EducationKarnataka

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ|ವಿಜ್ಞಾನ,ಕಲೆ, ವಾಣಿಜ್ಯ ವಿಭಾಗದಲ್ಲಿ ಬಾಲಕಿಯರೇ ಟಾಪರ್ಸ್|2ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸ್!

ಕಳೆದ ವರ್ಷಕ್ಕಿಂತ ಈ ವರ್ಷ 70 ಸಾವಿರ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ತೋರಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಹೇಳಿದರು.

ಬೆಂಗಳೂರು: ಉಪಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ದ್ವಿತೀಯ ಪಿಯೂಸಿ ಫಲಿತಾಂಶ ಕೊನೆಗೂ ಗುರುವಾರದಂದು ಪ್ರಕಟವಾಗಿದೆ.

ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳಿಸಿ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ.

ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಸೇರಿ ಮೂರು ವಿಭಾಗದಲ್ಲಿ ಟಾಪ್ ಥ್ರೀ ಸ್ಥಾನಗಳಿಸಿ ರಾಜ್ಯಕ್ಕೆ ಕೀರ್ತಿ ತಂದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಇನ್ನು ಅಗ್ರಶ್ರೇಣಿ ಪಡೆದವರೆಷ್ಟು , ಅನುತ್ತೀರ್ಣರಾದವರು ಎಷ್ಟು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಂಕಿ ಅಂಶಗಳಲ್ಲಾದ ಬದಲಾವಣೆಗಳೇನು?̤

ಫಲಿತಾಂಶದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬ ಕಂಪ್ಲೀಟ್ ವರದಿಯನ್ನು ನಮ್ಮ ಶಿಕ್ಷಣ ವಿಭಾಗದ ವರದಿಗಾರ್ತಿ ಸೌಮ್ಯ ರೆಡ್ಡಿ ಅವರು ನೀಡಿದ ವರದಿ ಇಲ್ಲಿದೆ.

ಕಳೆದ ಬಾರಿಗಿಂತ 2026 ನೇ ಸಾಲಿನ ದ್ವಿತೀಯ ಪಿಯೂಸಿ ಫಲಿತಾಂಶದಲ್ಲಿ 13.03% ಫಲಿತಾಂಶದಲ್ಲಿ ಹೆಚ್ಚಳವಾಗಿದೆ.

ಹಾಗೇ ಕಳೆದ ವರ್ಷಕ್ಕಿಂತ ಈ ವರ್ಷ 70 ಸಾವಿರ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ತೋರಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಹೇಳಿದರು.

ಗುರುವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 86.48% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷೆಯಂತೇ ಬಾಲಕಿಯರು ಶೇ.88.70% ಬಾಲಕಿಯರು ಉತ್ತೀರ್ಣರಾಗುವ ಮೂಲಕ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಶೇ.83.65% ಬಾಲಕರು ಉತ್ತೀರ್ಣರಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ‌

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಲರ್ನಿಂಗ್ ಪಿಯೂ ಕಾಲೇಜಿನ ವಿದ್ಯಾರ್ಥಿನಿ ಪ್ರಿನ್ಸಿಲಾ ಕಾರ್ಡೋಜಾ, 600/599 ಅಂಕಗಳಿಸಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನ ಅದಿತಿ ಬಾಪು, ಮಂಗಳೂರಿನ ಆಳ್ವಾಸ್ ಕಾಲೇಜಿನ ದಿಶಾ, 600/600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಅದಿತಿ ಬಾಪು

ಇನ್ನು ಕಲಾ ವಿಭಾಗದಲ್ಲಿ , ಸೃಷ್ಠಿ, ಸಂಗೀತಾ ಅರ್ಚನಾ, ಮೂವರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದುಕೊಂಡಿರುವುದು ಈ ಬಾರಿಯ ವಿಶೇಷ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸೃಷ್ಟಿ ಪಾಟೀಲ್‌

ಸೈನ್ಸ್ ವಿಭಾಗದಲ್ಲಿ 598 ಅಂಕವನ್ನು 12 ಮಂದಿ ವಿದ್ಯಾರ್ಥಿಗಳು ಪಡೆದು ರಾಜ್ಯಕ್ಕೆ ದ್ವಿತೀಯರಾದರೆ, 597 ಅಂಕವನ್ನ19 ವಿದ್ಯಾರ್ಥಿಗಳು ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿನಿಯರು 598 ಅಂಕಪಡೆದು ಫಸ್ಟ್ ಬಂದರೆ, 595 ಅಂಕಗಳಿಸಿದ ಐವರು ವಿದ್ಯಾರ್ಥಿಗಳು ಎರಡನೇ ಸ್ಥಾನ, 8 ಮಂದಿ ವಿದ್ಯಾರ್ಥಿಗಳು, 594 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಸರ್ಕಾರಿ ಕಾಲೇಜಿನಲ್ಲಿ ರಿಸಲ್ಟ್‌ನಲ್ಲಿ ಹಿಂದೆ ಇರುತ್ತೇ ಎಂಬ ಅಪವಾದವನ್ನು ಈ ಬಾರಿ ವಿದ್ಯಾರ್ಥಿಗಳು ಶೇ.75% ಹೆಚ್ಚು ಅಂಕಗಳಿಸುವ ಮೂಲಕ ಆ ಆಪಾದನೆಯನ್ನು ಅಳಿಸಿ ಹಾಕಿದ್ದಾರೆ.

ರಾಜ್ಯದಲ್ಲಿ 1,70,529 ವಿದ್ಯಾರ್ಥಿಗಳು ಶೇಕಡಾ 75% ಕ್ಕಿಂತ ಹೆಚ್ಚು ಅಂಕಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದರೇ, ಅದರಲ್ಲಿ ಸರ್ಕಾರಿ ಕಾಲೇಜಿನ ಮಕ್ಕಳು 15ಸಾವಿರ ಮೀರಿದ್ದು ಈ ಬಾರಿಯ ಸಾರ್ವಕಾಲಿಕ ದಾಖಲೆಯಾಗಿದೆ.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಮೊದಲ ಮೂರು ಪರೀಕ್ಷೆಗಳು ಮುಗಿದಿತ್ತಷ್ಟೇ, ದಿಶಾ ತಾಯಿ ಆಕಸ್ಮಿಕವಾಗಿ ನಿಧನರಾದರು.

ವಾಣಿಜ್ಯ ವಿಭಾಗದ ಟಾಪರ್ ದಿಶಾ

ಬರೆಯಲಾಗದ ಈ ಸಂಕಷ್ಟದ ಸಮಯದಲ್ಲಿ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ತೊಟ್ಟು ದುಃಖವನ್ನೆಲ್ಲ ಅದುಮಿಟ್ಟುಕೊಂಡು ಪರೀಕ್ಷೆ ಬರೆದರು.

ಆಗ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸಂಪೂರ್ಣ ಬೆಂಬಲವಾಗಿ ನಿಂತರು. ಅದರ ಫಲ ಹಾಗೂ ತಾಯಿಯ ಆಶೀರ್ವಾದ ಅವಳಿಗೆ ಸಿಕ್ಕಿದೆ.

ರಿಸಲ್ಟ್‌ ಬಂದ ಕೂಡಲೇ ಅವಳು ಹೇಳಿದ್ದಿಷ್ಟೇ! ಅಮ್ಮನಿಗೋಸ್ಕರವಾದರೂ ನಾನು ಸಾಧಿಸಬೇಕಿತ್ತು.

ಇನ್ನು ರಾಜ್ಯದಲ್ಲಿ ಪ್ರಥಮ ಶ್ರೇಣಿಯಲ್ಲಿ 2 ಲಕ್ಷ 95 ಸಾವಿರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, 64 ಸಾವಿರ ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ಪಡೆದು ಉತ್ತೀರ್ಣರಾಗಿದ್ದರೇ, 16, ಸಾವಿರ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.

ಇನ್ನು ಈ ಬಾರಿಯ ಫಲಿತಾಂಶದಲ್ಲಿ ಪ್ರತಿ ಬಾರಿಯಂತೆ ಉಡುಪಿ ಫಸ್ಟ್ , ಯಾದಗಿರಿ ಲಾಸ್ಟ್ ಬಂದರೇ, ಶಿವಮೊಗ್ಗ ಜಿಲ್ಲೆಗೆ 14 ನೇ ಸ್ಥಾನ ಲಭಿಸಿದೆ

ಈ ಬಾರಿಯ ಒಟ್ಟಾರೇ, ಫಲಿತಾಂಶದ ವಿಶೇಷತೆಯಲ್ಲಿ ಫೇಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ. ಕಳೆದ ವರ್ಷ ಫೇಲಾದ ವಿದ್ಯಾರ್ಥಿಗಳ ಸಂಖ್ಯೆ 31 ಸಾವಿರ ಇತ್ತು. ಈ ಬಾರಿ 1772 ಕ್ಕೆ ಇಳಿಕೆಯಾಗಿದೆ.

Follow Us

Leave a Reply

Your email address will not be published. Required fields are marked *

Back to top button