Shivamogga

ಎಸ್‌ಐಆರ್‌ ಪರಿಷ್ಕರಣೆ ಶೇ. 85.15ರಷ್ಟು ಪ್ರಗತಿ|ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಡಿಲೀಟ್‌ ಸಾಧ್ಯತೆ|ಅಂತಿಮ ಮತಪಟ್ಟಿ ಅ.19ಕ್ಕೆ ಪ್ರಕಟ-ಪ್ರಭುಲಿಂಗ ಕವಳಿಕಟ್ಟಿ

ಅರ್ಹ ಮತದಾದರರು ಮತಪಟ್ಟಿಯಿಂದ ವಂಚಿತರಾಗಬಾರದು ಮತ್ತು ಅನರ್ಹರು ಮತಪಟ್ಟಿಯಲ್ಲಿ ಉಳಿದುಕೊಳ್ಳದಂತೆ ಅತ್ಯಂತ ಎಚ್ಚರಿಕೆಯಿಂದ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗಕವಳಿ ಸ್ಪಷ್ಟಪಡಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ 15,19,459 ಮಂದಿ ಅರ್ಹ ಮತದಾರರಿದ್ದು ಅದರಲ್ಲಿ 43,845 ಮಂದಿ ಮೃತಪಟ್ಟ ಮತದಾರರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಸ್ಥಳಾಂತರಗೊಂಡವರು ಮತ್ತು ಎರೆಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡವರ ಸಂಖ್ಯೆ 1,56,012 ಮಂದಿ ಇದ್ದು, ಪರಿಷ್ಕರಣೆಗೊಂಡ ಅಂತಿಮ ಮತಪಟ್ಟಿ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲೆಯ ಎಸ್ಐಆರ್ ಪ್ರಕ್ರಿಯೆ ಮತ್ತು ಪ್ರಗತಿ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈಗಾಗಲೇ ಅರ್ಜಿ ನಮೂನೆಯನ್ನ ತೆಗೆದುಕೊಂಡು ಹಿಂದಿರುಗಿಸದೇ ಬಾಕಿ ಉಳಿಸಿಕೊಂಡ 69,603 ಮತದಾರರು ಆದಷ್ಟು ಬೇಗ ಅರ್ಜಿಗಳನ್ನ ಭರ್ತಿಮಾಡಿ ಬಿಎಲ್ಒ ಗಳಿಗೆ ಹಿಂದಿರುಗಿಸಬೇಕೆಂದು ಮನವಿ ಮಾಡಿದರು.

ಆಗಸ್ಟ್ 8ರ ಕೊನೆಯ ದಿನದವರೆಗೂ ಬಿಎಲ್ಒ (BLO) ಮನೆಮನೆ ಭೇಟಿಗೆ ನೀಡಿ ಮಾಹಿತಿ ಸಂಗ್ರಹಿಸುವರು. ಆಗಸ್ಟ್ 17 ಕರಡು ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ 16 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಾಕಾಶವಿದೆ. ಅಕ್ಟೋಬರ್ 19ರಂದು ಮತದಾರರ ಪಟ್ಟಿಯ ಅಂತಿಮ ಪಟ್ಟಿ ಪ್ರಕಟಗೊಳ್ಳಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಶೇ. 85.15ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.

6196 ಮತದಾರರು ಆನ್‌ಲೈನ್‌ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಭಾಗವಹಿಸಿದ್ದಾರೆ. ಇನ್ನೂ 69603 ಮಂದಿ ಮತದಾರರು ನೋಂದಣಿ ಕಾರ್ಯದಲ್ಲಿ ಭಾಗವಹಿಸದೇ ಹಿಂದುಳಿದಿದ್ದಾರೆ.

ಮತದಾರರ ಪಟ್ಟಿಯಲ್ಲಿ ಗೈರಾಗಿರುವವರು, ಮರಣ ಹೊಂದಿದವರು, ಸ್ಥಳಾಂತರಗೊಂಡಿರುವ ಕುಟುಂಬಗಳು ಹಾಗೂ ಎರೆಡೆರೆಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಂಡಿರುವವರು
ಪತ್ತೆಯಾಗಿದ್ದಾರೆ.

ಅಂತಿಮ ಪರಿಷ್ಕರಣೆ ವೇಳೆ ಮೃತರು ಮತ್ತು ಎರೆಡೆರೆಡುಕಡೆ ಮತಪಟ್ಟಿಯಿದ್ದವರ ಹೆಸರು ಡಿಲೀಟ್ ಆಗಲಿದ್ದು ಕಾಲಕಾಲಕ್ಕೆ ಮಾಹಿತಿಯನ್ನು ಎಲ್ಲ ಪಕ್ಷದ ಮುಖಂಡರಿಗೂ ಕಳುಹಿಸಲಾಗಿದೆ.

ಅರ್ಹ ಮತದಾದರರು ಮತಪಟ್ಟಿಯಿಂದ ವಂಚಿತರಾಗಬಾರದು ಮತ್ತು ಅನರ್ಹರು ಮತಪಟ್ಟಿಯಲ್ಲಿ ಉಳಿದುಕೊಳ್ಳದಂತೆ ಅತ್ಯಂತ ಎಚ್ಚರಿಕೆಯಿಂದ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗಕವಳಿ ಸ್ಪಷ್ಟಪಡಿಸಿದರು.

ಇನ್ನೂ ಪ್ರಶ್ನೆ ಪತ್ರಿಕೆ ಸೋರಿಕೆಯಾದಲ್ಲಿ ಜಿಲ್ಲಾಧಿಕಾರಿಗಳೇ ಹೊಣೆಯೆಂಬ ಸಿಎಂ ಆದೇಶ ಕುರಿತು ಪ್ರತಿಕ್ರಿಯಿಸಿದ ಅವರು ಮುಂಬರಲಿರುವ ಪೊಲಿಸ್ ಕಾನ್ಸೇಬಲ್ ಹುದ್ದೆ ಪರೀಕ್ಷೆ , ನೀಟ್ , ಮತ್ತಿತರ ಎಲ್ಲಾ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಮರ್ಥವಾಗಿದೆ.

ಪ್ರಶ್ನೆಪತ್ರಿಕೆ ರವಾನೆ ಹಂತದಲ್ಲಿ ಸಿಸಿಟಿವಿ ಸರ್ವೆಲೆನ್ಸ್, ಟ್ರಾಕಿಂಗ್ ಅಚ್ಚುಕಟ್ಟಾಗಿ ನಿರ್ವಹಿಸಲಿದೆ.

ಲಾಜಿಸ್ಟಿಕ್ನಿಂದ ಎಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಯತ್ನವಾದರೂ ಪತ್ತೆಯೂ ಸುಲಭವಾಗಿದ್ದು ಪರೀಕ್ಷಾ ಅಕ್ರಮಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆಗಳನ್ನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆ ಪ್ರಮಾಣದ ಮಳೆಗಿಂತ ಶೇ.44ರಷ್ಟು ಮಳೆ ಕೊರತೆಯುಂಟಾಗಿದ್ದು ಶೇ. 28ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಜಿಲ್ಲೆಯ ಪ್ರಧಾನ ಬೆಳೆಗಳಲ್ಲಿ ಮೆಕ್ಕೆಜೋಳ ಮತ್ತು ಭತ್ತ ಪ್ರಮುಖ ಬೆಳಗಳಾಗಿವೆ. ಭತ್ತದ ಬೆಳೆ ಬಿತ್ತನೆಗೆ ಆಗಸ್ಟ್ ಕೊನೆಯವರೆಗೂ ಮಳೆಯಾಗುವ ಆಶಾಭಾವನೆ ಇದೆ ಎಂದರು.

ಜಿಲ್ಲೆಯಲ್ಲಿ ರೈತರ ಅಗತ್ಯಕ್ಕೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಕೊರತೆಯಾದಲ್ಲಿ ಸಕಾಲದಲ್ಲಿ ಗೊಬ್ಬರ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 280ಮಳೆ ಮಾಪನ ಕೇಂದ್ರಗಳಿವೆ. 2026ರ ಜನವರಿ ಮಾಹೆಯ ವೇಳೆಗೆ 208 ಕೇಂದ್ರಗಳು ದುರಸ್ತಿಯಲ್ಲಿದ್ದು, 72ಕೇಂದ್ರಗಳು ಸುಸ್ಥಿತಿಯಲ್ಲಿದ್ದವು.

ಇವುಗಳಲ್ಲಿ ಈಗಾಗಲೇ 185 ಕೇಂದ್ರಗಳನ್ನು ಸರಿಪಡಿಸಲಾಗಿದೆ. ಉಳಿದವಗಳನ್ನು ಮುಂದಿನ 15ದಿನಗಳಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಏಪ್ರಿಲ್ ತಿಂಗಳಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾಗಿದ್ದ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರಧನವನ್ನು ಬಿಡುಗಡೆ ಮಾಡುವಂತೆ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ಹೇಳಿದರು.

ಉಳಿದಂತೆ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರಧನ ಒದಗಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅಭಿಷೇಕ್ ಬಿವಿ ಮತ್ತು ತಹಶೀಲ್ದಾರ್ ಮಂಜುಳಾ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button