DistrictKarnatakaShivamogga

ಕೆ.ಇ.ಕಾಂತೇಶ್‌ ಜನ್ಮದಿನ ಅದ್ದೂರಿ ಆಚರಣೆ|ಸಾವಿರಾರು ಅಭಿಮಾನಿಗಳಿಂದ ಶುಭಹಾರೈಕೆ|ಜನಸೇವೆ ಮಾಡಲು ಪುತ್ರನಿಗೆ ಆಶೀರ್ವದಿಸಿ-ಕೆ.ಎಸ್‌.ಈಶ್ವರಪ್ಪ

ಕೆ.ಇ.ಕಾಂತೇಶ್ ಅವರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಬಿಗ್‌ಬಾಸ್‌ ವಿಜೇತ ಗಿಲ್ಲಿ, ಕಾಂತೇಶ್ ಅವರು ಸರಳ ವ್ಯಕ್ತಿತ್ವದ ಜನಪರ ನಾಯಕನಾಗಿದ್ದು ಮುಂದಿನ ಎಂಎಲ್ಎ ಪಕ್ಕಾ ಎಂದು ಹಾರೈಸಿದರು.

ಶಿವಮೊಗ್ಗ: ಯುವಕರ ಆಶಾಕಿರಣ, ಮುಖಂಡ ಕೆ.ಇ.ಕಾಂತೇಶ್ ಅವರ ಜನ್ಮದಿನ ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ಬೆಳಗ್ಗೆಯಿಂದಲೇ ಅಭಿಮಾನಿಗಳ ಮಹಾಪೂರ ಕಾಂತೇಶ್‌ ಅವರ ಮನೆಗೆ ಆಗಮಿಸಿ ಶುಭ ಕೋರಿದರು.

ಕಾಂತೇಶ್‌ ಅವರ ಅಭಿಮಾನಿಗಳ ಸಂಘದ ಸದಸ್ಯರು ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ತಮ್ಮ ನಾಯಕನಿಗೆ ಮೇರುತ್ತೆರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸಿದರು.

ಕಾಂತೇಶ್‌ ಅವರಿಗೆ ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಹಾಗೂ ನಾದಾನಂದ ಶ್ರೀಗಳು ಆಶೀರ್ವಚನ ನೀಡಿ ಹಾರೈಸಿದರು.

ಅಭಿಮಾನಿಗಳ ಪಾಲಿಗೆ ಭಾವಿ ಶಾಸಕ ಎಂದೇ ಗುರುತಿಸಲ್ಪಡುವ ಕೆ.ಇ.ಕಾಂತೇಶ್‌ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಅದ್ದೂರಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಖಾಸಗಿ ಸಮುದಾಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಹಾಗೂ ನಾದಾನಂದ ಶ್ರೀಗಳು, ಬಿಗ್‌ಬಾಸ್‌ ವಿಜೇತ ಗಿಲ್ಲಿ, ಕಾಫಿನಾಡು ಚಂದು, ಮುಖಂಡ ಇ.ವಿಶ್ವಾಸ್‌ ಸೇರಿದಂತೇ ಹಲವು ಮುಖಂಡರು ಭಾಗವಹಿಸಿದ್ದರು.

ಪುತ್ರನ ಜನ್ಮದಿನದಂದು ಶುಭಕೋರಿ ಕೆ.ಎಸ್‌.ಈಶ್ವರಪ್ಪ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಚಿತ್ರ
ಕೆ.ಎಸ್‌.ಈಶ್ವರಪ್ಪನವರಿಗೆ ಕೇಕ್‌ ತಿನ್ನಿಸುತ್ತಿರುವ ಕೆ.ಇ.ಕಾಂತೇಶ್

ಭವಿಷ್ಯದಲ್ಲಿ ಸಾಫ್ಟವೇರ್‌ ಕಂಪನಿಗಳು ಶಿವಮೊಗ್ಗಕ್ಕೆ ಬರುವಂತೆ ಮಾಡುವುದು ತಮ್ಮ ಗುರಿಯಾಗಿದೆ ಎಂದು ಕೆ.ಇ.ಕಾಂತೇಶ್‌ ಹೇಳಿದ್ದಾರೆ.

ಯುವ ಮುಖಂಡ ಕಾಂತೇಶ್‌ ಅವರಿಗೆ ಅಭಿಮಾನಿಗಳು ಹೂಮಾಲೆ ಹಾಕಿ ಶುಭ ಹಾರೈಸಿದರು.

ಕೆಲಸ ಅರಸಿ ದೂರದ ಊರು ದೇಶಗಳಿಗೆ ಹೋಗಿ ತಂದೆ ತಾಯಿಯಿಂದ ದೂರ ಉಳಿದ ಮಕ್ಕಳು ಮರಳಿ ಶಿವಮೊಗ್ಗದಲ್ಲೇ ತಂದೆತಾಯಿಯೊಟ್ಟಿಗೆ ಇರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.

ಕಾಂತೇಶ್‌ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಅದಕ್ಕಾಗಿ ದೊಡ್ಡ ಕೈಗಾರಿಕೆಗಳು, ಸಾಫ್ಟವೇರ್ ಕಂಪನಿಗಳು ಶಿವಮೊಗ್ಗದಲ್ಲಿ ಬರುವಂತೆ ಸತತ ಪ್ರಯತ್ನ ಮಾಡುವೆ ಎಂದು ತಿಳಿಸಿದರು.

ಕೆ.ಇ.ಕಾಂತೇಶ್ ಅವರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಬಿಗ್‌ಬಾಸ್‌ ವಿಜೇತ ಗಿಲ್ಲಿ, ಕಾಂತೇಶ್ ಅವರು ಸರಳ ವ್ಯಕ್ತಿತ್ವದ ಜನಪರ ನಾಯಕನಾಗಿದ್ದು ಮುಂದಿನ ಎಂಎಲ್ಎ ಪಕ್ಕಾ ಎಂದು ಹಾರೈಸಿದರು.

ಗಂಡು ಮಕ್ಕಳ ಕುರಿತ ಫೇಮಸ್ ಡೈಲಾಗ್ ಹೇಳಿ ಅವರು ರಂಜಿಸಿದರು. ಇನ್ನು ಕಾಫಿನಾಡು ಚಂದು ತಮ್ಮದೇ ಶೈಲಿಯಲ್ಲಿ ಮನೋರಂಜನೆ ನೀಡಿದರು. ಇದೇ ವೇಳೆ ಸ್ಟೆಪ್ ಹೋಲ್ಡರ್ಸ್ ತಂಡದ ಮಕ್ಕಳು ‌ನೃತ್ಯಮಾಡಿದ್ದು ವಿಶೇಷವಾಗಿತ್ತು.

ಇದೇ ವೇಳೆ ಯುವ ಮುಖಂಡ ಕೆ.ಇ.ಕಾಂತೇಶ್ ಅವರ ಅಭಿಮಾನಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಸೇರಿ ಕಾಂತೇಶ್‌ ಅವರಿಂದ ಬೃಹತ್ ಕೇಕ್ ಕಟ್ ಮಾಡಿಸುವ ಮೂಲಕ ಶುಭಕೋರಿದರು.

Follow Us

Leave a Reply

Your email address will not be published. Required fields are marked *

Back to top button