India-America ಅಮೆರಿಕದಿಂದ ಡಿಜಿಟಲ್ ಸೇವಾತೆರಿಗೆ ಬೆದರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ
ಜಗತ್ತಿನ ಹಲವು ದೇಶಗಳಿಗೆ ಮನಬಂದಂತೆ ಸುಂಕ ಹೇರಿರುವ ಜೊತೆಗೆ ಈಗ ಡಿಜಿಟಲ್ ಸೇವಾ ತೆರಿಗೆ ವಿಧಿಸುವುದಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಡಿಜಿಟಲ್ ಸೇವಾ ತೆರಿಗೆ ಅಥವಾ ಸಂಬಂಧಿತ ನಿಯಮಗಳನ್ನು ವಿಧಿಸುವ ದೇಶಗಳಿಗೆ ಅಮೆರಿಕದ ಚಿಪ್ ನಿರ್ಬಂಧಿಸುವ ಹೊಸ ಸುಂಕ ವಿಧಿಸುವುದಾಗಿ ಟ್ರಂಪ್ ಸೂಚನೆ ನೀಡಿದ್ದಾರೆ. ಅಲ್ಫಾಬೆಟ್, ಮೆಟಾ ಮತ್ತು ಅಮೆಜಾನ್ನಂತಹ ಪ್ರಮುಖ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಹೇರಿರುವ ತೆರಿಗೆ ಕೈಬಿಡುವಂತೆ ಪಾಲುದಾರ ದೇಶಗಳ ಮೇಲೆ ಒತ್ತಡ ಹೇರುವ ಸಲುವಾಗಿ ಡಿಜಿಟಲ್ ಸೇವಾ ತೆರಿಗೆ ಹೇರುವ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಡಿಜಿಟಲ್ ತೆರಿಗೆ, ಡಿಜಿಟಲ್ ಸೇವೆಗಳ ಶಾಸನ ಮತ್ತು ಡಿಜಿಟಲ್ ಮಾರುಕಟ್ಟೆ ನಿಯಮಗಳೆಲ್ಲವೂ ಅಮೆರಿಕನ್ ತಂತ್ರಜ್ಞಾನಕ್ಕೆ ಹಾನಿ ಅಥವಾ ತಾರತಮ್ಯ ಮಾಡುವ ಉದ್ದೇಶದಿಂದ ರೂಪಿಸಲ್ಪಟ್ಟವು ಎಂದಿರುವ ಟ್ರಂಪ್ ಕಳೆದ ಸೋಮವಾರದಂದು ಟ್ರುತ್ ಸೋಶಿಯಲ್ ತಾಣದಲ್ಲಿ ಹೇಳಿದ್ದಾರೆ. ಚೀನಾದ ಅತಿದೊಡ್ಡ ಕಂಪನಿಗಳಿಗೆ ಸಂಪೂರ್ಣ ವಿನಾಯಿತಿಯನ್ನು ಅತಿರೇಕದ ರೀತಿಯಲ್ಲಿ ನೀಡುತ್ತಿದ್ದು, ಇದು ಕೊನೆಗೊಳ್ಳಬೇಕು ಮತ್ತು ಈಗಲೇ ಅಂತ್ಯವಾಗಬೇಕು ಎಂದೂ ಅವರು ಹೇಳಿದ್ದಾರೆ.
ಕಳೆದ ಜೂನ್ನಲ್ಲಿ ಇದೇ ತೆರಿಗೆ ವಿಚಾರದಲ್ಲಿ ಕೆನಡಾ ಜೊತೆ ವ್ಯಾಪಾರ ಕುರಿತ ಮಾತುಕತೆ ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಕೆನಡಾ ತನ್ನ ತೆರಿಗೆಯನ್ನು ತ್ವರಿತಗತಿಯಲ್ಲಿ ರದ್ದು ಮಾಡಿದಾಗ ಈ ದೇಶ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಕೆನಡಾದಂತಹ ದೇಶಗಳಲ್ಲಿ ಡಿಜಿಟಲ್ ಸೇವಾ ತೆರಿಗೆ ಅಮೆರಿಕ ಆಡಳಿತ ವಿರುದ್ಧ ಟೀಕೆಗೆ ಕಾರಣವಾಗಿದ್ದರ ಹಿಂದೆ ಅಮೆರಿಕದ ಕಂಪನಿಗಳೇ ಅಂತಹ ತೆರಿಗೆಗೆ ಒಳಗಾಗಿವೆ ಎನ್ನಲಾಗಿದೆ.


