ಶಿವಮೊಗ್ಗದಲ್ಲಿ ಜ.14 ರಿಂದ ‘ರಂಗ ಸಂಕ್ರಾಂತಿ’ ನಾಟಕೋತ್ಸವ|6 ದಿನಗಳ ಕಾಲ ವಿವಿಧ ನಾಟಕಗಳ ಪ್ರದರ್ಶನ|ರಂಗಾಯಣದಿಂದ ಆಯೋಜನೆ|
6 ದಿನಗಳು ಕಾಲ ನಡೆಯಲಿರುವ ರಂಗ ಸಂಕ್ರಾಂತಿ ನಾಟಕೋತ್ಸವದಲ್ಲಿ ಪ್ರತಿ ನಾಟಕಕ್ಕೆ 30 ರೂ. ನಿಗದಿಪಡಿಸಲಾಗಿದೆ. ಸುವರ್ಣಸಂಸ್ಕ್ರತಿ ಭವನ ಅಶೋಕನಗರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.

ಶಿವಮೊಗ್ಗ: ಸಂಕ್ರಾಂತಿ ಅಂಗವಾಗಿ ರಂಗಾಯಣ, ಶಿವಮೊಗ್ಗದ ರಂಗಬೆಳಕು (ರಿ), ಕಡೆಕೊಪ್ಪಲ ಪ್ರತಿಷ್ಠಾನ (ರಿ), ಜಂಟಿ ಸಹಯೋಗದಲ್ಲಿ ಜನೆವರಿ 14ರಿಂದ 19ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ.
6 ದಿನಗಳು ನಡೆಯಲಿರುವ
‘ರಂಗ ಸಂಕ್ರಾಂತಿ’ನಾಟಕೋತ್ಸವ-2026
ಜ.14 ರಂದು ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ|
ಜ.15 ರಂದು ಶಕೀಲ್ ಅಹ್ಮದ್ ನಿರ್ದೇಶನದ ಕೊಡಲ್ಲ ಅಂದ್ರೆ ಕೊಡಲ್ಲ|
ಜ. 16 ರಂದು ಪ್ರಕಾಶ ಗರುಡ ನಿರ್ದೇಶನದ ಕಂದಗಲ್ಲ ಭಾರತ|
ಜ. 17 ರಂದು ಜಿ.ಪರಶುರಾಮ್ ಸೂರನಕದ್ದೆ ನಿರ್ದೇಶನದ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ|
ಜ. 18 ರಂದು ಮಹಾತ್ಮರ ಬರುವಿಗಾಗಿ|
ಜ. 19 ರಂದು ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ಗುಲಾಮನ ಸ್ವಾತಂತ್ರ್ಯ ಯಾತ್ರೆ ಎಂಬ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ.
ರಂಗ ಸಂಕ್ರಾಂತಿ ನಾಟಕೋತ್ಸವದಲ್ಲಿ ಪ್ರತಿ ನಾಟಕಕ್ಕೆ 30 ರೂ. ನಿಗದಿಪಡಿಸಲಾಗಿದೆ.
ಕಲಾಭಿಮಾನಿಗಳು ಈ ನಾಟಕೋತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ ಅವರು ತಿಳಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







