ಶಿವಮೊಗ್ಗದಲ್ಲಿ ಪೊಲೀಸರ ಮಕ್ಕಳಿಗಾಗಿ ಆಟೋಟ ಸ್ಪರ್ಧೆ|ಪೊಲೀಸ್ ಮೈದಾನದಲ್ಲಿ ಚಿಣ್ಣರ ಕಲರವ| ಕ್ರೀಡಾಕೂಟಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಚಾಲನೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸರ ಮಕ್ಕಳಿಗಾಗಿ ನವೆಂಬರ್ 23 ರ ಭಾನುವಾರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.

ಸದಾ ಪೊಲೀಸರಿಂದ ಬ್ರೀಫಿಂಗ್, ಕವಾಯತು, ಸಭೆಗಳು ನಡೆಯುತ್ತಿದ್ದ ಶಿವಮೊಗ್ಗದ ಪೊಲೀಸ್ ಕವಾಯತು ಮೈದಾನ ಇವತ್ತು ಮಕ್ಕಳ ಆಟೋಟಕ್ಕೆ ಸಾಕ್ಷಿಯಾಗಿತ್ತು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸರ ಮಕ್ಕಳಿಗಾಗಿ ನವೆಂಬರ್ 23 ರ ಭಾನುವಾರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಪೊಲೀಸರ ಮಕ್ಕಳ ಕ್ರೀಡಾಕೂಟವನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ ಮಿಥುನ್ ಕುಮಾರ್ ಅವರು, ಬಲೂನ್ ಹಾರಿಸಿ,ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಚಾಲನೆ ನೀಡಿದರು.

ಪೊಲೀಸ್ ಮಕ್ಕಳ ಕ್ರೀಡಾಕೂಟದಲ್ಲಿ ವಯೋಮಿತಿಗೆ ಅನುಗುಣವಾಗಿ ಹಲವಾರು ಸ್ಪರ್ಧೆ ಆಯೋಜಿಸಲಾಗಿತ್ತು.
ಅವುಗಳಲ್ಲಿ ಕಪ್ಪೆ ಜಿಗಿತಸ್ಪರ್ಧೆ , ಓಟದ ಸ್ಪರ್ಧೆ, ಬಕೆಟ್ಗೆ ಬಾಲ್ ಎಸೆಯುವ ಸ್ಪರ್ಧೆ,ಸ್ಲೋ ಸೈಕಲ್ ರೇಸ್ ಸ್ಪರ್ಧೆಗಳು ಗಮನ ಸೆಳೆದವು.

ಅದೇ ರೀತಿ ಹಿಟ್ ದಿ ವಿಕೆಟ್ ಸ್ಪರ್ಧೆ, ಗುಂಡು ಎಸೆತ ಸ್ಪರ್ಧೆ ಸೇರಿದಂತೆ ಎಲ್ಲ ಬಗೆಯ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು.

ಪ್ರತಿಯೊಂದು ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಮೇಶ್ ಕುಮಾರ್, ದಿಲೀಪ್ ಡಿಎಆರ್ ಡಿವೈಎಸ್ಪಿ,ಆರ್ ಪಿಐ ಸೋಮಶೇಖರ್ ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು.
ವರದಿ: ಸೌಮ್ಯ ರೆಡ್ಡಿ,
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






