ಶಿವಮೊಗ್ಗ ಪ್ರೆಸ್ ಟ್ರಸ್ಟ್ಗೆ ನೂತನ ಪದಾಧಿಕಾರಿಗಳ ನೇಮಕ|ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಅಧ್ಯಕ್ಷರಾಗಿ ಪುನರಾಯ್ಕೆ|
ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಚಂದ್ರಶೇಖರ್ ಶೃಂಗೇರಿ, ರಾಮಚಂದ್ರ ಗುಣಾರಿ, ಆರಗ ರವಿ, ನಿರ್ಗಮಿತ ಖಜಾಂಚಿ ಜೇಸುದಾಸ್, ಸಂಪಾದಕರ ಸಂಘದ ಅಧ್ಯಕ್ಷ ಎಸ್.ಕೆ.ಗಜೇಂದ್ರ ಸ್ವಾಮಿ, ವಿ.ಸಿ.ಪ್ರಸನ್ನ, ಪಿ.ಸಿ.ನಾಗರಾಜ್, ಗೋವ ಮೋಹನಕೃಷ್ಣ, ವಿನಯ್ ಪುರದಾಳು, ಕಿರಣ್ ಕಂಕಾರಿ, ನವೀನ್ ಪುರದಾಳು, ಚಿರಾಗ್ ಸೇರಿದಂತೆ ಸರ್ವ ಟ್ರಸ್ಟಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಪ್ರತಿಷ್ಠಿತ ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಪುನರಾಯ್ಕೆ ಆಗಿದ್ದಾರೆ.
ಬುಧವಾರದಂದು ನಡೆದ ಟ್ರಸ್ಟಿಗಳ ಸಭೆಯಲ್ಲಿ ಎನ್ ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇನ್ನು ಉಪಾಧ್ಯಕ್ಷರಾಗಿ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿಯಾಗಿ ನಾಗರಾಜ್ ನೇರಿಗೆ, ಸಹಕಾರ್ಯದರ್ಶಿಯಾಗಿ ಸಂತೋಷ್ ಕಾಚಿನಕಟ್ಟೆ ಹಾಗೂ ಖಜಾಂಚಿಯಾಗಿ ಹಿರಿಯ ಪತ್ರಕರ್ತ ಹುಲಿಮನೆ ತಿಮ್ಮಪ್ಪ ಅವರುಗಳು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆ ಆದ ನೂತನ ಆಡಳಿತ ಮಂಡಳಿಗೆ ಸರ್ವಟ್ರಸ್ಟಿಗಳ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದೇ ವೇಳೆ ಪತ್ರಕರ್ತರ ಕ್ಷೇಮಾಬಿವೃದ್ಧಿಯ ಕುರಿತು ಚರ್ಚೆ ನಡೆಯಿತು.
ಶಿವಮೊಗ್ಗ ಪ್ರೆಸ್ಟ್ ವತಿಯಿಂದ ಪತ್ರಕರ್ತರಿಗಾಗಿ ಆರೋಗ್ಯ ನಿಧಿಯೊಂದನ್ನು ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಚಂದ್ರಶೇಖರ್ ಶೃಂಗೇರಿ, ರಾಮಚಂದ್ರ ಗುಣಾರಿ, ಆರಗ ರವಿ, ನಿರ್ಗಮಿತ ಖಜಾಂಚಿ ಜೇಸುದಾಸ್, ಸಂಪಾದಕರ ಸಂಘದ ಅಧ್ಯಕ್ಷ ಎಸ್.ಕೆ.ಗಜೇಂದ್ರ ಸ್ವಾಮಿ, ವಿ.ಸಿ.ಪ್ರಸನ್ನ, ಪಿ.ಸಿ.ನಾಗರಾಜ್, ಗೋವ ಮೋಹನಕೃಷ್ಣ, ವಿನಯ್ ಪುರದಾಳು, ಕಿರಣ್ ಕಂಕಾರಿ, ನವೀನ್ ಪುರದಾಳು, ಚಿರಾಗ್ ಸೇರಿದಂತೆ ಸರ್ವ ಟ್ರಸ್ಟಿಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.