CrimeDharwadGadagKarnatakaNational

ಕಾನೂನು ಸಚಿವರ ಭೂಒತ್ತುವರಿ ಅಪರಾಧ ಸಾಬೀತು|ಎಚ್‌.ಕೆ.ಪಾಟೀಲ್‌ರನ್ನು ಹೊರದಬ್ಬಲು ಸುಪ್ರೀಂಕೋರ್ಟ್‌ ಆದೇಶ|ರಾಜೀನಾಮೆ ಕೊಡ್ತಾರಾ? ಹುಲಕೋಟಿ ಗೌಡರು!

ರಾಜ್ಯದಲ್ಲಿ ಸಂಭಾಯಿತ, ಸುಶಕ್ಷಿತ, ವಿದ್ಯಾವಂತ ಎಂದು ಗುರುತಿಸಿಕೊಂಡಿದ್ದ ಹನುಮಂತಗೌಡ ಕೃಷ್ಣಗೌಡ ಪಾಟೀಲ್‌ ಅಲಿಯಾಸ್‌ ಎಚ್‌.ಕೆ.ಪಾಟೀಲ್‌. ತಮ್ಮ 71ನೇ ವಯಸ್ಸಿನಲ್ಲಿ ಅದೆಲ್ಲವನ್ನು ಸ್ವಯಂ ಅಪರಾಧದಿಂದಲೇ ಕಳೆದುಕೊಳ್ಳುವಂತ ಪರಿಸ್ಥಿತಿ ಒದಗಿ ಬಂದಿದೆ.

ಬೆಳ್ಳಗಿರೋದೆಲ್ಲ ಹಾಲಲ್ಲ.. ಎಂಬ ಗಾದೆ ಮಾತು ಈಗ ಅಕ್ಷರಶಃ ರಾಜ್ಯದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ರಿಗೆ ಅನ್ವಯಿಸುವದರಲ್ಲಿ ಯಾವುದೇ ಸಂಶಯವಿಲ್ಲ.

ಈವರೆಗೆ ರಾಜ್ಯದಲ್ಲಿ ಸಂಭಾಯಿತ, ಸುಶಕ್ಷಿತ, ವಿದ್ಯಾವಂತ ಎಂದು ಗುರುತಿಸಿಕೊಂಡಿದ್ದ ಹನುಮಂತಗೌಡ ಕೃಷ್ಣಗೌಡ ಪಾಟೀಲ್‌ ಅಲಿಯಾಸ್‌ ಎಚ್‌.ಕೆ.ಪಾಟೀಲ್‌. ತಮ್ಮ 71ನೇ ವಯಸ್ಸಿನಲ್ಲಿ ಅದೆಲ್ಲವನ್ನು ಸ್ವಯಂ ಅಪರಾಧದಿಂದಲೇ ಕಳೆದುಕೊಳ್ಳುವಂತ ಪರಿಸ್ಥಿತಿ ಒದಗಿ ಬಂದಿದೆ.

ಈವರೆಗೆ ಊರಿಗೆ ಉಪದೇಶ ಮಾಡುತ್ತಿದ್ದ ಎಚ್‌.ಕೆ.ಪಾಟೀಲ್‌ರು ಈಗ ಅದೇ ಊರಿನ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಪ್ರಸಂಗ ಒದಗಿಬಂದಿದೆ.

ಹುಬ್ಬಳ್ಳಿಯಲ್ಲಿ ಎಚ್.ಕೆ.ಪಾಟೀಲ್‌ ಮತ್ತು ಅವರ ಸಹೋದರರು ಒತ್ತುವರಿ ಮಾಡಿಕೊಂಡಿದ್ದ ಭೂಮಿಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಗದುಗಿನ ಹುಲಿ ಎಂದೇ ಕರೆಯಲ್ಪಡುತ್ತಿದ್ದ ಮಾಜಿ ಸಚಿವ ದಿಂ. ಕೆ.ಹೆಚ್.ಪಾಟೀಲ್‌ ಅವರು ರಾಜಕಾರಣದಲ್ಲಿ ಗಟ್ಟಿತನ ಮತ್ತು ಸ್ವಲ್ಪ ಹುಂಬ ಸ್ವಭಾವದವರು ಎಂದು ಗುರುತಿಸಲಾಗುತ್ತಿತ್ತು.

ಜನರೊಂದಿಗೆ ಸದಾ ಬೆರೆಯುತ್ತಿದ್ದ ಅವರು ಈ ಭಾಗದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಒಂದು ಕಾಲಕ್ಕೆ ಸಿಎಂ ಹುದ್ದೆಯ ಹತ್ತಿರ ಬಂದು ಹೋಗಿದ್ದರು.

ಅವರ ಮಾತು, ನಡೆ ನುಡಿ, ನಿರ್ಧಾರ ಅವರನ್ನು ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಕಾಂಗ್ರೆಸ್‌ ಪಕ್ಷದಲ್ಲಿ ಎತ್ತರಕ್ಕೆ ಬೆಳೆಸಿಕೊಂಡು ಹೋಗುವಂತೆ ಮಾಡಿತ್ತು.

ಆದರೆ ಅವರ ಒಂದು ಅಂಶವನ್ನು ಪುತ್ರ ಎಚ್.ಕೆ.ಪಾಟೀಲ್‌ರು ಬೆಳಸಿಕೊಳ್ಳಲಿಲ್ಲ. ತಮ್ಮದೇ ಐಎಎಸ್‌ ಗತ್ತಿನಲ್ಲಿಯೇ ಈವರೆಗೆ ಬಂದ ಪರಿಣಾಮ, ಸತತ ಎರಡು ಚುನಾವಣೆಯಲ್ಲಿ ಸೋತು ಅಜ್ಞಾತವಾಸ ಅನುಭವಿಸಿದ್ದರು.

ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರೊಂದಿಗೆ ಕೆ.ಹೆಚ್.ಪಾಟೀಲ್

ಬಹುಶಃ ಕೆ.ಹೆಚ್.ಪಾಟೀಲ್‌ರು ಈಗ ಜೀವಂತವಿದ್ದಿದ್ದರೇ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ನೈಜ ಮಾಲೀಕರಿಗೆ ಕೊಟ್ಟು ಬಿಡುತ್ತಿದ್ದರು. ‌

ಆದರೆ ದುರಾಸೆಗೆ ಬಿದ್ದ ಎಚ್.ಕೆ.ಪಾಟೀಲ್‌ ಈಗ ವೃದ್ದಾವಸ್ಥೆಯಲ್ಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಈಗ 60 ವರುಷಗಳ ಹಿಂದೆ ಹುಬ್ಬಳ್ಳಿಯ ಪಿಂಟೋ ರಸ್ತೆಯಲ್ಲಿರುವ 15 ಗುಂಟೆ ಜಾಗೆಯನ್ನು ಮಾಜಿ ಸಚಿವ ಕೆ.ಹೆಚ್.ಪಾಟೀಲ್‌ರು ಸಿದ್ಲಿಂಗಪ್ಪ ಬುಳ್ಳಾ ಎಂಬುವವರಿಂದ ಉಪಬಾಡಿಗೆ ಪಡೆದಿದ್ದರು. (ನೋಡಿ ಇಲ್ಲಿ ಅಸಲಿಗೆ ಭೂಮಿ ಮಾಲೀಕರು ಕೆ.ಹೆಚ್‌.ಪಾಟೀಲ್‌ರಿಗೆ ನೇರವಾಗಿ ಬಾಡಿಗೆಯನ್ನು ಸಹ ನೀಡಿರಲಿಲ್ಲ.

ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮತ್ತು ಬ್ರದರ್ಸ್‌ 1964ರಿಂದ ಕಬಳಿಸಿರುವ ಹುಬ್ಬಳ್ಳಿ ಪಿಂಟೋ ರಸ್ತೆಯಲ್ಲಿನ ಜಾಗೆಯಲ್ಲಿರುವ ಕಟ್ಟಡ
ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮತ್ತು ಬ್ರದರ್ಸ್‌ 1964ರಿಂದ ಕಬಳಿಸಿರುವ ಹುಬ್ಬಳ್ಳಿ ಪಿಂಟೋ ರಸ್ತೆಯಲ್ಲಿನ ಜಾಗೆಯಲ್ಲಿರುವ ಕಟ್ಟಡ

ಮತ್ತು ಇಲ್ಲಿ ಬಾಡಿಗೆ ಪಡೆದಿದ್ದ ಸಿದ್ದಲಿಂಗಪ್ಪ ಅವರು ತಮಗೆ ನೀಡಿದ್ದ ಬಾಡಿಗೆಯ ಜಾಗೆಯ ಭಾಗದಲ್ಲಿ ಕೆ.ಹೆಚ್.ಪಾಟೀಲ್‌ರಿಗೆ ಉಪಬಾಡಿಗೆ ನೀಡಿದ್ದರು. ಆದರೆ ಕಾನೂನು ಪ್ರಕಾರ ಉಪಬಾಡಿಗೆ ನೀಡುವುದು ಅಥವಾ ಬಾಡಿಗೆಗೆ ಪಡೆಯುವದು ಸಹ ಅಪರಾಧ ಎಂಬುದನ್ನು ಗಮನಿಸಬಹುದು. )

ಮುಂದೆ ಅದೇ ಒತ್ತುವರಿ ಭೂಮಿಯಲ್ಲಿ ಕಟ್ಟಡವೊಂದನ್ನು ಕಟ್ಟಿ ಅಲ್ಲಿ ತಮ್ಮದೇ ಸಂಪಾದಕತ್ವದ ವಿಶಾಲ ಕರ್ನಾಟಕ ದಿನಪತ್ರಿಕೆಯ ಕಚೇರಿಯನ್ನಾಗಿ ಮಾಡಿಕೊಂಡಿದ್ದರು.

ಇವತ್ತಿಗೂ ಈ ಕಟ್ಟಡವನ್ನು ವಿಶಾಲಕರ್ನಾಟಕ ಬಿಲ್ಡಿಂಗ್‌ ಎಂದೇ ಹೆಸರುವಾಸಿ. ಕೆ.ಹೆಚ್.ಪಾಟೀಲ್‌ ಅವರು ಇರುವ ತನಕ ಈ ಕಟ್ಟಡವು ರಾಜಕೀಯ ಶಕ್ತಿ ಕೇಂದ್ರವಾಗಿತ್ತು.

ಕೆ.ಹೆಚ್.ಪಾಟೀಲ್‌ರು ಇಲ್ಲಿಗೆ ಬಂದರೇ ಈ ಬಿಲ್ಡಿಂಗನ ಮುಂದೆ ರಾಜಕೀಯ ನಾಯಕರು, ನೂರಾರು ಕಾರ್ಯಕರ್ತರು ಜಮಾಯಿಸುತ್ತಿದ್ದರು.

ಆದರೆ ಈ ಕಟ್ಟಡ ಮತ್ತು ಜಾಗೆ ಎಲ್ಲವು ಕೆ.ಹೆಚ್.ಪಾಟೀಲ್‌ ಅಥವಾ ಎಚ್‌ಕೆಪಿ ಅವರದ್ದಾಗಿರಲಿಲ್ಲ.

ಇದರ ಹಾಲಿ ಮಾಲೀಕರಾದ ಜಕ್ಕವ ಕಂಪ್ಲಿ ಅವರಿಗೆ ನ್ಯಾಯಯುತವಾಗಿ ಬಿಟ್ಟುಕೊಟ್ಟು ಬಿಟ್ಟಿದ್ದರೇ ಬಹುಶಃ ಎಚ್.ಕೆ.ಪಾಟೀಲ್‌ ದೊಡ್ಡ ಮನುಷ್ಯರಾಗಿರುತ್ತಿದ್ದರು.

ಆಗಿನ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ಮೈಸೂರು ಪ್ರದೇಶ ಕಾಂಗ್ರೆಸ್‌ ಕಾರ್ಯದರ್ಶಿಯಾಗಿದ್ದ ಕೆ.ಹೆಚ್.ಪಾಟೀಲ್

ಆದರೆ ದುರಾಸೆ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಯಿತು. ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಬಿಟ್ಟುಕೊಡಲ್ಲ ಎಂದು ಎಚ್.ಕೆ.ಪಾಟೀಲ್‌ ಹಠಕ್ಕೆ ಬಿದ್ದರು.

ಮಾಜಿ ಸಚಿವ ಕೆ.ಹೆಚ್.ಪಾಟೀಲ್‌ರು ಜೀವಂತವಿದ್ದಾಗಲೇ ನೂರಾರು ಎಕರೆ ಭೂಮಿ, ಆಸ್ತಿ ಐಶ್ವರ್ಯವನ್ನು ಮಕ್ಕಳಿಗೆ ಮಾಡಿಟ್ಟಿದ್ದರು.

ಹುಲಕೋಟಿ ಸೇರಿದಂತೆ ರಾಜ್ಯದ ವಿವಿದೆಡೆ ಪಾಟೀಲ್‌ ಕುಟುಂಬಕ್ಕೆ ಹತ್ತು ಜನ್ಮಕ್ಕೂ ಆಗುವಷ್ಟು ಆಸ್ತಿ ಪಾಸ್ತಿ ಇದೆ.

ಉಪಬಾಡಿಗೆದಾರ ಎಚ್.ಕೆ.ಪಾಟೀಲ್‌ ಅವರು ಮತ್ತೊಬ್ಬರಿಗೆ ಬಾಡಿಗೆ? ನೀಡಿರುವುದು

ಆದರೂ ಇನ್ನೊಬ್ಬರ ಆಸ್ತಿ ಮೇಲೆ ಕಣ್ಣು ಹಾಕಿ ಕಬಳಿಸಲು ಮುಂದಾದ ಸಂಭಾಯತ (?) ಎಚ್‌.ಕೆ.ಪಾಟೀಲ್‌ರು, ಶತಾಯಗತಾಯ ಒತ್ತುವರಿ ಭೂಮಿ ದಕ್ಕಿಸಿಕೊಳ್ಳಲು ಮುಂದಾಗಿಬಿಟ್ಟರು.

ತಮಗಿರುವ ಹೈಇನ್‌ಫ್ಲೂಯೆನ್‌ ಅನ್ನು ಈ ಒತ್ತುವರಿ ಭೂಮಿ ಉಳಿಸಿಕೊಳ್ಳಲು ಬಳಸಿಕೊಂಡರು. ಅದರ ಪರಿಣಾಮ ಸತತ 60 ವರುಷದಿಂದ ಹಾಲಿ ಭೂಮಿಯ ಮಾಲೀಕರಾದ ಜಕ್ಕವ್ವ ಕಂಪ್ಲಿ ಅವರಿಗೆ ಭೂಮಿ ದಕ್ಕದಂತೇ ಮಾಡುವಲ್ಲಿ ಎಚ್.ಕೆ.ಪಾಟೀಲ್‌ರು ಯಶಸ್ವಿಯಾಗಿದ್ದರು.

1964ರಿಂದಲೂ ಬಾಡಿಗೆದಾರ ಸಿದ್ದಲಿಂಗಪ್ಪ ಬುಳ್ಳಾ ಮತ್ತು ಮೂಲ ಮಾಲೀಕರ ಮಧ್ಯೆ ಕಾನೂನು ಹೋರಾಟ ನಡೆದಿತ್ತು. ಈ ಜಾಗೆಯಲ್ಲಿ ಬುಳ್ಳಾ ಸೇರಿದಂತೆ ಹಲವರು ಬಾಡಿಗೆದಾರರಿದ್ದರು.

ಈ ಮಧ್ಯೆ 12 ವರುಷದಿಂದ ತಾವು ಬಾಡಿಗೆ ಇರುವದರಿಂದ ಈ ಭೂಮಿಯ ಒಡೆತನ ತಮಗೆ ಸೇರಬೇಕು ಎಂದು ಸ್ಥಳಿಯ ನ್ಯಾಯಾಲಯದಲ್ಲಿ ಬಾಡಿಗೆದಾರ ಸಿದ್ದಲಿಂಗಪ್ಪ ಬುಳ್ಳಾ ದಾವೆ ಹೂಡಿದ್ದರು.

ಬಳಿಕ ಇಲ್ಲಿಂದ ಶುರು ಆದ ದಾವೆ ಹೂಡಿಕೆಗಳು ಜಿಲ್ಲಾ, ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೆ ಹೋಯಿತು.

ಆದರೆ ಮೋಸದಿಂದ ಭೂಮಿ ಕಬಳಿಸಲು ಹೊರಟಿದ್ದ ಬಾಡಿಗೆದಾರ ಸಿದ್ದಲಿಂಗಪ್ಪ ಬುಳ್ಳಾ ಅವರಿಗೆ ಯಾವ ನ್ಯಾಯಾಲಯಗಳಲ್ಲಿಯು ಗೆಲುವು ದೊರೆಯಲೇ ಇಲ್ಲ.

ಕೊನೆಗೆ 2023ರಲ್ಲಿ ಬಾಡಿಗೆದಾರ ಸಿದ್ದಲಿಂಗಪ್ಪ ಬುಳ್ಳಾ ಅವರನ್ನು ಈ ಕೂಡಲೇ ಜಾಗೆಯಿಂದ ಹೊರಹಾಬೇಕಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ಆದೇಶ ಹೊರಡಿಸಿತು.

ಬಾಡಿಗೆದಾರ ಸಿದ್ದಲಿಂಗಪ್ಪ ಬುಳ್ಳಾ ಅವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನ ನಂತರವಾದರೂ ಕಾನೂನು ಸಚಿವ ಎಚ್.ಕೆ.ಪಾಟೀಲ್‌ರು ಬುದ್ದಿ ಕಲಿಯಬೇಕಾಗಿತ್ತು.

ಒಂದೆಡೆ ಮಂತ್ರಿಗಿರಿಯ ದೌಲತ್ತು, ಅಧಿಕಾರ, ಹಣ ಸೇರಿದಂತೆ ಹೈ ಇನ್‌ಫ್ಲೂಯೇನ್ಸ್‌ ಇದ್ದ ಎಚ್‌.ಕೆ.ಪಾಟೀಲ್‌ರಿಗೆ ಸುಪ್ರೀಂಕೋರ್ಟ್‌ನಲ್ಲಿ ಗೆಲ್ಲತೀನಿ ಎಂಬ ಅಹಂಕಾರ ಬೆಳೆದಿತ್ತು.

ಅದಾಗಲೇ ಉಪಬಾಡಿಗೆದಾರರಾಗಿದ್ದ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಅವರು ಸಿಟಿಎಸ್‌ ನಂ 504/b ಜಾಗೆಯಲ್ಲಿ 12 ವರುಷಕ್ಕಿಂತಲೂ ಹೆಚ್ಚು ವರುಷಗಳಿಂದ ತಾವು ವಾಸವಾಗಿದ್ದರಿಂದ ಈ ಭೂಮಿ ತಮ್ಮದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Once again ಇಲ್ಲಿಯೂ ಸಹ ಸ್ಥಳೀಯ ನ್ಯಾಯಾಲಯದದಿಂದ ಸುಪ್ರೀಂಕೋರ್ಟ್‌ವರೆಗೆ ಎಚ್.ಕೆ.ಪಾಟೀಲ್‌, ಬೇಕೆಂತಲೇ ಕಾಲ ಹರಣ ಮಾಡುತ್ತಲೇ ಬಂದರು.

ಆದರೆ ನ್ಯಾಯದೇವತೆಯು ನ್ಯಾಯದ ಪರವಾಗಿ ನಿಂತ್ತಿತ್ತು. ಸ್ಥಳೀಯ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೂ ಎಚ್‌.ಕೆ,ಪಾಟೀಲ್‌ ಭೂಮಿ ಒತ್ತುವರಿ ಮಾಡಿದ್ದೇ ಸಾಬೀತಾಯಿತು. ಎಲ್ಲಿಯು ಎಚ್.ಕೆ.ಪಾಟೀಲ್‌ ಅವರಿಗೆ ಗೆಲವು ಸಿಗಲಿಲ್ಲ.

ಕೊನೆಗೆ ಸುಪ್ರೀಂಕೋರ್ಟ್‌ನ ಪೀಠವು ಭೂಮಿಯ ನೈಜ ಮಾಲೀಕರು ಆದ ಅಂಗವಿಕಲ ಮಹಿಳೆಗೆ ಆದ ಅನ್ಯಾಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸಂಜಯಕುಮಾರ್‌ ಹಾಗೂ ಅಲೋಕ ಅರಾಧೆ ಅವರಿದ್ದ ಪೀಠ, ಈ ಕೂಡಲೇ ಒತ್ತುವರಿ ಮಾಡಿರುವ ಜಾಗೆಯಿಂದ ಎಚ್‌.ಕೆ.ಪಾಟೀಲ್‌ ಮತ್ತು ಬ್ರದರ್ಸ್‌ಗಳನ್ನು ಹೊರಹಾಕುವಂತೇ ಆದೇಶ ಹೊರಡಿಸಿದೆ.

ಮೂಲ ಬಾಡಿಗೆದಾರರೇ (ಸಿದ್ದಲಿಂಗಪ್ಪ ಬುಳ್ಳಾ) ಹೊರಹೋಗಿದ್ದಾರೆ. ಉಪಬಾಡಿಗೆದಾರರಾದ ನೀವು ಹೋರಹೋಗಲೇ ಬೇಕು ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಎಚ್.ಕೆ.ಪಾಟೀಲ್‌ ಮತ್ತು ಬ್ರದರ್ಸಗಳು ಭೂಮಿ ಒತ್ತುವರಿ ಮಾಡಿರುವುದು ಸಾಬೀತಾಗಿದ್ದರಿಂದ, ಎಚ್.ಕೆ.ಪಾಟೀಲ್‌ ಅವರು ಕರ್ನಾಟಕದ ಕಾನೂನು ಸಚಿವ ಎಂಬುದು ಸುಪ್ರೀಂಕೋರ್ಟ್‌ಗೆ ಗೊತ್ತಿದ್ದರೂ ಸಹ ಅವರನ್ನು ಜಾಗೆಯಿಂದ ಹೊರದಬ್ಬಲು ಖಡಕ ಆದೇಶ ನೀಡಿದೆ.

ಈ ಮೂಲಕ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಎಚ್.ಕೆ.ಪಾಟೀಲ್‌ ನೈತಿಕತೆಯಿಂದ ರಾಜೀನಾಮೆ ನೀಡಲು ಮುಂದಾಗುತ್ತಾರಾ? ಅಥವಾ ತಮ್ಮ ಕಾನೂನು ಸಚಿವರೇ ಭೂ ಒತ್ತುವರಿ ಪ್ರಕರಣದಲ್ಲಿ ಅಪರಾಧ ಎಸಗಿದ್ದು ಸಾಬೀತಾಗಿದ್ದರಿಂದ ಈ ಕೂಡಲೇ ಸಚಿವ ಸ್ಥಾನದಿಂದ ಸಿಎಂ ಸಿದ್ದರಾಮಯ್ಯ ಕೈ ಬಿಡ್ತಾರಾ ಕಾದು ನೋಡಬೇಕಿದೆ.

ಏನೇ ಇರಲಿ…ಹುಲಕೋಟಿಯ ಅಂತಹ ಅಂತಹ ದೊಡ್ಡ ಶ್ರೀಮಂತ ಕುಟುಂಬವನ್ನು ಎದುರು ಹಾಕಿಕೊಂಡು ಯಾವುದಕ್ಕೂ ಬಗ್ಗದೇ ದಶಕಗಳಿಂದ ಜಕ್ಕವ್ವ ಕಂಪ್ಲಿ ಅವರು ನಡೆಸಿದ ಹೋರಾಟ ನಿಜಕ್ಕೂ ದೊಡ್ಡ ಸಾಧನೆಯೇ ಹೌದು. ಸುಪ್ರೀಂಕೋರ್ಟ್‌ನ ಈ ತೀರ್ಪು ಎಲ್ಲ ಒತ್ತುವರಿದಾರರಿಗೆ ಎಚ್ಚರಿಕೆ ಗಂಟೆಯಾಗಲಿದೆ ಎಂಬುದು ಮಾತ್ರ ನಿಜ.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button