ತಜ್ಞ ವೈದ್ಯರ ಹಠಾತ್ ವರ್ಗಾವಣೆ|ಡಿಸಿ ಕಚೇರಿ ಆವರಣದಲ್ಲಿ ಜೆಡಿಎಸ್ ಪ್ರತಿಭಟನೆ|ಮರು ವರ್ಗಾವಣೆಗೆ ಆಗ್ರಹಿಸಿ,ಶಾಸಕಿ ಪೂರ್ಯಾನಾಯಕ ಹೋರಾಟ
ಶಿವಮೊಗ್ಗ ತಾಲೂಕು ಹೊಳಲೂರು, ಆಯನೂರು ಹಾಗೂ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರನ್ನು ರಾಜ್ಯ ಸರ್ಕಾರವು, ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದೆ ಎಂದು ಗ್ರಾಮಾಂತರ ಶಾಸಕಿ ಶಾರಾದಾ ಪೂರ್ಯಾನಾಯಕ್ ಆರೋಪಿಸಿದರು.

ಶಿವಮೊಗ್ಗ: ಸಮುದಾಯ ಕೇಂದ್ರಗಳ ತಜ್ಞ ವೈದ್ಯರ ವರ್ಗಾವಣೆ ಆದೇಶ ತಡೆಹಿಡಿದು ಹಿಂದಿನ ಸಿಎಂಸಿ ಕೇಂದ್ರಗಳಿಗೆ ಮರು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಶಾಸಕಿ ಶಾರಾದಾಪೂರ್ಯಾನಾಯಕ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಶನಿವಾರದಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಜಮಾಯಿಸಿದ್ದ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ತಾಲ್ಲೂಕು ಆಸ್ಪತ್ರೆ ಇಲ್ಲದ ಕಾರಣ, ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ತಜ್ಞ ವೈದ್ಯರ ಅಭಾವದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಚಿಕಿತ್ಸೆಗೆ ಪರದಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ತಾಲ್ಲೂಕು ಆಸ್ಪತ್ರೆ ಇಲ್ಲ|
ತಜ್ಞ ವೈದ್ಯರ ಅಭಾವವಿದೆ|
ʼಸಿಎಂʼ ಗೆ ಪೂರ್ಯಾನಾಯಕ ಮನವಿ|
ಶಿವಮೊಗ್ಗ ತಾಲೂಕು ಹೊಳಲೂರು, ಆಯನೂರು ಹಾಗೂ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರನ್ನು ರಾಜ್ಯ ಸರ್ಕಾರವು, ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದೆ ಎಂದು ಗ್ರಾಮಾಂತರ ಶಾಸಕಿ ಶಾರಾದಾ ಪೂರ್ಯಾನಾಯಕ್ ಆರೋಪಿಸಿದರು.

ಆರೋಗ್ಯ ಕೇಂದ್ರವನ್ನೇ ಅವಲಂಬಿಸಿರುವ ಜನತೆಗೆ ಹೆಚ್ಚುವರಿ ತಜ್ಞ ವೈದ್ಯರ ನೇಮಕ ಮಾಡದ ಸರ್ಕಾರವು, ಇರುವ ವೈದ್ಯರನ್ನು ತಾಲ್ಲೂಕು, ಜಿಲ್ಲಾಸ್ಪತ್ರೆಗಳಿಗೆ ವರ್ಗಾಯಿಸಿ ಬಡ ಜನರನ್ನ ಮತ್ತಷ್ಟು ಸಂಕಷ್ಟಕ್ಕೆ ನೂಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವು, ಸದನದಲ್ಲಿ ಪ್ರಸ್ತಾಪಿಸಿದ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಲೂಕು ಆಸ್ಪತ್ರೆ ಇಲ್ಲದ ಕಡೆ ಈಗಾಗಲೇ ಇರುವ ತಜ್ಞ ವೈದ್ಯರನ್ನು ಅಲ್ಲಿಂದ ವರ್ಗಾವಣೆ ಮಾಡುವುದಿಲ್ಲವೆಂಬ ಭರವಸೆ ನೀಡಿದ್ದರು. ಅದು ಈಗ ಹುಸಿಯಾಗಿದೆ ಎಂದು ಶಾಸಕಿ ಶಾರಾದಾ ಪೂರ್ಯಾನಾಯಕ್ ಕಿಡಿಕಾರಿದರು.
ಉಗ್ರ ಹೋರಾಟದ ಎಚ್ಚರಿಕೆ|
-ಕೆಬಿ ಪ್ರಸನ್ನ ಕುಮಾರ್|
ಬಡವರು ಹಾಗೂ ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ತಜ್ಞ ವೈದ್ಯರ ಮರು ವರ್ಗಾವಣೆ ಆದೇಶ ಹೊರಡಿಸಬೇಕು ಇಲ್ಲದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲೂಕು ಅಧ್ಯಕ್ಷ ಕೆಸೆಟ್ಟಿ ಸತೀಶ್, ನಗರಾಧ್ಯಕ್ಷ ದೀಪಕ್ ಸಿಂಗ್, ಜೆಡಿಎಸ್ ಗ್ರಾಮಾಂತರದ ಕಾರ್ಯಾಧ್ಯಕ್ಷ ಸೋಮಿನಕೊಪ್ಪ ಕಾಂತರಾಜ್. ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







