Shivmogga Hindu ಮಹಾಸಭಾ ಗಣಪನ ಸಂಭ್ರಮಕ್ಕೆ ಅದ್ದೂರಿ ತೆರೆ – ತುಂಗಾ ತಟದಲ್ಲಿ ಗಜಮುಖನ ವಿಸಜ೯ನೆ
ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವದ ದಾರಿಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಭಕ್ತಸಮೂಹದಲ್ಲಿ ಯುವ ಸಮೂಹ ಹೆಚ್ಚಾಗಿ ಕಂಡು ಬಂದಿತು.

ಕಳೆದ 11 ದಿನಗಳಿಂದ ಇಡೀ ಶಿವಮೊಗ್ಗಕ್ಕೆ ಭಕ್ತಿಯ ಕಳೆ ತಂದಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಭಾನುವಾರದಂದು ಬೆಳಗಿನ ಜಾವ ತುಂಗಾ ತಟದ ಭೀಮನ ಮಡುವಿನಲ್ಲಿ ಸಂಭ್ರಮದಿಂದ ವಿಸಜ೯ನೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಇದಕ್ಕೆ ಸಾಕ್ಷಿಯಾದರು.
ಕೋಟೆ ಭೀಮೇಶ್ವರ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಗೆ ಶನಿವಾರದಂದು ಬೆಳ್ಗಗೆ ಮಹಾಂಗಳಾರತಿ ಪೂಜೆ ನೆರವೇರಿಸಿ ಪಲ್ಲಕ್ಕಿ ಹೊರುವ ಮೂಲಕ ತರೆದ ವಾಹನದಲ್ಲಿ ಕೂರಿಸಿ ಕೇಸರಿ ಬಲೂನ್ ಹಾರಿಬಿಡುವ ಮೂಲಕ ಶಾಸಕ ಚೆನ್ನಬಸಪ್ಪ ವಿದ್ಯುಕ್ತ ಚಾಲನೆ ನೀಡಿದ್ದರು. ಈ ಸಂದಭ೯ದಲ್ಲಿ ಹಿಂದೂ ಮಹಾ ಸಭಾದ ಹಲವು ಮುಖಂಡರುಗಳು ಜೊತೆಗಿದ್ದರು.

ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವದ ದಾರಿಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಭಕ್ತಸಮೂಹದಲ್ಲಿ ಯುವ ಸಮೂಹ ಹೆಚ್ಚಾಗಿ ಕಂಡು ಬಂದಿತು. ಜಾನಪದ ಕಲಾತಂಡಗಳ ಕುಣಿತ ವಾದ್ಯ ಮೇಳಗಳು ಮೆರವಣಿಗೆ ಆಮೆಗತಿಯಲ್ಲಿ ಸಾಗಿತು.
ವಾದ್ಯಮೇಳಗಳ ಜೊತೆ ಕೀಲುಕುದುರೆ, ಚಂಡೆ, ಮದ್ದಳೆ, ಕಂಸಾಳೆ,ಹೀಗೆ ಜಾನಪದ ಕಲಾವಿದರ ಜೊತೆ ಮೆರವಣಿಗೆ ಮತ್ತಷ್ಟು ರಂಗೇರಿತ್ತು.
ನಗರದ ಪ್ರಮುಖ ವೃತ್ತಗಳಲ್ಲಿ ಹಲವು ಸಂಘ ಸಂಸ್ಥೆಗಳು ರಸ್ತೆಯ ಇಕ್ಕೆಲಗಳಲ್ಲಿ ತಂಪುಪಾನೀಯ, ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದರು..
ಪಕ್ಷ ಭೇದ ಮರೆತು ಮಾಜಿ ಕಾರ್ಪೊರೇಟರ್ ಹೆಚ್ ಸಿ ಯೋಗೀಶ್, ಕಾಶಿವಿಶ್ವನಾಥ್, ಪ್ರಸನ್ನಕುಮಾರ್, ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಭಾಗಿಯಾಗಿ ಸಂಭ್ರಮಿಸಿದರು.

ಸೂಡಾ ಅಧ್ಯಕ್ಷ ಸುಂದರೇಶ್ ಜೊತೆ ಕಾಂಗ್ರಸ್ ಕಾರ್ಯಕರ್ತರು ಬಂದ ಭಕ್ತ ರಿಗೆ ಅನ್ನಸಂತರ್ಪಣೆ ಮಾಡಿ ಸೇವೆಸಲ್ಲಿಸಿದರು. ಬೆಳಿಗ್ಗೆ ಭೀಮೇಶ್ವರ ದೇವಾಲಯದಿಂದ 11ಗಂಟೆಗೆ ಸಾಗಿದ ಮೆರವಣಿಗೆ ಗಾಂಧೀಬಜಾರ್ ತಲುಪಿದಾಗ ಸಂಜೆಯಾಗಿತ್ತು.
ಮಾರ್ಗಬದಲು-ಬ್ಯಾರಿಕೇಡ್ ನಿಂದ ಸಂಚಾರಕ್ಕೆ ಅಡಚಣೆ
ರಾಜಬೀದಿ ಉತ್ಸವದ ಹಿನ್ನಲೆಯಲ್ಲಿ ನಗರದ ಶಾಲಾ ಕಾಲೇಜಿಗೆ ಶನಿವಾರದಂದು ರಜೆ ನೀಡಲಾಗಿತ್ತು. ಎಲ್ಲೆಡೆ ಬ್ಯಾರಿಕೇಡ್ ಅಡ್ಡ ರಸ್ತೆಗಳು ಬಂದ್, ಮಾರ್ಗ ಬದಲಾವಣೆಯಿಂದಾಗಿ ಒಂದಷ್ಟು ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಜನಸ್ತೋಮದ ನಿರ್ವಹಣೆಗಾಗಿ ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.. ಕೆಲ ಸಂಘ ಸಂಸ್ಥೆಗಳು ಹಲವೆಡೆ ದೊಡ್ಡ ದೊಡ್ಡ ವೇದಿಕೆ ಲೈಟಿಂಗ್ಸ್ , ಡಿಜೆ ವ್ಯವಸ್ಥೆ ಮಾಡಿದ್ದರಿಂದಾಗಿ ಬಾರೀ ಸಂಖ್ಯೆಯ ಜನಸಮೂಹ ಗಾಂಧೀಬಜಾರ್ , ನೆಹರೂರಸ್ತೆ , ದುರ್ಗೀಗುಡಿ,ಕುವೆಂಪುರಸ್ತೆ ನಂಜಪ್ಪ ಆಸ್ಪತ್ರೆ ಸೇರಿ ಪ್ರಮುಖ ವೃತ್ತಗಳಲ್ಲಿ ಜಮಾಯಿಸಿತ್ತು.
ಗಣಪತಿ ಮರೆವಣಿಗೆ ಕಣ್ತುಂಬಿಕೊಳ್ಳಲು ವಿವಿಧ ಜಿಲ್ಲೆಗಳಿಂದಲೂ ಜನರು ಆಗಮಿಸಿ ಸಂಭ್ರಮಿಸಿದರು.
ಒಟ್ಟಾರೆ, ಇಡೀ 11 ದಿನಗಳ ಹಿಂದೂ ಮಹಾಸಭಾ ಗಣಪತಿಯ ಪ್ರತಿಷ್ಠಾಪನೆಯಿಂದ ಹಿಡಿದು ಭಾನುವಾರ ಬೆಳಗಿನ ಜಾವದವರೆಗೆ ಯಾವುದೇ ನಿವಿ೯ಘ್ನವಿಲ್ಲದೇ ಸಾಂಗವಾಗಿ ನಡೆದಿದ್ದು, ಜಿಲ್ಲಾಡಳಿತ ಹಾಗು ಜಿಲ್ಲಾ ಪೋಲಿಸ್ ಇಲಾಖೆ ನಿಟ್ಟಿಸಿರು ಬಿಡುವಂತೆ ಮಾಡಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಮುಖ್ಯಸ್ಥರು,
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ


