ಶಿವಮೊಗ್ಗದಲ್ಲಿ ರಾಮನವಮಿ ಸಂಭ್ರಮ|ಅಕ್ಕಮಹಾದೇವಿ ಸರ್ಕಲನಲ್ಲಿ ರಾಮೋತ್ಸವ|ಪಾನಕ ಕೋಸಂಬರಿ ವಿತರಿಸಿದ ಶಾಸಕ ಚೆನ್ನಬಸಪ್ಪ
ಜಯನಗರದ ಸೀತಾರಾಮ, ಕೋಟೆ ಸೀತಾರಾಮಾಂಜನೇಯ ದೇವಾಲಯಗಳಲ್ಲಿ ವಾರದಿಂದಲೇ ರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸೀತಾರಾಮ ಕಲ್ಯಾಣೋತ್ಸವ, ಲಕ್ಷ ವಿಷ್ಣುಸಹಸ್ತ್ರನಾಮ ಪಾರಾಯಣ ಆಯೋಜಿಸಲಾಗಿತ್ತು.

ಶಿವಮೊಗ್ಗ: ರಾಮನವಮಿ ಪ್ರಯುಕ್ತ ಗುರುವಾರದಂದು ನಗರದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು. ಸೀತಾರಾಮ, ಆಂಜನೇಯನ ದೇಗುಲಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಮನಾಮ, ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಕ್ಕಮಹಾದೇವಿ ಸರ್ಕಲನಲ್ಲಿ ರಾಮೋತ್ಸವ!
ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಆಯೋಜಿಸಿದ್ದ ರಾಮೋತ್ಸವ ವಿಶೇಷವಾಗಿತ್ತು. ಅಕ್ಕಮಹಾದೇವಿ ವೃತ್ತದಲ್ಲಿ ತಲೆ ಎತ್ತಿದ್ದ ಬೃಹತ್ ಕೋದಂಡರಾಮ ವಿಗ್ರಹ ಪ್ರಮುಖ ಆಕರ್ಷಣೆಯಾಗಿತ್ತು. ಮಂಟಪ ನಿರ್ಮಿಸಿ ಶ್ರಿರಾಮನ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ ರಾಮೋತ್ಸವ ಆಚರಿಸಲಾಯಿತು.

ರಾಮೋತ್ಸವದಲ್ಲಿ ಶಾಸಕ ಚೆನ್ನಬಸಪ್ಪ, ಡಾ ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿ ಸಾರ್ವಜನಿಕರಿಗೆ ಪಾನಕ ಕೋಸಂಬರಿ ವಿತರಿಸಿ ಸೇವೆ ಸಲ್ಲಿಸಿದರು.

ಬಳಿಕ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಮಾಜಿ ಜಿಪಂ ಸದಸ್ಯ,ಕೆಇ ಕಾಂತೇಶ್, ಸೇರಿದಂತೆ ಹಲವು ಮುಖಂಡರು ರಾಮೋತ್ಸವದಲ್ಲಿ ಪಾಲ್ಗೊಂಡು ರಾಮನವಮಿ ಆಚರಿಸಿದರು. ರಾಮನವಮಿ ಅಂಗವಾಗಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.

ವಿಶ್ವಹಿಂದೂ ಪರಿಷತ್ ಜಜಿಲ್ಲಾಧ್ಯಕ್ಷ ವಾಸುದೇವ್, ಮುಖಂಡ ರಮೇಶ್ ಬಾಬು , ಆನಂದರಾವ್ ರಾಜೇಶ್ ಗೌಡ , ಸುರೇಶ್ ಬಾಬು ,ಪುಟ್ಟಣ್ಣ, ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ನಗರದ ವಿವಿದೆಡೆ ರಾಮನವಮಿ ಸಂಭ್ರಮ!

ಇನ್ನೂ ಜಯನಗರದ ಸೀತಾರಾಮ, ಕೋಟೆ ಸೀತಾರಾಮಾಂಜನೇಯ ದೇವಾಲಯಗಳಲ್ಲಿ ವಾರದಿಂದಲೇ ರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸೀತಾರಾಮ ಕಲ್ಯಾಣೋತ್ಸವ, ಲಕ್ಷ ವಿಷ್ಣುಸಹಸ್ತ್ರನಾಮ ಪಾರಾಯಣ ಆಯೋಜಿಸಲಾಗಿತ್ತು.

ವಿನೋಬನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಅಭಿಷೇಕ, ಗಣಪತಿ, ಹೋಮ ತಾರಕ ಹೋಮ, ಮಾರುತಿ ಹೋಮ ,ಉಯ್ಯಾಲೆ ಸೇವೆ, ಪ್ರಸಾದ ವಿನಿಯೋಗ
ಕಾರ್ಯಕ್ರಮ ನಡೆದವು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







