“ಹರ್ ಘರ್ ತಿರಂಗಾ”ಅಭಿಯಾನ|ಬಿಜೆಪಿ ಯುವಮೋರ್ಚಾದಿಂದ ಬೈಕ್ ರ್ಯಾಲಿ|ಎಸ್.ಎನ್.ಚೆನ್ನಬಸಪ್ಪ,ಡಾ. ಧನಂಜಯ ಸರ್ಜಿ ಭಾಗಿ
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಯುವ ಮೋರ್ಛಾ ನಗರಾಧ್ಯಕ್ಷ ರಾಹುಲ್ ಬಿದರೆ, ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್ ಸೇರಿ ಹಲವರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ: 80ನೇ ಸ್ವಾತಂತ್ರ್ಯತೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾ “ತಿರಂಗಾ ಯಾತ್ರೆ” ಬೈಕ್ ರ್ಯಾಲಿಯನ್ನು ಮಂಗಳವಾರದಂದು ಹಮ್ಮಿಕೊಂಡಿತ್ತು.

ನೂರಾರು ಉತ್ಸಾಹಿ ಯುವಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದ ಬೈಕ್ ರ್ಯಾಲಿಗೆ ಶಾಸಕ ಎಸ್.ಎನ್.ಚೆನ್ನಬಸಪ್ಪ ಚಾಲನೆ ನೀಡಿದರು.
‘ಭಾರತ್ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಂ’ ಜಯಘೋಷಗಳೊಂದಿಗೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಈ ಬೈಕ್ ರ್ಯಾಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚೆನ್ನಬಸಪ್ಪ , ಸ್ವಾತಂತ್ರ್ಯೋತ್ಸವದ ಈ ಸಂಭ್ರಮವನ್ನು ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವಲ್ಲಿ ಯುವ ಮೋರ್ಚಾದ ನಿರಂತರ ಶ್ರಮ ಹಾಗೂ ಉತ್ಸಾಹ ಶ್ಲಾಘನೀಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ಯುವ ಮೋರ್ಛಾ ನಗರಾಧ್ಯಕ್ಷ ರಾಹುಲ್ ಬಿದರೆ, ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್ ಸೇರಿ ಹಲವರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಇನ್ನು ಅಭಿಯಾನದ ಅಂಗವಾಗಿ ನಾಳೆ ಆಗಸ್ಟ್ 12 ರಂದು ನಗರದಲ್ಲಿನ ಗಾಂಧಿ ಪ್ರತಿಮೆ, ಬಸವೇಶ್ವರ ಪ್ರತಿಮೆ, ವಿಶ್ವೇಶ್ವರಯ್ಯ ಪ್ರತಿಮೆ, ಶಿವಪ್ಪ ನಾಯಕ ಪ್ರತಿಮೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಲಿದೆ.
ಅದೇ ರೀತಿಯಾಗಿ ಆಗಸ್ಟ್ 14 ರಂದು ನಡೆಯುವ ಬೃಹತ್ ತಿರಂಗಾ ಯಾತ್ರೆಯ ಆಕರ್ಷಣೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ವಹಿಸಿದ ಹೋರಾಟಗಾರರ ಎಂಟು ಸ್ಥಬ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.