DistrictKarnatakaShivamogga

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವನ್ಯಜೀವಿ ಮಂಡಳಿ ತಜ್ಞರ ವಿರೋಧ|ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ದ ಈಶ್ವರಪ್ಪ ಕೆಂಡಮಂಡಲ|

ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲು ಜಿಲ್ಲಾಧಿಕಾರಿ ಪ್ರಭುಲಿಂಗ್‌ ಕವಳಿಕಟ್ಟಿ ಅವರ ಸಮ್ಮುಖದಲ್ಲಿ ಹೋರಾಟಗಾರರು ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳ ಸಭೆ ನಡೆಯಿತು.

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ತಜ್ಞರು ಅನುಮತಿ ನೀಡಬಾರದು ಎಂದು ನೀಡಿರುವ ವರದಿಯಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಕಳೆದ ತಿಂಗಳು ಶಿವಮೊಗ್ಗದಲ್ಲಿ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆ ನಂತರ ಸಾಧಕ ಬಾಧಕ ಅರಿಯಲು ಕೇಂದ್ರ ವನ್ಯಜೀವಿ ಮಂಡಳಿ ರಚಿಸಿದ್ದ ಮೂವರು ತಜ್ಞರ ಮಂಡಳಿ, ಇತ್ತೀಚೆಗೆ ಪಶ್ಚಿಮಘಟ್ಟ ಪ್ರದೇಶಕ್ಕೆ ಭೇಟಿ ನೀಡಿತ್ತು.

ನೈಸರ್ಗಿಕ ಸಂಪತ್ತನ್ನ ಹಾಳು ಮಾಡುವ ಈ ಯೋಜನೆಗೆ ಅನುಮತಿ ನೀಡಬಾರದೆಂದು ಕೇಂದ್ರ ಪರಿಸರ ಇಲಾಖೆಗೆ ವರದಿ ನೀಡಿರುವದನ್ನು ಪರಿಸರಕ್ಕಾಗಿ ನಾವು ಹೋರಾಟ ಸಮಿತಿಯ ಶ್ರೀಪತಿ ಅವರು ಶಿವಮೊಗ್ಗದಲ್ಲಿ ಬಹಿರಂಗಪಡಿಸಿದರು.

ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲು ಜಿಲ್ಲಾಧಿಕಾರಿ ಪ್ರಭುಲಿಂಗ್‌ ಕವಳಿಕಟ್ಟಿ ಅವರ ಸಮ್ಮುಖದಲ್ಲಿ ಹೋರಾಟಗಾರರು ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ “ಪರಿಸರಕ್ಕಾಗಿ ನಾವು” ಶ್ರೀಪತಿ ಅವರ ನೇತೃತ್ವದ ತಂಡದ ನಿಯೋಗ ಸೇರಿದಂತೆ ಮುಖಂಡ ಕೆ.ಇ.ಕಾಂತೇಶ್‌, ಪರಿಸರವಾದಿ ಬಿ.ಎಂ. ಕುಮಾರ್, ಅಶೋಕ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ತಿಂಗಳು ಹೋರಾಟ ನಡೆಸಿದ ಸಂದರ್ಭದಲ್ಲಿ ಶರಾವತಿ ಪಂಪ್ಡ ಸ್ಟೋರೆಜ್‌ ಯೋಜನೆಯ ಸಾಧಕ ಬಾಧಕಗಳ ಕುರಿತು ಹಲವಾರು ಸಂದೇಹಗಳ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಲಾಗಿತ್ತು.

ಈ ಬಗ್ಗೆ ಸೂಕ್ತ ಉತ್ತರ ನೀಡುವದಾಗಿ ಆಗ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ.

ಇದರಿಂದ ಕೆಲಕಾಲ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಧಿಕಾರಿಗಳು ಹೀಗೆ ಮುಂದುವರೆದರೇ, ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಿದ್ದೇವೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

ಶರಾವತಿ ಪಂಪ್ಡ್‌ ಜಲ ವಿದ್ಯುತ್‌ ಯೋಜನೆಯನ್ನು ಈಗಾಗಲೇ ಕೇಂದ್ರ ವನ್ಯಜೀವಿ ಮಂಡಳಿ ತಜ್ಞರು ನಕಾರಾತ್ಮಕ ವರದಿ ನೀಡಿರುವದರಿಂದ ಹಾಗೂ ಯೋಜನೆಗೆ ಸಂಬಂಧಿಸಿದ ಪ್ರಶ್ನಾವಳಿಗಳಿಗೆ ಕೆಪಿಟಿಸಿಎಲ್‌ ಅಧಿಕಾರಿಗಳು ಶೀಘ್ರ ಉತ್ತರ ನೀಡದಿದ್ದರೇ ಮತ್ತೆ ಉಗ್ರ ಹೋರಾಟ ಕೈಗೊಳ್ಳುವದಾಗಿ ಹೋರಾಟಗಾರರು ಇದೇ ವೇಳೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಭೇಟಿ ಮಾಡಿದ ನಿಯೋಗದಲ್ಲಿ ರಾಷ್ಟ್ರ ಭಕ್ತಭಳಗದ ಕೆಇ ಕಾಂತೇಶ್ ಪರಿಸವಾದಿ ಬಿಎಂ ಕುಮಾರ್ , ಅಶೋಕ್ ಸೇರಿದಂತೆ ಪರಿಸರವಾದಿ ಮುಖಂಡರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button