DistrictKarnatakaShivamogga

ಅಕ್ಕನ ಅಕ್ಕರೆಗೆ ಮಹಿಳೆಯರು ಸೇಫ್|ಮಹಿಳೆಯರ ರಕ್ಷಣೆಗೆ ಸೇನಾನಿಗಳು ಸದಾ ಸನ್ನದ್ಧ|ಮಹಾತ್ಮರ ಕನಸಿಗೆ ಪೂರಕವಾದ ಅಕ್ಕ ಪಡೆ

ಪೋಲೀಸರು ಅಂದ್ರೆ ಎಲ್ಲಾ ಮುಗಿದ ಮೇಲೆ ಬರುತ್ತಾರೆ ಸಕಾಲಕ್ಕೆ ನೆರವು ಮರೀಚಿಕೆ ಅನ್ನೋ ಜನಜನಿತ ಆರೋಪವನ್ನ ಇದೀಗ ಅಕ್ಕ ಪಡೆ ಸುಳ್ಳು ಮಾಡಿದೆ. ಕಷ್ಟ ಅಂತ ಒಂದು ಕರೆ ಮಾಡಿದರೇ ಸಾಕು. ನೀವಿದ್ದಲ್ಲಿಗೆ ಬಂದು ಹಾಜರಾಗುತ್ತದೆ ಅಕ್ಕ ಪಡೆಯ ಮಹಿಳಾ ಸೇನಾನಿಗಳು.

ರಾಜ್ಯಾದ್ಯಂತ ಈಗ ಅಕ್ಕನ ಅಕ್ಕರೆ…ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಿ ಶೀಘ್ರ ನೆರವಿಗೆ ಧಾವಿಸುವ ಅಕ್ಕ ಪಡೆ ತನ್ನ ಉತ್ತಮ ಕಾರ್ಯನಿರ್ವಹಣೆಯಿಂದ ಈಗ ರಾಜ್ಯದಾದ್ಯಂತ ಮಹಿಳೆಯರ ವಿಶ್ವಾಸಕ್ಕೆ ಪಾತ್ರವಾಗಿದೆ.

ಪೋಲೀಸರು ಅಂದ್ರೆ ಎಲ್ಲಾ ಮುಗಿದ ಮೇಲೆ ಬರುತ್ತಾರೆ ಸಕಾಲಕ್ಕೆ ನೆರವು ಮರೀಚಿಕೆ ಅನ್ನೋ ಜನಜನಿತ ಆರೋಪವನ್ನ ಇದೀಗ ಅಕ್ಕ ಪಡೆ ಸುಳ್ಳು ಮಾಡಿದೆ. ಕಷ್ಟ ಅಂತ ಒಂದು ಕರೆ ಮಾಡಿದರೇ ಸಾಕು. ನೀವಿದ್ದಲ್ಲಿಗೆ ಬಂದು ಹಾಜರಾಗುತ್ತದೆ ಅಕ್ಕ ಪಡೆಯ ಮಹಿಳಾ ಸೇನಾನಿಗಳು.

ಪುಂಡಪೋಕರಿಗಳಿಗೆ ತಕ್ಕಪಾಠ ಕಲಿಸುವ ಅಕ್ಕಪಡೆ ಶಾಲಾ ಕಾಲೇಜು, ಉದ್ಯಾನವನ, ಮಾಲ್ಗಳು ಬಸಸ್ಟಾಂಡ್ ಬಳಿ ಗಸ್ತು ತಿರುಗುತ್ತಾ ಮಹಿಳಾ ಪೀಡಕರಿಗೆ ಬಿಸಿ ಮುಟ್ಟಿಸಿ ಯುವತಿಯರು ಮಹಿಳೆಯರಿಗೆ ಸದಾ ಭದ್ರತ್ರೆಯ ಭರವಸೆ ಮೂಡಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೋಲೀಸ್ ಇಲಾಖೆ ಸಹಯೋಗದಲ್ಲಿ ಅಕ್ಕಪಡೆ ಕೆಲಸ ಮಾಡಲಿದೆ.

ರಾಜ್ಯ ಸರ್ಕಾರದ ಬೀದರ್‌ನಲ್ಲಿ ಮೊದಲು ಪೈಲಟ್ ಯೋಜನೆಯಾಗಿ ಅಕ್ಕಪಡೆ ರಚಿಸಲಾಯಿತು. ಅಲ್ಲಿ ಯಶಸ್ವಿಯಾದ ಬಳಿಕ ಮೊದಲ ಹಂತದಲ್ಲಿ ಕರ್ನಾಟಕದ ಐದು ಜಿಲ್ಲೆಗಳಾದ ಉಡುಪಿ , ಮಂಗಳೂರು , ಬೆಂಗಳೂರು ,ಮೈಸೂರು ಬೆಳಗಾವಿಯಲ್ಲಿ ಅಕ್ಕಪಡೆ ಕಾರ್ಯೋನ್ಮುಖವಾಗಿದೆ. ಇದೀಗ ಹಂತಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಗೊಳ್ಳುತ್ತಿದೆ.

ಅಕ್ಕ ಕಾರ್ಯಪಡೆ ಶಿವಮೊಗ್ಗ ಜಿಲ್ಲೆಯಲ್ಲಿ ಶುರುವಾಗಿ ಮೂರು ತಿಂಗಳು ಕಳೆದಿದ್ದು ಅಲ್ಪಾವಧಿಯಲ್ಲೇ ಸೈ ಎನಿಸಿಕೊಂಡಿದೆ. ಸರ್ವೋದಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಶೌಚಾಲಯ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿಬಿದ್ದಿದ್ದು ಸಕಾಲಕ್ಕೆ ಬಾಗಿಲು ಒಡೆದು ಒಳಹೋಗಿ ವಿದ್ಯಾರ್ಥಿನಿಯ ಜೀವ ಉಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.

ಅಷ್ಟೇ ಅಲ್ಲ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನ ವಶಕ್ಕೆ ಪಡೆದು ವಾರ್ನ್ ಮಾಡಿತ್ತು. ಮತ್ತೊಂದು ಕಾರ್ಯಾಚರಣೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯನ್ನ ಹಿಂಬಾಲಿಸುತ್ತಾ ಕಿರುಕುಳ ನೀಡುತ್ತಿದ್ದ ಫಟಿಂಗನ ಮೇಲೆ ಹದ್ದಿನ ಕಣ್ಣಿಟ್ಟು ರೆಡ್ ಹ್ಯಾಂಡ್ ಆಗಿ ಹಿಡಿದು ಕೇಸ್ ಹಾಕಿ ಯುವತಿಗೆ ಧೈರ್ಯ ತುಂಬಿದೆ.

ಸದಾ ಕ್ರಿಯಾಶೀಲ ಅಕ್ಕಾಪಡೆ ಸಾರ್ವಜನಿಕರಿಂದ ಮತ್ತು ಪೋಲೀಸ್ ಜಿಲ್ಲಾ ರಕ್ಷಣಾಧಿಕಾರಿಯಿಂದಲೂ ಭೇಷ್ ಎನಿಸಿಕೊಂಡಿದೆ.

ಅಕ್ಕಾಪಡೆ ಪೋಲೀಸರಿಗಿಂತ ಭಿನ್ನ ಮತ್ತು ಮಹಿಳಾ ಸ್ನೇಹಿಯಾಗಿದೆ. ಯಾವುದೇ ಅಂಜಿಕೆಯಿಲ್ಲದೇ ವಿದ್ಯಾರ್ಥಿನಿಯಯರು ಮಹಿಳೆಯರು ದೌರ್ಜನ್ಯಕ್ಕೆ ತುತ್ತಾದರೆ ತುರ್ತು ಸಹಾಯಕ್ಕೆ ಅಕ್ಕಪಡೆ ಸದಾ ಸನ್ನದ್ದ. ದೂರುಗಳ ಕರೆ ಬಂದಾಗ ಅಕ್ಕಪಡೆ ತಕ್ಷಣ ಕಾರ್ಯಾಚರಣೆಗಿಳಿದು ಬುದ್ದಿಕಲಿಸಲಿದೆ. ಗಂಭೀರ ಪ್ರಕರಣಗಳಲ್ಲಿ ಪೋಲೀಸ್ ಠಾಣೆಗೆ ಕರೆದೊಯ್ದು ಕೇಸ್ ದಾಖಲಿಸಲಿದೆ.

ಎನ್‌ಸಿಸಿ ಪ್ರಮಾಣಪತ್ರಹೊಂದಿದ ಮಹಿಳಾ ಕೆಡೆಟ್ಗಳು, ಪೊಲೀಸ್ ಕಾನ್ಟೆಬಲ್ಗಳು ಅಕ್ಕಪಡೆಯಲ್ಲಿದ್ದು ಕಮಾಂಡೋ ಸಮವಸ್ತ್ರ ಧರಿಸಿರುತ್ತಾರೆ. ಪಿಂಕ್ ವಾಹನದಲ್ಲಿ ಜನನಿಬಿಡ ಪ್ರದೇಶಗಳು, ಪ್ರವಾಸಿತಾಣಗಳಲ್ಲೂ ಗಸ್ತುತಿರುಗುತ್ತಾ ಅಕ್ಕಪಡೆ ಕಿಡಿಗೇಡಿಗಳು, ಬೀದಿಕಾಮಣ್ಣರಿಗೆ ಅಂಕುಶ ಹಾಕುತ್ತಾ ಕಣ್ಣಿಟ್ಟಿರುತ್ತದೆ.

ಹೆಣ್ಣುಮಕ್ಕಳ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸುವ ಅಕ್ಕಪಡೆಯ ಅಕ್ಕರೆಯ ಕಾರ್ಯಾಚರಣೆ, ಸರಹೊತ್ತಿನಲ್ಲಿಯು ಮಹಿಳೆಯರು ಸುರಕ್ಷಿತ ಎಂಬುದನ್ನು ರಾಜ್ಯ ಸರ್ಕಾರವು ಅಕ್ಕ ಪಡೆ ಮೂಲಕ ಪ್ರಯತ್ನಿಸಿದ್ದು ಶ್ಲಾಘನೀಯ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ನಾಡಿನ ಮಹಿಳೆಯರಿಗೆ ನ್ಯೂ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.

Follow Us

Leave a Reply

Your email address will not be published. Required fields are marked *

Back to top button