DistrictShivamogga

ಶಿವಮೊಗ್ಗ: ಮೋಜಣಿ ವೇಳೆ ಹಲ್ಲೆ ಆರೋಪ-ಐವರಿಗೆ ಎರಡು ವರುಷ ಜೈಲು|ಶಾದಿ ಮಹಲ್ ‌ಕಳ್ಳಿ ಅಂದರ್

ಶಿವಮೊಗ್ಗದ ಸೂಳೆಬೈಲಿನ ನಿವಾಸಿಯಾದ ರುಕ್ಸಾರ್ ಫಿರ್ಧೋಸ್ ಎಂಬ ಮಹಿಳೆ ಮದುವೆ ಮನೆಗಳಲ್ಲಿ ಕದ್ದಿದ್ದ 18ಲಕ್ಷ ಮೌಲ್ಯದ ಬರೋಬ್ಬರಿ 120 ಗ್ರಾಂ ತೂಕದ ಬಂಗಾರದ ಒಡವೆಗಳನ್ನ ಆರೋಪಿತ ಮಹಿಳೆಯಿಂದ ತುಂಗಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ: ತಮ್ಮದೇ ಜಾಗೆಯಲ್ಲಿ ಮೋಜಣಿ ಮಾಡಿಸುವ ಸಂದರ್ಭದಲ್ಲಿ ತಕರಾರು ತೆಗೆದು ಹಲ್ಲೆ ನಡೆಸಿದ್ದ ಆರೋಪಿತರ ಮೇಲೆ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಎರಡು ವರುಷ ಶಿಕ್ಷೆ ಹಾಗೂ ಒಂದು ಲಕ್ಷ ತೊಂಬತ್ತು ಸಾವಿರ ದಂಡ ವಿಧಿಸಿ‌ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ 03/06/2020 ರಂದು ಆರ್ಮುಗಂ ಎಂಬುವವರು ಭದ್ರಾವತಿ ತಾಲ್ಲೂಕ್ ಸುಣ್ಣದಹಳ್ಳಿ ಗ್ರಾಮದ ತಮ್ಮ ಜಾಗೆಯಲ್ಲಿ ಸರ್ವೇ ಮಾಡಿಸುತ್ತಿದ್ದ ಸಂದರ್ಭದಲ್ಲಿ ಆರೋಪಿತರಾದ ಎ1 ಜಗದೀಶ್ ಬಿನ್ ಮಂಜುನಾಥ್, 30 ವರ್ಷ, ಎ2 ಕಾಂತರಾಜ್ ಬಿನ್ ಮಂಜುನಾಥ್, 32 ವರ್ಷ, ಎ3 ನಾಗೇಶ್ ಬಿನ್ ಮಂಜುನಾಥ್, 30 ವರ್ಷ, ಎ4 ಮಂಜುನಾಥ್ ಬಿನ್ ಗಜಗುಂಡೇ ಗೌಡ್ರು, 60 ವರ್ಷ, ಎ5 ಪ್ರೇಮಾ ಕೋಂ ಮಂಜುನಾಥ್, 58 ವರ್ಷರವರು ಸೇರಿಕೊಂಡು ಆರ್ಮುಗಂ ರವರಿಗೆ ಇದು ನಮಗೆ ಸೇರಿದ ಜಾಗ ಇಲ್ಲಿ ಯಾಕೆ ಸರ್ವೇ ಮಾಡಿಸುತ್ತೀರಾ ಎಂದು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿತ್ತು. ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಮಂಗಳವಾರದಂದು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಮದುವೆ ಮನೆಗಳಲ್ಲಿ ಒಡವೆ ಕದ್ದು 4 ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಖ್ ಕಳ್ಳಿಯನ್ನ ಪತ್ತೆಹಚ್ಚಿ ಬಂಧಿಸಿ ವಶಪಡಿಸಿಕೊಳ್ಳುವಲ್ಲಿ ತುಂಗಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.


ಶಿವಮೊಗ್ಗದ ಸೂಳೆಬೈಲಿನ ನಿವಾಸಿಯಾದ ರುಕ್ಸಾರ್ ಫಿರ್ಧೋಸ್ ಎಂಬ ಮಹಿಳೆ ಮದುವೆ ಮನೆಗಳಲ್ಲಿ ಕದ್ದಿದ್ದ 18ಲಕ್ಷ ಮೌಲ್ಯದ ಬರೋಬ್ಬರಿ 120 ಗ್ರಾಂ ತೂಕದ ಬಂಗಾರದ ಒಡವೆಗಳನ್ನ ಆರೋಪಿತ ಮಹಿಳೆಯಿಂದ ತುಂಗಾನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರಿಗೆ ಸವಾಲಾಗಿದ್ದ ಶಾದಿಮಹಲಗಳ ಕಳ್ಳಿಯನ್ನ ಹಿಡಿಯಲು ಇನ್ಸ್‌ಪೆಕ್ಟರ್‌ ಕೆ.ಟಿ.ಗುರುರಾಜ್, ಪಿಎಸ್ಐ ಗಾದಿಲಿಂಗಪ್ಪ, ಸಿಬ್ಬಂದಿಗಳಾದ ಕಿರಣ್ ಮೋರೆ, ಶೋಭಾರಾಣಿ, ನಾಗಪ್ಪ ಅಡಿವೆಪ್ಪನವರ್, ಹರೀಶ್, ತಮ್ಮಣ್ಣ ಸೇರಿದಂತೆ ತನಿಖಾ ತಂಡ ರಚಿಸಲಾಗಿತ್ತು.

ಮದುವೆ‌ ಮನೆಗಳಲ್ಲಿನ ಒಡವೆ ಕಳವಿಗೆ ಸಂಭಂದಿಸಿದ 4 ಪ್ರಕರಣಗಳ ಖತರ್ನಾಖ್ ಕಳ್ಳಿಯ ಬೆನ್ನಟ್ಟಿ ಆಭರಣ ಕಳೆದುಕೊಂಡವರಿಗೆ ಮತ್ತೆ ಲಭಿಸುವಂತೆ ಮಾಡಲು ಶ್ರಮವಹಿಸಿದ ಪೊಲೀಸರ ತಂಡಕ್ಕೆ ಜಿಲ್ಲಾವರಿಷ್ಠಾಧಿಕಾರಿ ಬಿ ನಿಖಿಲ್ ಶ್ಲಾಘಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button