Karnatakaಕಾರ್ಮಿಕ ಇಲಾಖೆಯಲ್ಲಿ ಹಗಲು ದರೋಡೆ!

ಕಾರ್ಮಿಕ ಇಲಾಖೆಯಲ್ಲಿ ಬಹುಕೋಟಿರೂ. ಹಗರಣ!ದಾಖಲೆ ಇದ್ದರೂ ಸದನದಲ್ಲಿ ಆರ್‌ ಅಶೋಕ್ ʼಗಪ್‌ಚುಪ್‌ʼ|ನಾಗರಾಜ್‌ ಛಬ್ಬಿಗೆ ಕೈಕೊಟ್ಟರಾ? ಬಿಜೆಪಿ ನಾಯಕರು!

ಬೆಳಗಾವಿವರೆಗೆ ತಂದಿದ್ದ ಕಾರ್ಮಿಕ ಇಲಾಖೆಯ ಹಗರಣದ ದಾಖಲೆಗಳ ಫೈಲ್‌ ಅನ್ನು ಆರ್‌ ಅಶೋಕ್‌ ಅವರು ಅಧಿವೇಶನದಲ್ಲಿ ತೆರೆಯಲೇ ಇಲ್ಲ. ಬಹುಶಃ ಆರ್‌ ಅಶೋಕ್‌ ತಮ್ಮಲ್ಲಿರುವ ದಾಖಲೆಗಳನ್ನು ಸದನದಲ್ಲಿ ಪ್ರದರ್ಶಿಸಿದ್ದರೇ ಸಾಕಿತ್ತು. ಸಂತೋಷ್‌ ಲಾಡ್‌ ಮಾಜಿಯಾಗಿರುತ್ತಿದ್ದರು.

ಹುಬ್ಬಳ್ಳಿ: ಬರೋಬ್ಬರಿ 900 ಕೋಟಿರೂಗಳ ಬಹುದೊಡ್ಡ ಹಗರಣ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನಡೆದರೂ ಏನು ಆಗಿಯೇ ಇಲ್ಲವೆಂಬತೇ ಆ ಇಲಾಖೆಯ ಸಚಿವ ಸಂತೋಷ್‌ ಲಾಡ್‌ ಜುಮ್ಮೆಂದು ಓಡಾಡುತ್ತಿದ್ದಾರೆ.

ಸಂತೋಷ್‌ ಲಾಡ್‌ ವಿರುದ್ದ ಕಳೆದ ಬಾರಿ ಕಲಘಟಗಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗರಾಜ್‌ ಛಬ್ಬಿ ಹಗಲು ರಾತ್ರಿ ಈ ಹಗರಣದ ಬಗ್ಗೆ ಬಾಯಿ ಬಡಕೊಂಡರು.

ಹಗರಣದ ದಾಖಲೆಗಳನ್ನು ಹೆಕ್ಕಿ ತೆಗೆದು ಬಿಜೆಪಿ ನಾಯಕರಿಗೆ ನೀಡಿದರು. ಆದರೆ ಬಿಜೆಪಿ ನಾಯಕರೂ ಮಾತ್ರ ಬೆಳಗಾವಿ ಅಧಿವೇಶನದಲ್ಲಿ ಗಪ್‌ಚುಪ್‌ ಆಗಿದ್ದು ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಧಾರವಾಡ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕ ನಾಗರಾಜ್‌ ಛಬ್ಬಿ

ವಿಪಕ್ಷ ನಾಯಕ್‌ ಆರ್‌ ಅಶೋಕ್‌ ಮಾಡಬೇಕಾದ ಕೆಲಸವನ್ನು ಚಿತ್ರದುರ್ಗದ ಎಂಎಲ್‌ಸಿ ಕೆಎಸ್‌ ನವೀನ್‌, ಈ ಹಗರಣವನ್ನು ಈಗ ಕೆಲವು ತಿಂಗಳು ಹಿಂದೆ ದಾಖಲೆ ಸಮೇತ ಬಯಲು ಮಾಡಿದ್ದರು. ನಂತರ ಅವರ ಬಾಯನ್ನು ಮುಚ್ಚಿಸಲಾಗಿದೆ.

ತಾವು ಸಂಘದ ಹಿನ್ನೆಲೆಯುಳ್ಳವರು ಎಂದು ಹಗರಣದ ದಾಖಲೆ ಪಡೆದ ಮತ್ತೊಬ್ಬ ಶಾಸಕ ಎನ್‌ ರವಿಕುಮಾರ್‌ ಕಳೆದ ಬಾರಿ ಸದನದಲ್ಲಿ ಕಾಟಾಚಾರಕ್ಕೆ ಎಂಬಂತೆ ವಿಷಯ ಪ್ರಸ್ತಾಪಿಸಿದ್ದರು.

ಮುಂದೆ ಅದು ಠುಸ್ಸಾಯಿತು. ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆಯ ಹಗರಣದ ಬಗ್ಗೆ ಗೊತ್ತೆ ಇಲ್ಲವೆಂಬಂತೇ ಶಾಸಕ ಎನ್‌ ರವಿಕುಮಾರ್‌ ಇದ್ದರು.

ಇದು ರವಿಕುಮಾರ್‌ ಅವರ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿತು.

ಮೊನ್ನೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆಯ ಹಗರಣದ ಬಗ್ಗೆ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರು ತುಟಿಪಿಟಿಕ್‌ ಮಾಡಲಿಲ್ಲ.

ವಿಚಿತ್ರ ಎಂದರೇ ಸಂತೋಷ್ ಲಾಡ್‌ ಸದೆಬಡಿಯಲು ಎಂದು ಈ ಹಗರಣದ ಎಲ್ಲ ದಾಖಲೆಗಳನ್ನು ಆರ್‌ ಅಶೋಕ್‌ ತರಿಸಿ ಇಟ್ಟುಕೊಂಡಿದ್ದರು.

ಬೆಳಗಾವಿವರೆಗೆ ತಂದಿದ್ದ ಕಾರ್ಮಿಕ ಇಲಾಖೆಯ ಹಗರಣದ ದಾಖಲೆಗಳ ಫೈಲ್‌ ಅನ್ನು ಆರ್‌ ಅಶೋಕ್‌ ಅವರು ಅಧಿವೇಶನದಲ್ಲಿ ತೆರೆಯಲೇ ಇಲ್ಲ.

ಬಹುಶಃ ಆರ್‌ ಅಶೋಕ್‌ ತಮ್ಮಲ್ಲಿರುವ ದಾಖಲೆಗಳನ್ನು ಸದನದಲ್ಲಿ ಪ್ರದರ್ಶಿಸಿದ್ದರೇ ಸಾಕಿತ್ತು. ಸಂತೋಷ್‌ ಲಾಡ್‌ ಮಾಜಿಯಾಗಿರುತ್ತಿದ್ದರು.

ಕಾರ್ಮಿಕ ಇಲಾಖೆಯ ಹಗರಣದ ಬಗ್ಗೆ ದಾಖಲೆಗಳನ್ನು ತರಿಸಿಕೊಂಡಿದ್ದ ಆರ್‌ ಅಶೋಕ್‌

ವಿಪಕ್ಷ ನಾಯಕರನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿರುವ ಈ ಹಗರಣದ ರೂವಾರಿ ಸಂತೋಷ್‌ ಲಾಡ್‌ ಅವರು ಈಗ ಮತ್ತೆ ಲೂಟಿಗೆ ಸಿದ್ದರಾಗಿ ನಿಂತಿದ್ದಾರೆ.

ಈ ಕಡೆ ಪಾಪ! ನಾಗರಾಜ್‌ ಛಬ್ಬಿ ಮಾತ್ರ, ಸಂತೋಷ್‌ ಲಾಡ್‌ ಸೊಂಟ ಮುರಿಯುತ್ತೇ ಅಂತ ಹುಬ್ಬಳ್ಳಿಯಿಂದ ದಿನಾ ಬೆಳಗಾವಿಗೆ ಹೋಗಿ ಬಂದಿದ್ದೇ ಆಯ್ತು ಅಷ್ಟೇ..ಸಂತೋಷ್‌ ಲಾಡ್‌ ಸೇಫ್‌ ಆಗಿದ್ದು ನೋಡಿ, ಬಿಜೆಪಿ ನಾಯಕರನ್ನು ನಂಬಿ ಕೆಟ್ಟನಲ್ಲ ಎಂದು ಈಗ ಏಕಾಂಗಿಯಾಗಿ ಲಬೋ ಲಬೋ ಅನ್ನುತ್ತಿದ್ದಾರೆ.

ಕಾರ್ಮಿಕ ಇಲಾಖೆಯಲ್ಲಿನ ನೂರಾರು ಕೋಟಿರೂ.ಗಳ ಹಗರಣ ಅಗೆದಷ್ಟು..ಬಗೆದಷ್ಟು ವಿಸ್ತಾರವಾಗತೊಡಗಿದೆ. ಸರಿಯಾಗಿ ತನಿಖೆ ನಡೆದರೇ ಸಚಿವ ಸಂತೋಷ್‌ ಲಾಡ್‌ ವರುಷಗಟ್ಟಲೇ ಜೈಲಿನಲ್ಲಿ ಇರಬೇಕಾದ ಸ್ಥಿತಿ ಬರಲಿದೆ.

ಆದರೆ ಎಲ್ಲರನ್ನು manage ಮಾಡುವಲ್ಲಿ ತಾತ್ಕಾಲಿಕವಾಗಿಯಾದರೂ ಸಂತೋಷ್‌ ಲಾಡ್‌ ಸಕ್ಸಸ್‌ ಆಗಿರೋದು ಮಾತ್ರ ನಿಜ.

ಇರಲಿ. ಈ ಹಗರಣದ ಬಗ್ಗೆ ಮತ್ತು ಇದು ಗೊತ್ತಿದ್ದರೂ ಸಹ ಮೌನ ವಹಿಸಿರುವ ರಾಜಕೀಯ ಪಕ್ಷಗಳ ನಾಯಕರ ಬಣ್ಣವನ್ನು ಬಯಲು ಮಾಡುವ ಮುನ್ನ ಕೊಂಚ ಈ ಸಂತೋಷ ಲಾಡ್‌ ನ ಫ್ಲ್ಯಾಷ್‌ ಬ್ಯಾಕ್‌ ನೋಡಿಕೊಂಡು ಬರೋಣ!

ಅದು 2008. ರಾಜ್ಯದಲ್ಲಿ ಕ್ಷೇತ್ರ ವಿಂಗಡಣೆ ಆಗಿದ್ದರಿಂದ ಸಂಡೂರು ಶಾಸಕನಾಗಿದ್ದ ಸಂತೋಷ್‌ ಲಾಡ್‌ಗೆ ಬಳ್ಳಾರಿಯಲ್ಲಿ ಕ್ಷೇತ್ರವೇ ಸಿಗಲಿಲ್ಲ.

ಎಂ.ಪಿ.ಪ್ರಕಾಶ್‌ ಜೊತೆ ಕಾಂಗ್ರೆಸ್‌ ಸೇರಿದ್ದ ಸಂತೋಷ್‌ ಲಾಡ್‌ ಆಗ ವಕ್ಕರಿಸಿಕೊಂಡಿದ್ದೇ ಧಾರವಾಡದ ಕಲಘಟಗಿ ಕ್ಷೇತ್ರವನ್ನು. ಹಾಗೇ ವಕ್ಕರಿಸಿಕೊಂಡ ಮಾತ್ರಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ.

ಯಾಕೆಂದರೇ ಕೊಡುಗೈ ದಾನಿ ನಾಗರಾಜ್‌ ಛಬ್ಬಿ. ಸುಮಾರು ಒಂದು ದಶಕದಿಂದಲೇ ಕಲಘಟಗಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ತಯಾರಿ ಮಾಡಿಕೊಂಡು ಬಂದಿದ್ದರು. ಕ್ಷೇತ್ರದ ಮತದಾರರಿಗೂ ಛಬ್ಬಿ ಅವರ ಬಗ್ಗೆ ಒಲುವು ಇತ್ತು.

ಕಾಂಗ್ರೆಸ್‌ನ ಆಗಿನ ಬಲಾಢ್ಯ ಮುಖಂಡ, ಮಾಜಿ ಮುಖ್ಯಮಂತ್ರಿ ಎನ್‌ ಧರ್ಮಸಿಂಗ್‌ ಅವರು ತಮ್ಮ ಶಿಷ್ಯ ಛಬ್ಬಿಗೆ ಟಿಕೆಟ್‌ ಬೇಕೆಂದು ಪಟ್ಟು ಹಿಡಿದು ಕೂತುಬಿಟ್ಟಿದ್ದರು.

ಹೈಕಮಾಂಡ ಮಟ್ಟದಲ್ಲಿ ಬಲಾಢ್ಯರಾಗಿದ್ದ ಧರ್ಮಸಿಂಗ್‌ ಅವರು ಆಗ ತಮ್ಮ ಶಿಷ್ಯನಿಗೆ ಟಿಕೆಟ್‌ ಪಕ್ಕಾ ಮಾಡಿದ್ದರು.

ಜಾತ್ಯಾತೀತ ಜನತಾದಳದಿಂದ ಎಂ.ಪಿ.ಪ್ರಕಾಶ್‌ ಜೊತೆ ಕಾಂಗ್ರೆಸ್‌ಗೆ ವಲಸೆ ಬರುವಾಗಲೇ ಎಲ್ಲರಿಗೂ ಟಿಕೆಟ್‌ ಪಕ್ಕಾ ಮಾಡಿಕೊಂಡು ಬಂದಿದ್ದರು.

ಆದರೆ ಸಂತೋಷ್‌ ಲಾಡ್‌ ವಿಚಾರದಲ್ಲಿ ಮಾತ್ರ ಎಂ.ಪಿ.ಪ್ರಕಾಶ್‌ ಪಟ್ಟು ಹಿಡಿದರೂ ಕಲಘಟಗಿ ಟಿಕೆಟ್ ‌ಕೊಡಿಸಲು ಆಗಲಿಲ್ಲ. ಆ ಮಟ್ಟಿಗೆ ನಾಗರಾಜ್‌ ಛಬ್ಬಿ ಪರ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಂತುಬಿಟ್ಟಿದ್ದರು.

ಟಿಕೆಟ್‌ ಖಚಿತವಾಗಿದ್ದರಿಂದ ದೆಹಲಿ ಬಿಟ್ಟು ಕಲಘಟಗಿ ಸೇರಿದ್ದ ನಾಗರಾಜ್‌ ಛಬ್ಬಿ ಒಂದು ಹಂತದ ಪ್ರಚಾರ ಕಾರ್ಯ ಶುರು ಮಾಡಿದ್ದರು.

ಆದರೆ ಈ ಕಡೆ ಕಾಂಗ್ರೆಸ್‌ಗೆ ಬಂದರೂ ಟಿಕೆಟ್‌ ಸಿಗದೇ ಸಂತೋಷ್‌ ಲಾಡ್‌ ವಿಲವಿಲ ಒದ್ದಾಡುತ್ತಿದ್ದ. ಕಂಡವರ ಕಾಲು ಹಿಡಿದು ಟಿಕೆಟ್‌ಗಾಗಿ ದುಂಬಾಲು ಬೀಳತೊಡಗಿದ್ದರು.

ಟಿಕೆಟ್‌ ಪಡೆಯಲು ಹರಸಾಹಸ ಮಾಡುತ್ತಿದ್ದ ಅದ್ಹೇಗೋ ತಮ್ಮ ಕುಲಬಾಂಧವ ಮಹಾರಾಷ್ಟ್ರದ ಪೃಥ್ವಿರಾಜ್‌ ಚೌಹಾಣ್‌ ಅವರ ಕಾಲು ಹಿಡಿದುಕೊಂಡ ಈ ಸಂತೋಷ್‌ ಲಾಡ್‌.

ಕಾಂಗ್ರೆಸ್‌ನ ಮುಖಂಡ ಪೃಥ್ವಿರಾಜ್‌ ಚೌಹಾಣ್

ಚೌಹಾಣ್‌ ಸಹ ನಮ್ಮ ಜಾತಿ ಹುಡುಗ ಎಂದು ಆಗ ಕರ್ನಾಟಕ ಉಸ್ತುವಾರಿಯಾಗಿದ್ದ ಗುಲಾಮನಬಿ ಆಜಾದ್‌ ಮೇಲೆ ಒತ್ತಡ ತಂದರು.

ಆದರೆ ಧರ್ಮಸಿಂಗ್‌ ಒತ್ತಡ ಹೇಗಿತ್ತೆಂದರೇ, ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ್‌ ಛಬ್ಬಿ ಹೊರತಾಗಿ ಯಾರಿಗೂ ಟಿಕೆ ನೀಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಪಟ್ಟು ಬಿಡದ ಸಂತೋಷ್‌ ಲಾಡ್‌, ಗುಲಾಮನಬಿ ಆಜಾದ್‌ ಅದೇನು? ಹಣ್ಣು ತಿನಿಸಿದನೋ ಗೊತ್ತಿಲ್ಲ.

ಸ್ವತಃ ಗುಲಾಮ್‌ನಬಿ ಆಜಾದ್‌ ಅಂತಹ ನಾಯಕರು ನಾಗರಾಜ್‌ ಛಬ್ಬಿ ಮೊಬೈಲಿಗೆ ಕರೆ ಮಾಡಿಬಿಟ್ಟರು.

ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗುಲಾಮ್‌ನಬಿ ಆಜಾದ್

ಅಷ್ಟೇ!. ನಾಗರಾಜ್‌ ಛಬ್ಬಿ ಸಹ ತಮ್ಮ ಮುಂದಿನ ಭವಿಷ್ಯ ಏನು ಎಂದು ಸಹ ಯೋಚಿಸಲಿಲ್ಲ. ಓಕೆ ಸರ್‌ ಅಂದು ಬಿಟ್ಟರು.

ಸಂತೋಷ್‌ ಲಾಡ್‌ಗೆ ಟಿಕೆಟ್‌ ಕೊಟ್ಟರೇ ಅಭ್ಯಂತರ ಇಲ್ಲ ಎಂದು ಹೈಕಮಾಂಡಗೆ ನಾಗರಾಜ್‌ ಛಬ್ಬಿ ಪತ್ರ ಬರೆದು ಫ್ಯಾಕ್ಸ್‌ ಮಾಡಿದರು.

ಧರ್ಮಸಿಂಗ್‌ ತಲೆ.. ತಲೆ ಬಡಿದುಕೊಂಡರು. ಮುಂದಾಗಿದ್ದು ಇತಿಹಾಸ..ಅಂದು ಹೊಂದಾಣಿಕೆ ಮಾಡಿಕೊಳ್ಳದೇ ಇದ್ದಿದ್ದರೇ, ನಾಗರಾಜ್‌ ಛಬ್ಬಿ ಇವತ್ತು ಧಾರವಾಡ ಜಿಲ್ಲೆಯ ಲಿಂಗಾಯತರ ಪರಮೋಚ್ಛ ನಾಯಕನಾಗಿರುತ್ತಿದ್ದರು.

2008ರಿಂದ ಬಹುಶಃ ಇವತ್ತಿಗೂ ನಾಗರಾಜ್‌ ಛಬ್ಬಿ ಅವರೇ ಶಾಸಕರಾಗಿ , ಸಚಿವರಾಗುವ ಅವಕಾಶವಿತ್ತು. ತನ್ನದೇ ತಪ್ಪಿನಿಂದ, ಎಡವಟ್ಟಿನಿಂದ ಅಂತಹ ಸುವರ್ಣ ಘಳಿಗೆಯನ್ನು ಕಳೆದುಕೊಂಡ ನಾಗರಾಜ್‌ ಛಬ್ಬಿ ಇವತ್ತಿಗೂ ಏಳಿಗೆ ಕಾಣುತ್ತಿಲ್ಲ.

ಇದು.. ನಾಗರಾಜ್‌ ಛಬ್ಬಿ ಎಂಬ ನಾಯಕನ ದುರಂತ ಕಥೆ? ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿದೆ.

ಆದರೆ ನಾಗರಾಜ್‌ ಛಬ್ಬಿ ವಿಷಯದಲ್ಲಿ ಇಲ್ಲಿ ಸ್ವಲ್ಪ change ಮಾಡಿಕೊಳ್ಳಿ. ಬಾಯಲ್ಲಿ ಇದ್ದದ್ದನ್ನು ಉಗುಳಿದರು.. ಎಂದು ಗಾದೆ ಮಾಡಿಕೊಳ್ಳಿ. ‌

ಧಾರವಾಡ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕ ನಾಗರಾಜ್‌ ಛಬ್ಬಿ

ಯಾಕೆಂದರೇ, ಧರ್ಮಸಿಂಗ್‌ ಅಂತಹ ನಾಯಕರು ಪಟ್ಟು ಹಿಡಿದು ಕೊಡಿಸಿದ್ದ ಟಿಕೆಟ್‌ ಅನ್ನು ಅವರಿಗೆ ಗೊತ್ತಿಲ್ಲದಂತೇ “ನಂಗ್‌ ಬ್ಯಾಡ್‌ ಬಿಡ್ರಿ” ಎಂದು ಉಗುಳಿ ಬಂದಿದ್ದರು ನಾಗರಾಜ್‌ ಛಬ್ಬಿ.

ಸರಿ. ಇನ್ನು ಬಹುತೇಕ ಟಿಕೆಟ್‌ ಸಿಗಲ್ಲ ಎಂದು ಕೈಚೆಲ್ಲಿದ್ದ ಸಂತೋಷ್‌ ಲಾಡ್‌, ಹೊಸ ಹುರುಪಿನೊಂದಿಗೆ ಕಲಘಟಗಿಗೆ ಹೆಲಿಕ್ಯಾಪ್ಟರ್‌ನಲ್ಲಿ ಜುಮ್ಮೆಂದು ಬಂದರು.

ಶಾಸಕನಾಗ ಬೇಕಾಗಿದ್ದ ನಾಗರಾಜ್‌ ಛಬ್ಬಿ ಖುದ್ದು ನಿಂತು ಸಂತೋಷ್‌ ಲಾಡ್‌ ಚುನಾವಣೆಯ ಜವಾಬ್ದಾರಿ ಹೊತ್ತುಕೊಂಡರು.

ಇಡೀ ಕ್ಷೇತ್ರದ ಆಳ ಅಗಲ ಜನರೊಂದಿಗೆ ಒಡನಾಟವಿದ್ದ ನಾಗರಾಜ್‌ ಛಬ್ಬಿ. ಭಾರಿ ಬಹುಮತದಿಂದ ಸಂತೋಷ್‌ ಲಾಡ್‌ ಅವರನ್ನು ಗೆಲ್ಲಿಸಿಕೊಂಡು ಬಂದರು.

ನಾಗರಾಜ್‌ ಛಬ್ಬಿಯ ತಾಕತ್ತು ಗೊತ್ತಿದ್ದ ಸಂತೋಷ್‌ ಲಾಡ್‌. ಚುನಾವಣೆ ಮುಗಿಯೋತನಕ ನಾಗರಾಜ್‌ ಛಬ್ಬಿ ಹೇಳೀದ್ದೇ ವೇದವಾಕ್ಯವಾಗಿತ್ತು.

ಛಬ್ಬಿ ಹಿಂದಲೇ ಸುತ್ತುತ್ತಿದ್ದ ಸಂತೋಷ್‌ ಲಾಡ್‌, ನಾಗರಾಜ್‌ ಛಬ್ಬಿಗೆ ʼಅಣ್ಣಾʼ ಎಂದು ಕರೆಯುತ್ತಿದ್ದರು. ಮುಂದೆ ಗೆದ್ದ ನಂತರ ಅದೇ ʼಅಣ್ಣಾʼನಿಗೆ ಸರಿಯಾಗಿ ಗುನ್ನ ಇಟ್ಟರು.

ನಾಗರಾಜ್‌ ಛಬ್ಬಿಗೆ 2ನೇ ಬಾರಿ ಎಂಎಲ್‌ಸಿ ಅವಕಾಶವಿದ್ದರೂ ಹಿಂದೆ ಸರಿದಿದ್ದು ಯಾಕೆ?
ಎಂಎಲ್‌ಸಿ ತ್ಯಾಗ?ಕ್ಕೆ ಅದೇನು ಕಾರಣ?
2ನೇ ಬಾರಿಗೆ ರಾಜಕೀಯ ಜೀವನ ಹಾಳು ಮಾಡಿಕೊಂಡ ನಾಗರಾಜ್‌ ಛಬ್ಬಿ!
ಕಾರ್ಮಿಕ ಇಲಾಖೆಯ ಬಹುಕೋಟಿ ಹಗರಣದ ಬಗ್ಗೆ ತುಟಿಪಿಟಿಕ ಮಾಡದ ಆರ್‌ ಅಶೋಕ್‌ಗೆ ಅದ್ಯಾವ ಒತ್ತಡವಿತ್ತು?
ಬಿಜೆಪಿ ನಾಯಕರನ್ನು ನಂಬಿ ಕೆಟ್ಟರಾ? ನಾಗರಾಜ್‌ ಛಬ್ಬಿ!

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button