ಬಿಎಸ್ವೈ ಅಭಿಮಾನೋತ್ಸವ ಅಭೂತಪೂರ್ವ ಯಶಸ್ಸು|ಅನುಭವ ಮಂಟಪದ ವಾತಾವರಣ|ಜನರ ಪ್ರೀತಿಗೆ ಬಿ.ವೈ.ರಾಘವೇಂದ್ರ ಸಾಷ್ಟಾಂಗ ನಮನ
ಬಿಎಸ್ವೈ ಅಭಿಮಾನೋತ್ಸವಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿರುವ ಸಂಸದ ಬಿ.ವೈ. ರಾಘವೇಂದ್ರ, ಭಾಗವಹಿಸಿದ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೆ, ಹರ ಗುರು ಚರ ಮೂರ್ತಿಗಳಿಗೆ, ಎಲ್ಲಾ ಗಣ್ಯರಿಗೆ, ನಾಡಿನ ಅಭಿಮಾನಿ ಜನತೆಗೆ, ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಶಿವಮೊಗ್ಗ: ರೈತ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ ಐವತ್ತು ವರುಷ ಸಂದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವಕ್ಕೆ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಭಿಮಾನೋತ್ಸವವು ನಾಡಿನ ಅಭಿಮಾನದ ‘ಸಾಂಸ್ಕೃತಿಕ ಜನೋತ್ಸವ’ವಾಗಿ ಚರಿತ್ರೆಯ ಪುಟ ಸೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಬಿ.ವೈ.ರಾಘವೇಂದ್ರ|

ಅಭೂತಪೂರ್ವ ಯಶಸ್ಸು ಕಂಡಿರುವ ಬಿಎಸ್ವೈ ಅಭಿಮಾನೋತ್ಸವಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿರುವ ಸಂಸದ ಬಿ.ವೈ. ರಾಘವೇಂದ್ರ, ಭಾಗವಹಿಸಿದ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೆ, ಹರ ಗುರು ಚರ ಮೂರ್ತಿಗಳಿಗೆ, ಎಲ್ಲಾ ಗಣ್ಯರಿಗೆ, ನಾಡಿನ ಅಭಿಮಾನಿ ಜನತೆಗೆ, ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರವಾಹೋಪಾದಿಯಲ್ಲಿ ಜನಸಾಗರ|
ಜನರ ಪ್ರೀತಿಗೆ ಸಾಷ್ಟಾಂಗ ನಮನ|


ಬಿ.ಎಸ್.ಯಡಿಯೂರಪ್ಪನವರ ಮೇಲಿರುವ ಅಚಲವಾದ ಪ್ರೀತಿ, ಅಭಿಮಾನ ಮತ್ತು ವಿಶ್ವಾಸದಿಂದ, ಸುಡುವ ಬಿಸಿಲನ್ನು ಲೆಕ್ಕಿಸದೆ ನಾಡಿನ ಮೂಲೆ ಮೂಲೆಗಳಿಂದ ಚಿತ್ರದುರ್ಗಕ್ಕೆ ಬಂದ ಅಭಿಮಾನಿಗಳು, ಕಾರ್ಯಕರ್ತರು, ಸ್ವಯಂಸೇವಕರು, ತಾಯಂದಿರು, ಸೋದರಿಯರು, ಶ್ರೀಸಾಮಾನ್ಯರ ಜನಸಾಗರದ ಸಂಪೂರ್ಣ ಸಹಕಾರದಿಂದ ತಮ್ಮ ನಾಯಕನ ಅಭಿಮಾನೋತ್ಸವ, ನಾಡಿನ ಜನೋತ್ಸವವಾಗಿ ಮಾರ್ಪಟ್ಟಿತು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.


ಪೂಜ್ಯ ತಂದೆಯವರ ಮೇಲೆ ಜನರ ಅತಿಶಯವಾದ ಪ್ರೀತಿ, ವಿಶ್ವಾಸಗಳಿಗೆ ಪ್ರತಿಯಾಗಿ ಏನು ಹೇಳುವುದು ಸಾಧ್ಯ ಎಂದಿದ್ದಾರೆ.
ಆಗಮಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ, ಅತ್ಯಂತ ವಿನೀತ ಭಾವದಿಂದ ಹೃದಯತುಂಬಿ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು ಅಭಿಮಾನೋತ್ಸವ ಸಮಿತಿಯ ಸಂಚಾಲಕರು ಆಗಿದ್ದ ಸಂಸದ ರಾಘವೇಂದ್ರ ಭಾವಪರವಶರಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನುಭವ ಮಂಟಪದ ಸ್ಮರಣೆ|
ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲಾ ಮಠಾಧೀಶರು, ಹರ ಗುರು ಚರ ಮೂರ್ತಿಗಳು, ಧರ್ಮಗುರುಗಳು ಬಿಎಸ್ವೈ ಅವರಿಗೆ ಆಶೀರ್ವಾದಿಸಿದ್ದಾರೆ.

ಎಲ್ಲರಿಗೂ ಶಿರಸಾಷ್ಟಾಂಗ ನಮನಗಳನ್ನು ಸಲ್ಲಿಸುವದಾಗಿ ಹೇಳಿರುವ ಅವರು, ಪರಮಪೂಜ್ಯರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನಗಳು ‘ಅನುಭವ ಮಂಟಪ’ದ ಪರಿಕಲ್ಪನೆಯನ್ನು ಸ್ಮರಿಸುವಂತೆ ಮಾಡಿತ್ತು ಎಂದು ಸಂಸದ ರಾಘವೇಂದ್ರ ಭಕ್ತಿಪೂರ್ವಕವಾಗಿ ಸ್ಮರಿಸಿದ್ದಾರೆ.
ಪ್ರಧಾನಿ ಮೋದಿ ಅವರ ಸಂದೇಶಕ್ಕೆ ಕೃತಜ್ಞತೆ|

ಅಭಿಮಾನೋತ್ಸವದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಬಿಎಸ್ವೈ ಅವರಿಗೆ ಶುಭಸಂದೇಶವನ್ನು ಹಂಚಿಕೊಂಡಿದ್ದಕ್ಕೆ ಸಂಸದ ರಾಘವೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಇನ್ನು ತಮ್ಮ ಬಿಡುವಿಲ್ಲದ ಕಾರ್ಯಗಳ ಒತ್ತಡದ ನಡುವೆಯೂ, ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ಸವದ ಗರಿಮೆ ಹೆಚ್ಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಧಾ ಮೋಹನ್ ಅಗರ್ವಾಲ್, ಸುಧಾಕರ್ ರೆಡ್ಡಿ ಸೇರಿದಂತೆ ಆಗಮಿಸಿದ ಎಲ್ಲ ಕೇಂದ್ರ ಸಚಿವರುಗಳಿಗೆ, ರಾಷ್ಟ್ರೀಯ ನಾಯಕರುಗಳಿಗೆ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರುಗಳಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ನಾಯಕರಿಗೆ, ಮುಖಂಡರಿಗೆ, ಪದಾಧಿಕಾರಿಗಳಿಗೆ, ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ರಾಘವೇಂದ್ರ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಪುರ ಪ್ರಮುಖರ ಸಹಕಾರ ಅನನ್ಯ|
ಇನ್ನು ಚಿತ್ರದುರ್ಗದ ಪುರ ಪ್ರಮುಖರ ಸಹಕಾರ ಸಮಾವೇಶದ ಯಶಸ್ಸಿನ ಹಿಂದಿನ ಶಕ್ತಿ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.


ಕಾರಜೋಳ, ಕೋರೆ ಅವರ ಶ್ರಮ ಅನನ್ಯ|
ಬಿಎಸ್ವೈ ಅಭಿಮಾನೋತ್ಸವ ಅಭೂತಪೂರ್ವ ಯಶಸ್ಸಿಗೆ ಶ್ರಮಿಸಿದ ಅಭಿಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಗೋವಿಂದ ಕಾರಜೋಳ ಹಾಗೂ ಸಮಿತಿಯ ಪ್ರಮುಖರಾದ ಪ್ರಭಾಕರ್ ಕೋರೆ, ಶ್ರೀರಾಮುಲು, ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದ ಸಮಿತಿಯ ಮಾರ್ಗದರ್ಶನವನ್ನು, ಪರಿಶ್ರಮವನ್ನು ಸಂಸದ ರಾಘವೇಂದ್ರ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಾಧ್ಯಮಗಳ ಸಹಕಾರ|
ಐತಿಹಾಸಿಕ ಕ್ಷಣವನ್ನು ಕೋಟ್ಯಂತರ ಜನರಿಗೆ ತಲುಪಿಸಿದ ಮಾಧ್ಯಮ ಮಿತ್ರರ ಸಹಕಾರ ಕೂಡ ಅತ್ಯಂತ ಸ್ಮರಣೀಯ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

ಇದೊಂದು ರಾಜಕೀಯ ಸಮಾವೇಶವಾಗಿ ಉಳಿಯದೆ, ನಾಡಿನ ಜನರ ಸಾಂಸ್ಕೃತಿಕ ಹಬ್ಬವಾಗಿ, ಜನೋತ್ಸವಾಗಿ ಮಾರ್ಪಟ್ಟಿದ್ದು ನಿಜಕ್ಕೂ ಹೆಮ್ಮೆ ಹಾಗೂ ಸಂತೃಪ್ತಿಯನ್ನು ನೀಡಿದೆ ಎಂದಿದ್ದಾರೆ.
ಅಭಿಮಾನೋತ್ಸವದ ಆಯೋಜನೆಯ ಹಿಂದೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಅತ್ಯಂತ ಆತ್ಮೀಯವಾಗಿ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







