DistrictShivamogga

ಶರಾವತಿ ಪಂಪ್ಡ್‌ ಸ್ಟೋರೆಜ್‌ ವಿದ್ಯುತ್‌ ಯೋಜನೆ| ಸರ್ಕಾರದ ಮೊಂಡುತನ ವಿರೋಧಿಸಿ ಅಹೋರಾತ್ರಿ ಧರಣಿ|ಯೋಜನೆ ನಿಲ್ಲಿಸುವತನಕ ಹೋರಾಟ-ಕೆ.ಎಸ್‌.ಈಶ್ವರಪ್ಪ

ಕೇಂದ್ರದ ಪರಿಸರ ಅರಣ್ಯ ಇಲಾಖೆಯು, ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ ಯೋಜನೆ ಮಾರಕವೆಂದು ವರದಿ ನೀಡಿದೆ. ಪರಿಸರವಾದಿಗಳು ಹಾಗೂ ಜನರ ವಿರೋಧವಿದ್ದರೂ ಸರ್ಕಾರಕ್ಕೆ ಯೋಜನೆ ಮುಂದುವರೆಸುವ ಹಠ ಮಾಡುತ್ತಿದೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ ಯೋಜನೆಗೆ ಹೈಕೋರ್ಟ ತಡೆಯಾಜ್ಞೆ ನೀಡಿದ್ದರೂ ತನ್ನ ಮೊಂಡುತನ ಮುಂದುವರೆಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಮಂಗಳವಾರದಂದು ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆ ಅಹೋರಾತ್ರಿ ಪ್ರತಿಭಟನೆ ನಡೆಸಿದ ಆಕ್ರೋಶ ವ್ಯಕ್ತಪಡಿಸಿದರು.

ನಗರದ ನೆಹರೂ ಸ್ಟೇಡಿಯಂ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಪರಿಸರವಾದಿಗಳಾದ ಮಾರುತಿ ಗುರೂಜಿ, ಮಹಿಮಾ ಪಾಟೀಲ್, ಕೆ.ಇ.ಕಾಂತೇಶ್ ಧರಣಿ ಮುಂದಾಳತ್ವ ವಹಿಸಿದ್ದರು.

ಕೇಂದ್ರದ ಪರಿಸರ ಅರಣ್ಯ ಇಲಾಖೆಯು, ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ ಯೋಜನೆ ಮಾರಕವೆಂದು ವರದಿ ನೀಡಿದೆ. ಪರಿಸರವಾದಿಗಳು ಹಾಗೂ ಜನರ ವಿರೋಧವಿದ್ದರೂ ಸರ್ಕಾರಕ್ಕೆ ಯೋಜನೆ ಮುಂದುವರೆಸುವ ಹಠ ಮಾಡುತ್ತಿದೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಹೈಕೋರ್ಟ್‌ ತಡೆ ನೀಡಿದ್ದರೂ ಸಹ ಸರ್ಕಾರ ಯೋಜನೆ ಕೈಬಿಡುವ ಬಗ್ಗೆ ಸ್ಪಷ್ಟಪಡಿಸುತ್ತಿಲ್ಲ. ಮೊಂಡುತನ ಮುಂದುವರೆಸಿರುವ ಸರ್ಕಾರದ ವಿರುದ್ದ ಹೈಕೋರ್ಟ್ ಕೂಡ ಛೀಮಾರಿ ಹಾಕಿದೆ. ಒಟ್ಟಾರೇ, ಪರಿಸರಕ್ಕೆ ಮಾರಕವಾದ ಈ ಯೋಜನೆ ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಈಗಾಗಲೇ ಹಲವು ಯೋಜನೆಗಳಿಂದ ಪಶ್ಚಿಮಘಟ್ಟ ಪ್ರದೇಶ ನಲುಗಿ ಹೋಗಿದೆ. ನೀರಿನ ಸೆಲೆ ಬತ್ತುತ್ತಿದೆ ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಮುಖಂಡ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದರು.

ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಪಶ್ಚಿಮಘಟ್ಟದ ಸಂರಕ್ಷಣೆಗಾಗಿಯೇ ವಿಶ್ವಸಂಸ್ಥೆ ಸಾವಿರಾರು ಕೋಟಿ ಅನುದಾನ ನೀಡುತ್ತದೆ. ಪಶ್ಚಿಮಘಟ್ಟವನ್ನು ಬಲಪಡಿಸಬೇಕೇ ವಿನಃ ಅಭಿವೃದ್ದಿ ಯೋಜನೆ ಹೆಸರಲ್ಲಿ ಪ್ರಕೃತಿ ನಾಶ ಮಾಡಬಾರದು. ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಅಹೋರಾತ್ರಿ ಹೋರಾಟದ ಮುಂದಾಳತ್ವ ವಹಿಸಿರುವ ಯುವ ಮುಖಂಡ ಕೆ.ಇ.ಕಾಂತೇಶ್‌ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯಿಂದ ಯಾರಿಗೆ ಲಾಭವಿದೆ ಎಂದು ಕೆಜೆ ಜಾರ್ಜ್ ಹಾಗೂ ಸಿದ್ದರಾಮಯ್ಯನವರು ಜನರ ಮುಂದೆ ಸ್ಪಷ್ಟಪಡಿಸುವಂತೆ ಒತ್ತಾಯಸಿದರು.

ಪರಿಸರ ತಜ್ಞರು ಸಾರ್ವಜನಿಕರಿಂದ ಯಾರೊಬ್ಬರ ವಿರೋಧ ಬಂದರೂ ಸರ್ಕಾರ ಯೋಜನೆ ಕೈಬಿಡಬೇಕು. ಇಲ್ಲದಿದ್ದರೇ, ಮಲೆನಾಡಿನ ಜನರಿಗೆ ಅನ್ಯಾಯವೆಸಗಿದಂತೆ ಎಂದು ಅಭಿಪ್ರಾಯಪಟ್ಟರು.

ಅಹೋರಾತ್ರಿ ಧರಣಿ ನಿರತ ಪ್ರತಿಭಟನಾಕಾರರು ಭಜನೆ ಮಾಡಿದರು. ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಕೆ.ಇ.ಕಾಂತೇಶ್‌ ಸಹ ಭಜನೆಗೆ ಸಾಥ್‌ ಕೊಟ್ಟಿದ್ದು ವಿಶೇಷವಾಗಿತ್ತು.

ಅಹೋರಾತ್ರಿ ಧರಣಿಯಲ್ಲಿ ಮೈಸೂರು, ಹುಬ್ಬಳ್ಳಿ , ಚಿಕ್ಕಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ವಿವಿಧ ಸಂಘಟನೆಗಳು ಹಾಗೂ ಪರಿಸರವಾದಿಗಳು ಭಾಗವಹಿಸಿದ್ದರು

ಮಹಿಮಾ ಪಾಟೀಲ್, ಎಂ.ಶಂಕರ್, ಲಕ್ಪ್ಮೀ ಶಂಕರ್ ನಾಯ್ಕ, ಸುವರ್ಣ ಶಂಕರ್, ಈ.ವಿಶ್ವಾಸ್, ಶಿವಾಜಿ, ಅನಿತಾ, ಆಶಾ ಚನ್ನಬಸಪ್ಪ, ಲತಾಗಣೇಶ್, ಬಾಲು, ಶ್ರೀಕಾಂತ್, ಶ್ರೀಪತಿ, ಕುಮಾರಸ್ವಾಮಿ, ಜನಾರ್ಥನಪೈ, ಮಾದೇವಸ್ವಾಮಿ, ಗಿರೀಶ್ ಪಟೇಲ್, ನವ್ಯಶ್ರೀ ನಾಗೇಶ್, ಜಾಥವ್, ಉಮೇಶ್ ಆರಾಧ್ಯ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button