CrimeDistrictShivamogga

ಶಿಕಾರಿಪುರ: ಅಕ್ರಮ ನಾಡ ಬಂದೂಕು ತಯಾರಿಕೆ ಕೇಂದ್ರದ ಮೇಲೆ ಪೊಲೀಸರ ದಾಳಿ| ಏಳು ನಾಡ ಬಂದೂಕುಗಳು ಪತ್ತೆ, ಓರ್ವನ ಬಂಧನ

ಅಕ್ರಮವಾಗಿ ನಾಡಬಂದೂಕು ತಯಾರಿಸುತ್ತಿದ್ದ ಆರೋಪಿ ಲಕ್ಷಣ ಬಿನ್‌ ಮಲ್ಲಪ್ಪ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನ ಮೇಲೆ ಗುನ್ನೆ ನಂ. 22/2026 ಕಲಂ 25(1)(ಎ) ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019 ರ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಶಿಕಾರಿಪುರ: ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸುವಲ್ಲಿ ನಗರದ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬುಧವಾರದಂದು ಸಂಜೆ ಭದ್ರಾಪುರ ಮೂರನೇ ಕ್ರಾಸಿನಲ್ಲಿರುವ ಹಳೆಯ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಡಲಾಗಿದ್ದ ಸಿಂಗಲ್‌ ಬ್ಯಾರಲ್‌ನ ಏಳು ನಾಡ ಬಂದೂಕುಗಳನ್ನು ಮತ್ತು ಬಂದೂಕುಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಪತ್ತೆಯಾಗಿದ್ದು, ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ನಾಡಬಂದೂಕು ತಯಾರಿಸುತ್ತಿದ್ದ ಆರೋಪಿ ಲಕ್ಷಣ ಬಿನ್‌ ಮಲ್ಲಪ್ಪ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನ ಮೇಲೆ ಗುನ್ನೆ ನಂ. 22/2026 ಕಲಂ 25(1)(ಎ) ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019 ರ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಘನ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಕಾರಿಪುರ ಸಿಪಿಐ ಸಂತೋಷ್‌.ಎಂ.ಪಾಟೀಲ್‌ ನೇತೃತ್ವದಲ್ಲಿ ಪಿಎಸ್‌ಐ ಶರತ್‌.ಹೆಚ್‌, ಠಾಣಾ ಸಿಬ್ಬಂದಿ ಕೊಟ್ರೇಶಪ್ಪ, ಪ್ರದೀಪ್‌.ಕೆ, ನಾಗರಾಜ್‌, ರವಿ ನಾಯ್ಕ್‌, ಹಾಗೂ ರವಿಕುಮಾರ್‌ ಅವರುಗಳು ಈ ಅಕ್ರಮ ಬಂದೂಕು ಪ್ರಕರಣವನ್ನು ಪತ್ತೆ ಹಚ್ಚಿದ ತನಿಖಾ ತಂಡದಲ್ಲಿ ಇದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಂಡದಲ್ಲಿದ್ದ ಎಲ್ಲ ಸಿಬ್ಬಂದಿಗೆ ಎಸ್‌ಪಿ ಬಿ.ನಿಖಿಲ್‌ ಅಭಿನಂದಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button