DistrictShivamogga

ಜನಪರ ನಾಯಕ ಕೆ.ಇ.ಕಾಂತೇಶ್‌ಗೆ ಹುಟ್ಟುಹಬ್ಬದ ಸಂಭ್ರಮ|ವಿವಿದೆಡೆ ಪೂಜೆ, ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ|ಬಿಗ್‌ಬಾಸ್‌ ಗಿಲ್ಲಿ, ಕಾಫಿನಾಡು ಚಂದು ಭಾಗಿ

ತಮ್ಮ ತಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರಂತೇ, ಎಲ್ಲ ವರ್ಗದ ಜನರನ್ನು ಗೌರವಿಸಿ, ಆದರಿಸುವ ಕೆ.ಇ.ಕಾಂತೇಶ್‌ ಅವರ ಮನೆಗೆ ಬೆಳಗ್ಗೆಯಿಂದಲೇ ಅವರ ಅಭಿಮಾನಿಗಳು ಹಾಗೂ ವಿವಿಧ ಮುಖಂಡರು ಶುಭಾಶಯ ಕೋರಲು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಶಿವಮೊಗ್ಗ: ಜನಪರ ಹೋರಾಟಗಾರ, ಯುವಕರ ಕಣ್ಮಣಿ ಹಾಗೂ ಭಾವಿ ಎಂಎಲ್‌ಎ ಎಂದೇ ಗುರುತಿಸಲ್ಪಡುತ್ತಿರುವ ಕೆ.ಇ.ಕಾಂತೇಶ್‌ ಅವರಿಗೆ ಭಾನುವಾರದಂದು ಹುಟ್ಟುಹಬ್ಬದ ಸಂಭ್ರಮ.

ಯುವ ನಾಯಕನ ಹುಟ್ಟುಹಬ್ಬ ಸಂಭ್ರಮವನ್ನು ಅದ್ದೂರಿಯಿಂದ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ತಮ್ಮ ತಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರಂತೇ, ಎಲ್ಲ ವರ್ಗದ ಜನರನ್ನು ಗೌರವಿಸಿ, ಆದರಿಸುವ ಕೆ.ಇ.ಕಾಂತೇಶ್‌ ಅವರ ಮನೆಗೆ ಬೆಳಗ್ಗೆಯಿಂದಲೇ ಅವರ ಅಭಿಮಾನಿಗಳು ಹಾಗೂ ವಿವಿಧ ಮುಖಂಡರು ಶುಭಾಶಯ ಕೋರಲು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಕಾಂತೇಶ್‌ ಅವರ ಅಭಿಮಾನಿಗಳ ಬಳಗವು ಭಾನುವಾರ ಬೆಳಗ್ಗೆಯಿಂದಲೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ವಿನೋಬನಗರದ ಶಿವಾಲಯದಲ್ಲಿ 8ಗಂಟೆಗೆ ಗೋಪೂಜೆ ನಡೆದಿದೆ. ಬಳಿಕ ಬೆಕ್ಕಿನ ಕಲ್ಮಠದಲ್ಲಿ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಕೆ ನಂತರ, ರಕ್ತದಾನ ಶಿಬಿರ ಹಾಗೂ ಆರೋಗ್ಯ ಶಿಬಿರ ನಡೆಯಲಿದೆ.

ಭಾನುವಾರ ಸಂಜೆ ಶಿವಮೊಗ್ಗದ ಶುಭಮಂಗಳ ಸಮುದಾಯಭವನದಲ್ಲಿ ಯುವೋತ್ಸಾಹ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಗ್‌ಬಾಸ್‌ನ ಗಿಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶನಿವಾರದಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿ ಚಾಲನೆ ನೀಡಿದ್ದ ಕ್ರಿಕೇಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಹಾಗೂ ಬಹುಮಾನ ಪ್ರಧಾನ ಮಾಡಲಿದ್ದಾರೆ.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 18 ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು. ಗಿಲ್ಲಿಗೆ ಸಾಥ್‌ ನೀಡಲು ಕಾಫಿನಾಡು ಚಂದು ಸಹ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶನಿವಾರದಂದು ನಡೆದ ಕ್ರಿಕೆಟ್‌ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಕ್ರೀಡಾಸಕ್ತರು ಹಾಗೂ ಯುವಕರ ಬೆಂಬಲವೇ ಕಾರಣ ಎಂದು ಯುವ ಮುಖಂಡ ಕೆ.ಇ.ಕಾಂತೇಶ್‌ ಹೇಳಿದರು. ತಮ್ಮ ಮೇಲಿನ ಅಭಿಮಾನದಿಂದ ಯುವಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿರುವುದು ತಮಗೆ ಖುಷಿ ತಂದಿದೆ ಎಂದರು.

ಯಾರೇ ಗೆದ್ದರೂ ಕಪ್ ನಮ್ಮದೇ. ಶಿವಮೊಗ್ಗ ಧಾರ್ಮಿಕ, ಸಾಂಸ್ಕತಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಯಾವಾಗಲೂ ಮುಂದಿದೆ. ನಿಮ್ಮೆಲ್ಲರ ಪ್ರೀತಿ ಸದಾ ಇರಲಿ ಎಂದ ಅವರು, ನಾನು ನಿಮ್ಮಲ್ಲಿ ಒಬ್ಬನಾಗಿ ಸದಾ ಜೊತೆಯಲ್ಲಿರುತ್ತೇನೆಂದು ಭರವಸೆ ನೀಡಿದರು.

Follow Us

Leave a Reply

Your email address will not be published. Required fields are marked *

Back to top button