರುವ ಈ ನಕಲಿ ವಿಶ್ವವಿದ್ಯಾಲಯಗಳಿಗೆ ಅಲ್ಲಿಯೇ ಮಾನ್ಯತೆ ಇಲ್ಲ ಮತ್ತು ಅಲ್ಲಿ ದಂಧೆ ನಡೆಸಿದರೇ ಜೈಲು ಸೇರುವುದು ಖಚಿತ. (ಶ್ರೀಲಂಕಾ ಯುಜಿಸಿ ಈ ನಕಲಿ ವಿವಿಗೆ ಮಾನ್ಯತೆ ಕೊಟ್ಟಿಲ್ಲ) ಹೀಗಾಗಿ ಈ ಮಾಫಿಯಾದವರು ಭಾರತಕ್ಕೆ ಬಂದು ಇಲ್ಲಿ ಈ ದಂಧೆ ನಡೆಸುತ್ತಾರೆ.

ಭಾರತದ ಎಲ್ಲೆಡೆ (ವಿಶೇಷವಾಗಿ ಚೆನ್ನೈ, ಆಂದ್ರ ಹಾಗು ಕರ್ನಾಟಕ ಇವರ ಮುಖ್ಯ ಟಾರ್ಗೆಟ್) ತಮ್ಮ ಏಜೆಂಟರುಗಳನ್ನು ನೇಮಿಸುತ್ತಾರೆ. ಈ ಏಜೆಂಟರುಗಳು ಮಾಡುವ ಕೆಲಸ ಇಷ್ಟೆ. ದಡ್ಡರನ್ನು ಹುಡುಕುವುದು.
ವಿಶೇಷವಾಗಿ ಕಾಲೇಜ್ ಡ್ರಾಪ್ಔಟ್ ಆದವರು, ಫೇಲ್ ಆದವರ ಲಿಸ್ಟ್ಹುಡುಕುವುದು ಇವರ ಕೆಲಸ. ಕೆಲ ಕಾಲೇಜುಗಳಿಂದ ಲಿಸ್ಟ್ಪಡೆಯುತ್ತಾರೆ.
ಆಮೂಲಕ ಬಲೆಗೆ ಬಿದ್ದವರಿಂದ ಹಣ ಪಡೆಯುವ ಈ ಏಜೆಂಟರು, ಅವರಿಗೆ ತುರ್ತಾಗಿ ಪದವಿ ಪ್ರಮಾಣಪತ್ರ ಕೊಡಿಸುತ್ತಾರೆ.
ಈ ದಂಧೆ ಚೈನ್ಲಿಂಕ್ಸಿಸ್ಟಮ್ನಲ್ಲಿ ಕೆಲಸ ಮಾಡುತ್ತದೆ. ಒಬ್ಬ ಫೇಲಾದ ವಿದ್ಯಾರ್ಥಿ ಇವರಿಂದ ನಕಲಿ ಪದವಿ ಪಡೆದ ನಂತರ ಆತ ಇನ್ನು ಹತ್ತು ಜನರಿಗೆ ತಿಳಿಸುತ್ತಾನೆ.
ಆ ವಿದ್ಯಾರ್ಥಿಗಳು ಈ ನಕಲಿ ದಂಧೆಯವೆರನ್ನು ಬೆನ್ನು ಬೀಳುತ್ತಾರೆ. ಹೀಗೆ ಬೇರೆ ವಿದ್ಯಾರ್ಥಿಯನ್ನು ರೆಫೆರ್ಮಾಡಿದವರಿಗೂ ಈ ದಂಧೆಕೋರರು ಕಮಿಶನ್ನೀಡಿ ಆಸೆ ಹುಟ್ಟಿಸುತ್ತಾರೆ.
ಕೆಲ ವಿದ್ಯಾರ್ಥಿಗಳು ಇದನ್ನೆ ದಂಧೆ ಮಾಡಿಕೊಂಡ ಉದಾಹರಣೆಗಳು ಇವೆ. ಈ ನಕಲಿ ಪದವಿ ಪ್ರಮಾಣ ಪತ್ರಗಳಿಂದಲೇ ವರುಷಕ್ಕೆ ನೂರಾರು ಕೋಟಿರೂಗಳ ವ್ಯವಹಾರ ನಡೆಯುತ್ತದೆ.
ನಕಲಿ ಗೌರವ ಡಾಕ್ಟರೇಟ್ ಪದವಿಗೆ ಭಾರಿ ಬೇಡಿಕೆ|
ಕರ್ನಾಟಕದಲ್ಲಿಯೂ ಇದ್ದಾರೆ ನಕಲಿ “ಗೌ.ಡಾ.” ಗಿರಾಕಿಗಳು|
“ಗೌಡಾ”ಗೆ ಶಿಫಾರಸ್ಸು ಮಾಡಿದವರಿಗೆ ಸಿಗಲಿದೆ ಕಮಿಶನ್!
ಶ್ರೀಲಂಕಾದ ಮೆಡಿಸಿನಾ ಅಲ್ಟರನೆಟಿವಾ ಎಂಬ ವಿಶ್ವವಿದ್ಯಾಲಯಕ್ಕೆ ಭಾರತದಲ್ಲಿರುವ ಫೇಲಾದ ಕೆಲ ದಡ್ಡರಿಗೆ ನೀಡುವ ನಕಲಿ ಪದವಿಯಿಂದ ಬರುವ ಆಮದನಿಕ್ಕಿಂತ ಇನ್ನು ಹೆಚ್ಚಿನ ದುಡ್ಡು “ಗೌರವ ಡಾಕ್ಟರೇಟ್” ಎಂಬ ದಂಧೆಯಿಂದ ಬರುತ್ತದೆ.

ಈ “ಗೌರವ ಡಾಕ್ಟರೇಟ್” ನಕಲಿ ಪದವಿಗೆ ಇವರು ಯಾರನ್ನು ಟಾರ್ಗೆಟ್ ಮಾಡುವುದೇ ಇಲ್ಲ.
ಆರಂಭದಲ್ಲಿ ಕೆಲ ಹೆಸರಾಂತ ವ್ಯಕ್ತಿಗಳಿಗೆ ಉಚಿತವಾಗಿ ಗೌರವ ಡಾಕ್ಟರೇಟ್ನೀಡಿದ ಈ ದಂಧೆಕೋರರು, ಆ ನಂತರ ಅದನ್ನೇ ಬಂಡವಾಳ ಮಾಡಿಕೊಂಡರು.
ನೋಡಿ, ಇಂತಹವರಿಗೆಲ್ಲಾ ನಾವು ಗೌರವ ಡಾಕ್ಟರೇಟ್ನೀಡಿದ್ದೇವೆ ಎಂದಾಗ ಕೆಲ ಜನರು ಮುಂದೆ ಬಂದು ನಕಲಿ ಗೌರವ ಡಾಕ್ಟರೇಟ್ಪಡೆದುಕೊಂಡರು.
ಹೀಗೆ ಒಬ್ಬರಿಂದ ಒಬ್ಬರಿಗೆ ಚೈನ್ಲಿಂಕಾಗಿ ಆಗಿ ಬೆಳೆದ ಈ ನಕಲಿ “ಗೌರವ ಡಾಕ್ಟರೇಟ್” ದಂಧೆ ಇಂದು ಕರ್ನಾಟಕದಲ್ಲಿಯು ಸಹ ಅವ್ಯಾಹತವಾಗಿ ಬೆಳದು ನಿಂತಿದೆ.
ನಮ್ಮಲ್ಲಿರುವ ಕೆಲ ರಾಜಕಾರಣಿಗಳು , ಕಂಟ್ರಾಕ್ಟರುಗಳು, ಸಮಾಜಸೇವಕರು ಎಂಬ ಫೋಸ್ಕೊಡುವ ವ್ಯಕ್ತಿಗಳು ಧಾರ್ಮಿಕ ಗುರುಗಳು ಸಹ ಶ್ರೀಲಂಕಾದ ಮೆಡಿಸಿನಾ ಅಲ್ಟರನೆಟಿವಾ ಎಂಬ ವಿಶ್ವವಿದ್ಯಾಲಯ ನೀಡುವ “ಗೌರವ ಡಾಕ್ಟರೇಟ್” ನಕಲಿ ಎಂದು ಗೊತ್ತಿದ್ದರೂ ತಮ್ಮ ತೆವಲಿಗಾಗಿ ದುಡ್ಡು ಕೊಟ್ಟು “ಗೌರವ ಡಾಕ್ಟರೇಟ್” ಪಡೆದುಕೊಂಡಿದ್ದಾರೆ.
ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ..
ಪ್ರಚಾರದ ಗೀಳು ಅಂಟಿಸಿಕೊಂಡಿರುವ ಹುಬ್ಬಳ್ಳಿಯ ಯಕಃಶ್ಚಿತ ರೇಲ್ವೆ ಗುತ್ತಿಗೆದಾರ, ಈಗ ವರುಷಗಳ ಹಿಂದೆಯೇ ಶ್ರೀಲಂಕಾದ ಫೇಕ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದ.

ನಂತರ ಅವರಿವರ ಕಾಲು ಹಿಡಿದು ಕಳೆದ ವರುಷ ಡಾ.ಡಿ.ಸಿ.ಪಾವಟೆಯವರನ್ನು ಕಂಡಂತಹ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಅದ್ಯಾವ ಮಾನದಂಡ ಆಧರಿಸಿ, ಕರ್ನಾಟಕ ವಿವಿ ಈ ವ್ಯಕ್ತಿಯ ಹೆಸರನ್ನು ಗೌರವ ಡಾಕ್ಟರೇಟ್ಗೆ ಶಿಫಾರಸು ಮಾಡಿತು?
ಸಿಂಡಿಕೇಟ್ ಸಭೆಗೂ ಗೌಪ್ಯವಾಗಿ ಇಟ್ಟು ಆ ರೇಲ್ವೆ ಗಿರಾಕಿಯ ಹೆಸರನ್ನು ರಾಜ್ಯಪಾಲರಿಗೆ ರವಾನೆ ಮಾಡಿದ್ದ ಆಗಿನ ಕರ್ನಾಟಕ ವಿವಿ ಸಾಹೇಬ್ರು, ಕಾರು ಗಿಫ್ಟ್ ಸಹಿತ ಮತ್ತೇನು ಪಡೆದಿದ್ದರೂ ಗೊತ್ತಾ?
ಅಸಲಿಗೆ ಈತ ಹುಬ್ಬಳ್ಳಿಯಲ್ಲಿ ನಡೆಸುವ ದಂಧೆ ಎಂತಹದ್ದು?. ಇನ್ನಷ್ಟು ಸಂರ್ಪೂಣ ತನಿಖಾ ವರದಿ ಪ್ರಕಟಗೊಳ್ಳಲಿದೆ.
ವರದಿ: ಇನವೆಸ್ಟಿಗೇಟಿವ್ ಟೀಮ್
ನ್ಯೂಇಂಡಿಯಾ ಕನ್ನಡ
ಬೆಂಗಳೂರು.


ಶ್ರೀಮತಿ ಸೋನಿಯಾ ಗಾಂಧಿ ನಮ್ಮ ಆಧಾರಸ್ತಂಭ-ಡಿಸಿಎಂ ಡಿ.ಕೆ.ಶಿವಕುಮಾರ್







