EducationKarnatakaShivamogga

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಗ್ರೇಡ್ ವಿಚಾರ|ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ|ಅಂಕಗಳನ್ನು ನೀಡಲು ಖಡಕ್ ಸೂಚನೆ

ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡುವದರಿಂದ ಆಗುವ ಲಾಭವೇನು? ಗ್ರೇಡಿಂಗ್‌ ನೀಡುವದರಿಂದ ಆಗುವ ಹಾನಿ ಏನು? ಎಂಬುದರ ಬಗ್ಗೆ ಎಲ್ಲ ನೈಜ ಉದಾಹರಣೆಗಳನ್ನು ಸಾಕ್ಷಿ ಸಮೇತ ಹೈಕೋರ್ಟ್‌ ಮೆಟ್ಟಿಲೇರಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕೊನೆಗೂ ಜಯ ಸಿಕ್ಕಿದೆ.

ಬೆಂಗಳೂರು: ತೃತೀಯ ಭಾಷೆಗಳ ಪರೀಕ್ಷೆ ಇನ್ನೇನು ಎರಡು ದಿನಗಳು ಬಾಕಿ ಇರುವಾಗ ಅಂಕಗಳ ಬದಲಿಗೆ ಗ್ರೇಡ್‌ ಪದ್ದತಿ ಜಾರಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಸಹನಾ ನಾಯಕ್‌ ಸೇರಿದಂತೆ ಮೂವರು ವಿದ್ಯಾರ್ಥಿನಿಯರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರಸಕ್ತ 2026 ರ ತೃತೀಯ ಪರೀಕ್ಷೆಗೆ ಗ್ರೇಡ್‌ ಬದಲು ಅಂಕಗಳನ್ನು ನೀಡುವಂತೆ ನಿರ್ದೇಶನ ನೀಡಿದೆ.

ಪರೀಕ್ಷೆಯ ಕೊನೆಗಳಿಗೆಯಲ್ಲಿ ಯಾವುದೇ ಆಕ್ಷೇಪಣೆಗೂ ಅವಕಾಶ ಕೊಡದೇ ತೃತೀಯ ಭಾಷೆಗಳಿಗೆ ಗ್ರೇಡ್‌ ನೀಡುವ ಮೂಲಕ ದಡ್ಡತನದ ನಿರ್ಧಾರ ಕೈಗೊಂಡಿದ್ದ ಸರ್ಕಾರಕ್ಕೆ ಈಗ ಭಾರಿ ಮುಖಭಂಗ ಅನುಭವಿಸುವಂತಾಗಿದೆ.

ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡುವದರಿಂದ ಆಗುವ ಲಾಭವೇನು? ಗ್ರೇಡಿಂಗ್‌ ನೀಡುವದರಿಂದ ಆಗುವ ಹಾನಿ ಏನು? ಎಂಬುದರ ಬಗ್ಗೆ ಎಲ್ಲ ನೈಜ ಉದಾಹರಣೆಗಳನ್ನು ಸಾಕ್ಷಿ ಸಮೇತ ಹೈಕೋರ್ಟ್‌ ಮೆಟ್ಟಿಲೇರಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕೊನೆಗೂ ಜಯ ಸಿಕ್ಕಿದೆ.

ಮೊದಲಿನಂತೇ ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡಬೇಕು ಎಂದು ರಾಜ್ಯ ಹೈಕೋರ್ಟ್‌ ಸ್ಪಷ್ಟ ಆದೇಶ ಹೊರಡಿಸಿದೆ.

ಈ ಮೂಲಕ ಸರ್ಕಾರದ ನಿರ್ಧಾರದಿಂದ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಈಗ ರಿಲೀಫ್‌ ಸಿಗುವಂತಾಗಿದೆ.

ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025-26ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ 625 ಅಂಕಗಳ ಕುರಿತು ಪ್ರಕಟಣೆ ಹೊರಡಿಸಿತ್ತು.

ಇನ್ನು ಪ್ರಿಪರೇಟರಿ ಪರೀಕ್ಷೆಗಳೂ ಕೂಡ ತೃತೀಯ ಭಾಷೆಗೆ 100 ಅಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಾಗಿತ್ತು. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳು ಮಾರ್ಗಸೂಚಿ ಅನ್ವಯವೇ ತಯಾರಿ ನಡೆಸಿದ್ದರು.

ಹೈಕೋರ್ಟ್‌ನಲ್ಲಿ ಈ ವಿಷಯವನ್ನೆ ಪ್ರಮುಖ ಅಂಶವನ್ನಾಗಿ ಮುಂದಿಟ್ಟುಕೊಂಡು ವಾದ ಮಂಡಿಸಲಾಯಿತು. ಮತ್ತು ನ್ಯಾಯಾಧೀಶರಿಗೆ ಮನವರಿಕೆ ಮಾಡಲಾಯಿತು.

ಗ್ರೇಡ್‌ ಬದಲು ಅಂಕಗಳನ್ನು ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಹೊಸನಗರ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದ್ದರು.

ಈ ಒಂದು ಅಂಶವೇ ಹಾಗೂ ತೃತೀಯ ಭಾಷೆಗಳಿಗೆ ಅಂಕದ ಬದಲು ಗ್ರೇಡ್ ನೀಡಿದರೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಕೇಂದ್ರ ಸ್ವಾಮ್ಯದ ಯುಪಿಎಸ್‌ಸಿ, ಬ್ಯಾಂಕಿಂಗ್ , ರೈಲ್ವೇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡ್ ಪರಿಗಣಿಸ್ಪಡುವುದಿಲ್ಲ ಅಂಕಗಳನ್ನು ಮಾತ್ರವೇ ಪರಿಗಣನೆಗೆ ತೆಗೆಕೊಳ್ಳಲಿದ್ದಾರೆ.

ಇನ್ನು ಹಿಂದಿಭಾಷೆಯಲ್ಲಿ 7 ಸಾವಿರ ವಿದ್ಯಾರ್ಥಿಗಳು 2025 ನೇ ಸಾಲಿನ ಪರೀಕ್ಷೆಯಲ್ಲಿ 100 / 100 ಅಂಕ ಪಡೆದಿದ್ದಾರೆಂಬ ಅಂಶವನ್ನು ಬೆಳಕಿಗೆ ತರಲಾಯಿತು.

ಇವೆಲ್ಲ ವಿಷಯವನ್ನು ಅರ್ಜಿದಾರರ ಪರವಾಗಿ ವಕೀಲ ವಿ.ಆರ್.ನಾಯಕ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಸಮರ್ಥ ವಾದ ಮಂಡನೆ ಮಾಡಿದ್ದರಿಂದಲೇ ವಿದ್ಯಾರ್ಥಿಗಳ ಪರ ತೀರ್ಪು ಬರಲು ಅನುಕೂಲವಾಯಿತು ಎನ್ನುತ್ತಾರೆ ರಿಟ್‌ ಅರ್ಜಿ ಸಲ್ಲಿಸಿದ್ದ ಸಹನಾ ನಾಯಕ್‌ ತಂದೆ ರಾಜಾನಾಯಕ್.

ಮೊದಲೇ ತನ್ನ ದಡ್ಡತನದ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ್ದ ಸರ್ಕಾರವು , ಈಗ ಹೈಕೋರ್ಟ್ ನೀಡಿರುವ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲಿದೆ ಎಂಬ ಮಾಹಿತಿ ಇದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಕೇವಿಯಟ್‌ ಅನ್ನು ಸಲ್ಲಿಕೆ ಮಾಡಿರುವದಾಗಿ ಪೋಷಕ ರಾಜಾ ನಾಯಕ್‌ , ನ್ಯೂ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ತಮ್ಮ ಈ ಹೋರಾಟದಿಂದ ತಮ್ಮ ಮಗಳಿಗೆ ಅಷ್ಟೇ ಅಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

Follow Us

Leave a Reply

Your email address will not be published. Required fields are marked *

Back to top button