InternationalPoliticalSpecial Stories
ಚಂದ್ರಯಾನ-5 ಮಿಷನ್-ಜಂಟಿ ಒಪ್ಪಂದಕ್ಕೆ ಕೈಜೋಡಿಸಿದ ಭಾರತ-ಜಪಾನ್
ಚಂದ್ರನ ಧ್ರುವ ಪ್ರದೇಶಕ್ಕೆ ಭಾರತ -ಜಪಾನ ತಯಾರಿ

ಟೋಕಿಯೋ (ಜಪಾನ) ಭವಿಷ್ಯದ ಚಂದ್ರಯಾನ-5 ಕಾರ್ಯಾಚರಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಜಪಾನ್ ಏರೋಸ್ಪೇಸ್ ಪರಿಶೋಧನಾ ಸಂಸ್ಥೆ ಜಂಟಿ ಅನುಷ್ಠಾನ ಒಪ್ಪಂದಕ್ಕೆ ಸಹಿ ಹಾಕಿವೆ. ಶನಿವಾರ ಜಂಟಿಯಾಗಿ ಚಂದ್ರಯಾನ-5 ಮಿಷನ್ ಅನುಷ್ಠಾನ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ಧ್ರುವ ಪ್ರದೇಶದ ಜಂಟಿಯಾಗಿ ಅನ್ವೇಷಣೆ ನಡೆಸಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಶನಿವಾರದಂದು ಜಪಾನ ದೇಶದ ರಾಜಧಾನಿ ಟೋಕಿಯೋದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಎರಡು ಪ್ರಜಾಪ್ರಭುತ್ವ ದೇಶಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ ಮತ್ತು ವೈಜ್ಞಾನಿಕ ಪಾಲುದಾರಿಕೆ ಏಷ್ಯಾ ಖಂಡದಲ್ಲಿ ಹೊಸ ಮನ್ವಂತರಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.


