ಶಿವಮೊಗ್ಗ:ಅಡುಗೆ ಅನಿಲ ದಿಢೀರ ಬೆಲೆ ಏರಿಕೆ|ಕೇಂದ್ರದ ವಿರುದ್ದ ಯುವಕಾಂಗ್ರೆಸ್ ಪ್ರತಿಭಟನೆ|ಮೋದಿ, ಟ್ರಂಪ್ ಅಣುಕು ಪ್ರದರ್ಶನ
ಜವಳಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗವನ್ನ ಮತ್ತೆ ಸೌದೆ ಒಲೆ ಕಾಲಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗ: ಅಡುಗೆ ಅನಿಲ (ಗ್ಯಾಸ್ ಸಿಲೆಂಡರ್) ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್, ರಸ್ತೆಯ ಮೇಲೆ ಒಲೆ ಹಚ್ಚಿ ಟೀ ಮಾಡುವ ಮೂಲಕ ವಿನೂತನ ರೀತಿ ಪ್ರತಿಭಟನೆ ನಡೆಸಿತು.
ನಗರದ ಗೋಪಿ ವೃತ್ತದಲ್ಲಿ ನೆರೆದಿದ್ದ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಸಿಲೆಂಡರಗಳನ್ನು ಇಟ್ಟುಕೊಂಡು ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಿದರು.

ಜವಳಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗವನ್ನ ಮತ್ತೆ ಸೌದೆ ಒಲೆ ಕಾಲಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ, ಟ್ರಂಪ್ ಕೈಗೊಂಬೆಯಂತೆ ವರ್ತಿರುಸುತ್ತಿರುವುದು ಅಪಾಯಕಾರಿ ಎಂದು ಆಕ್ರೋಶ ಹೊರಹಾಕಿದರು.

ಪ್ರಧಾನಿ ನರೇಂದ್ರ ಮೋದಿ, ಹಾಗೂ ಟ್ರಂಪ್ ಮುಖವಾಡ ಧರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಮೇರಿಕ ಅಧ್ಯಕ್ಷ ಟ್ರಂಪ್ ಕೈಗೊಂಬೆಯಾಗಿ ಮೋದಿ ವರ್ತಿಸುವ ಮೂಲಕ ದೇಶದ ಹಿತ ಮರೆತು ರಾಜಿಯಾಗಿದ್ದಾರೆಂದು ಪ್ರಸ್ತುತ ಸನ್ನಿವೇಶದ ಅಣುಕು ಪ್ರದರ್ಶನ ಮಾಡಿದರು.
ಮೋದಿ ಹಾಗೂ ಟ್ರಂಪ್ ಮುಖವಾಡ ಧರಿಸಿದ ಕಾರ್ಯಕರ್ತನ ಕುತ್ತಿಗೆಗೆ ಬೆಲ್ಟ್ ಹಾಕಿ ಟ್ರಂಪ್ ಮೋದಿಯನ್ನ ಎಳೆದುಕೊಂಡು ಹೋಗುವಂತೆ ನಡೆದಾಡುವ ಮೂಲಕ ಆಕ್ರೋಶ ಹೊರಹಾಕಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್‌ಗೌಡ ಮಾತನಾಡಿ, ಗೃಹಬಳಕೆ ಸಿಲೆಂಡರ್ 60 ರೂಪಾಯಿ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ದರ 115 ರೂಪಾಯಿ ಏರಿಸಿದ್ದು, ಮೂರು ತಿಂಗಳಲ್ಲಿ 307 ರೂಪಾಯಿ ಏರಿಕೆ ಮಾಡಿದೆ ಎಂದು ಆರೋಪಿಸಿದರು
ಪ್ರತಿಭಟನೆಯಲ್ಲಿ ಮಾಜಿ ಕಾರ್ಪೋರೇಟರ್ ಹೆಚ್.ಸಿ.ಯೋಗೀಶ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ ಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.









