DistrictShivamogga

Shivmogga:ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಗೆ ವಜ್ರಮಹೊತ್ಸವ ಸಂಭ್ರಮ|ಕ್ರೀಡಾಕೂಟದಲ್ಲಿ ಕುಮಾರ್‌ ಬಂಗಾರಪ್ಪ, ಡಾ.ಧನಂಜಯ ಸರ್ಜಿ ಭಾಗಿ?

1965ರಲ್ಲಿ ಆರಂಭವಾದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಯಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ಕಾಂಗ್ರೆಸ್‌ ನಾಯಕ ಹೆಚ್‌ ಸಿ ಯೋಗೇಶ್‌, ಸಂತೋಷ್‌ ಬಳ್ಳೆಕೆರೆ ಸೇರಿದಂತೇ ಇತರೆ ಹಳೇಯ ವಿದ್ಯಾರ್ಥಿಗಳು ಜೊತೆಯಾಗಿ ಈ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.

ಮಾಜಿ ಸಚಿವ ಕುಮಾರ್‌ ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ಕಾಂಗ್ರೆಸ್‌ ನಾಯಕ ಹೆಚ್‌ ಸಿ ಯೋಗೇಶ್‌ ಸೇರಿದಂತೆ ಹಲವರು ಡಿ 20ರಂದು ಶಿವಮೊಗ್ಗದಲ್ಲಿ ಏರ್ಪಡಿಸಲಾಗಿರುವ ಕ್ರೀಡಾಕೂಟದಲ್ಲಿ ಖುದ್ದು ಸ್ಪರ್ದಾಳುಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅಷ್ಟೇ ಅಲ್ಲದೇ ಇವರೊಂದಿಗೆ . ಉತ್ತರ ಪ್ರದೇಶದ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಎಲ್, ವೈ, ಐಎಎಸ್ ಅಧಿಕಾರಿ ಡಾ. ದಯಾನಂದ ಮತ್ತು ಮಂಜುನಾಥ ನಾಯ್ಕ್, ಇಸ್ರೋ ವಿಜ್ಞಾನಿ ಗಣೇಶ್ ನಾಯರ್ ಸೇರಿದಂತೆ ಹಲವರು ಬಹುತೇಕ ಆ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. (ಹಳೇಯ ವಿದ್ಯಾರ್ಥಿಗಳಲ್ಲಿ ಕೆಲವರು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.)

ಅರೇ ಇದೇನಿದು…ರಾಜಕೀಯ ನಾಯಕರು, ಹಿರಿಯ ಐಎಎಸ್‌ ಅಧಿಕಾರಿಗಳು ಒಟ್ಟಾಗಿ ಅದ್ಯಾವ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಈ ಸುದ್ದಿಯನ್ನು ಓದಿದ ಜನರಲ್ಲಿ ಸಹಜವಾಗಿ ಪ್ರಶ್ನೆ ಮೂಡುವದಂತು ಸಹಜ.

ಹೌದು..ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರೇ ಈ ಎಲ್ಲ ವಿಷಯವನ್ನು ಸೋಮವಾರದಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಘಟಾನುಘಟಿ ರಾಜಕಾರಣಿಗಳು ಒಂದೆಡೆ ಸೇರಲು ಶಿವಮೊಗ್ಗದ ಪ್ರತಿಷ್ಠಿತ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ವಜ್ರಮಹೋತ್ಸವ ಕಾರ್ಯಕ್ರಮ ಕಾರಣವಾಗಲಿದೆ.

ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಡಿಸೆಂಬರ್‌ 20 ಹಾಗು 21 ರಂದು ಆಯೋಜಿಸಲಾಗಿರುವ ಎರಡು ದಿನಗಳ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಕಲಿತಿರುವ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಸೇರಿದಂತೆ ಬಹುತೇಕ ಜನರು ಭಾಗವಹಿಸಲಿದ್ದಾರೆ.

1965ರಲ್ಲಿ ಆರಂಭವಾದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಯಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ್‌ ಸರ್ಜಿ, ಕಾಂಗ್ರೆಸ್‌ ನಾಯಕ ಹೆಚ್‌ ಸಿ ಯೋಗೇಶ್‌, ಸಂತೋಷ್‌ ಬಳ್ಳೆಕೆರೆ ಸೇರಿದಂತೇ ಇತರೆ ಹಳೇಯ ವಿದ್ಯಾರ್ಥಿಗಳು ಜೊತೆಯಾಗಿ ಈ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ.

ಸೇಕ್ರೆಡ್‌ ಹಾರ್ಟ್‌ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹಾಗು ಕಾಂಗ್ರೆಸ್‌ ಮುಖಂಡ ಹೆಚ್‌ ಸಿ ಯೋಗೇಶ್‌

ಎರಡು ದಿನಗಳ ಕಾಲ ನಡೆಯಲಿರುವ ವಜ್ರಮಹೋತ್ಸವದ ಮೊದಲ ದಿನ ಡಿ. 20 ರಂದು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ ಹಳೆಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಸಂಜೆ ಮನೋರಂಜನಾ ಕಾರ್ಯಕ್ರಮ ಮತ್ತು ಔತಣಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ.

ಡಿ.21ರಂದು ಸಂಜೆ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಅದ್ದೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ವಜ್ರ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಕುಮಾರ್‌ ಬಂಗಾರಪ್ಪ ಹೇಳಿದರು.

1990-93 ರ ಸಾಲಿನ ವಿದ್ಯಾರ್ಥಿಗಳ ಪುರ್ನಮಿಲನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಹೆಚ್‌ ಸಿ ಯೋಗೇಶ್‌ ಹಾಗು ಬಿಜೆಪಿ ಧುರೀಣ ಸಂತೋಷ್‌ ಬಳ್ಳೆಕೆರೆ ಅವರು ಭಾಗವಹಿಸಿರುವ ಅಪರೂಪದ ಚಿತ್ರ
Follow Us

Leave a Reply

Your email address will not be published. Required fields are marked *

Back to top button