CrimeDistrictShivamogga

ಯುವಕನ ಆತ್ಮಹತ್ಯೆಗೆ ಕಾರಣವಾಗಿದ್ದ ಮೊಬೈಲ್‌ ಮೆಸೆಜ್ ಪ್ರಕರಣ|ಯುವತಿಯ ಕುಟುಂಬದ ಇಬ್ಬರಿಗೆ 10 ವರುಷ ಕಠಿಣ ಶಿಕ್ಷೆ|ಭದ್ರಾವತಿ ತಾಲೂಕಿನಲ್ಲಿ ನಡೆದಿದ್ದ ಘಟನೆ

ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದ ಎಂದು ಸಿಟ್ಟಿಗೆದ್ದಿದ್ದ ಯುವತಿಯ ಕುಟುಂಬದವರು ಕಳೆದ 2021 ರ ಮೇ 5 ರಂದು ಆವಾಚ್ಯ ಶಬ್ದಗಳಿಂದ ಬೈದು, ಸಣ್ಣ ಪ್ರಮಾಣದಲ್ಲಿ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು.

ಶಿವಮೊಗ್ಗ: ಯುವತಿಗೆ ಮೊಬೈಲ್‌ನಲ್ಲಿ ಮೆಸೆಜ್‌ ಮಾಡುತ್ತಿದ್ದ ವ್ಯಕ್ತಿಯ ಹಲ್ಲೆ ಮಾಡಿ, ಆತನ ಆತ್ಮಹತ್ಯೆಗೆ ಕಾರಣರಾದ ಇಬ್ಬರು ಆರೋಪಿಗಳಿಗೆ 10 ವರುಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ, ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ. ಶಿಕ್ಷೆಯ ಜೊತೆಗೆ ಎರಡು ಲಕ್ಷ ಇಪ್ಪತ್ತುಮೂರು ಸಾವಿರೂ. ಹಣವನ್ನು ದಂಡ ವಿಧಿಸಲಾಗಿದೆ.

ಭದ್ರಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ 22 ವರ್ಷದ ನವೀನಕುಮಾರ್ ಎಂಬಾತ ಅದೇ ಗ್ರಾಮದ ಯುವತಿಯೋರ್ವಳ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದ ಎಂದು ಸಿಟ್ಟಿಗೆದ್ದಿದ್ದ ಯುವತಿಯ ಕುಟುಂಬದವರು ಕಳೆದ 2021 ರ ಮೇ 5 ರಂದು ಆವಾಚ್ಯ ಶಬ್ದಗಳಿಂದ ಬೈದು, ಸಣ್ಣ ಪ್ರಮಾಣದಲ್ಲಿ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು.

ಮಲ್ಲಾಪುರ ಗ್ರಾಮದವರೇ ಆದ ನಾಗರಾಜ್ ರಾವ್ ಮತ್ತು ಮಂಜೋಜಿ ರಾವ್ ಎಂಬುವವರು ನೀನು ಊರು ಬಿಟ್ಟು ಹೋಗಬೇಕು ಇಲ್ಲವೇ ಎಲ್ಲಾದರೂ ಹೋಗಿ ಸಾಯಿ ಎಂದು ಹೀಯಾಳಿಸಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.

ಯುವತಿಯ ಕುಟುಂಬದವರು ತನಗೆ ಅವಮಾನ ಮಾಡಿದರು ಎಂದು ಮನಸ್ಸಿಗೆ ಹಚ್ಚಿಕೊಂಡಿದ್ದ ಯುವಕ ನವೀನ್‌ಕುಮಾರ್‌, 2021 ರ ಮೇ 5 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳಿಕ ಈ ಕುರಿತು ಹೊಳೆಹೊನ್ನುರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಆಗಿನ ತನಿಖಾಧಿಕಾರಿ ಪಿಎಸ್‌ಐ ಮೋಹನ್ ಜಿ ಪಿಎಸ್ಐ ಅವರು, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ ಕಲಂ 341,504,323,306 ಸಹಿತ 34 ಐಪಿಸಿ ರೀತ್ಯಾ 10 ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು 2,23,000/- ರೂ ದಂಡವನ್ನು ವಿಧಿಸಿ, ಏಪ್ರಿಲ್‌ 01-2026 ರಂದು ಆದೇಶ ಹೊರಡಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button