ಎಸ್.ಎಸ್.ಎಲ್.ಸಿ ತೃತೀಯ ಭಾಷೆಗೆ ಗ್ರೇಡಿಂಗ್ ಪದ್ದತಿ|ಸಚಿವ ಮಧು ಬಂಗಾರಪ್ಪಗೆ ಶಿಕ್ಷಣವೇ ಇಲ್ಲ|ಸಿಎಂ ಮಧ್ಯ ಪ್ರವೇಶಕ್ಕೆ ಶೋಭಾ ಕರಂದ್ಲಾಜೆ ಒತ್ತಾಯ
ಕಲಿಯುವ ವಯಸ್ಸಿನಲ್ಲಿ ಮಕ್ಕಳು ಮಣ್ಣಿನ ಮೂರ್ತಿಗಳಾಗಿರುತ್ತಾರೆ. ಯಾವ ಭಾಷೆ ಕಲಿಸಿದರೂ ಕಲಿಯುವ ಶಕ್ತಿ ಇರುತ್ತದೆ. ಶಿಕ್ಷಣವೇ ಇಲ್ಲದ ಸಚಿವರಾಗಿರುವುದರಿಂದ ಇಂತಹ ಬೇಜವಾಬ್ದಾರಿ ತೀರ್ಮಾನ ಹೊರಬಿದ್ದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳನ್ನು ತೆಗೆದು ಗ್ರೇಡಿಂಗ್ ಪದ್ದತಿ ಜಾರಿಗೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ದ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕುರಿತು “ನ್ಯೂಇಂಡಿಯಾ ಕನ್ನಡ” ಡಿಜಿಟಲ್ ಪತ್ರಿಕೆಯು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದೆ.
ತೃತೀಯ ಭಾಷೆಗಳ ಮೇಲಿನ ಅಂಕಗಳನ್ನು ಕೈಬಿಟ್ಟಿದ್ದರಿಂದ ಆಗುವ ಪರಿಣಾಮಗಳೇನು? ವಿದ್ಯಾರ್ಥಿಗಳಿಗೆ ಇದರಿಂದಾಗುವ ಶೈಕ್ಷಣಿಕ ತೊಂದರೆಗಳೇನು? ಎಂಬುದರ ಕುರಿತು ಹಲವು ಶಿಕ್ಷಣ ತಜ್ಞರು ಹಾಗೂ ರಾಜಕೀಯ ನಾಯಕರು ಮತ್ತು ಸಾರ್ವಜನಿಕರು ತಮ್ಮ ಅನಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ತ್ರಿಭಾಷಾ ನೀತಿ ಗೊಂದಲ !
ಶೋಭಾ ಕರಂದ್ಲಾಜೆ ಆರೋಪ|
ಹಿಂದಿ ಕಲಿಯುವದರಿಂದ ಏನು? ಸಮಸ್ಯೆಯಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ತ್ರಿಭಾಷಾ ನೀತಿ ಬಗ್ಗೆ ಅನವ್ಯಶಕವಾಗಿ ರಾಜ್ಯ ಸರ್ಕಾರವು ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಕಳೆದ ಒಂದು ವರುಷದಿಂದ ಹಿಂದಿ ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾದ ಕೂಡಲೇ ಗ್ರೇಡಿಂಗ್ ಪದ್ದತಿ ಜಾರಿಗೆ ತರುವದರ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.
ಹಿಂದಿ ವಿಷಯವೇ ನಮಗೆ ಬೇಡ ಎಂದು ಯಾವ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಇವರಿಗೆ ಹೇಳಲು ಬಂದಿದ್ದರಾ? ಎಂದು ಆಕ್ರೋಶ ವ್ಯಕ್ತಪಡಿದರು.

ಕಲಿಯುವ ವಯಸ್ಸಿನಲ್ಲಿ ಮಕ್ಕಳು ಮಣ್ಣಿನ ಮೂರ್ತಿಗಳಾಗಿರುತ್ತಾರೆ. ಯಾವ ಭಾಷೆ ಕಲಿಸಿದರೂ ಕಲಿಯುವ ಶಕ್ತಿ ಇರುತ್ತದೆ. ಶಿಕ್ಷಣವೇ ಇಲ್ಲದ ಸಚಿವರಾಗಿರುವುದರಿಂದ ಇಂತಹ ಬೇಜವಾಬ್ದಾರಿ ತೀರ್ಮಾನ ಹೊರಬಿದ್ದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಾದರೂ ಈ ಕುರಿತು ಯೋಚಿಸಬೇಕಿತ್ತು ಎಂಬುದು ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರ ಅಭಿಪ್ರಾಯ.
ವರದಿ: ಸೌಮ್ಯ ರೆಡ್ಡಿ
ಎಜ್ಯುಕೇಶನ್ ಬ್ಯುರೋ
ನ್ಯೂಇಂಡಿಯಾ ಕನ್ನಡ.







