EducationKarnatakaShivamogga

ಪೋದಾರ್ ಶಾಲಾ ವಿದ್ಯಾರ್ಥಿಗಳ ಹೊಸ ಸಾಧನೆ| ಹೈಸ್ಕೂಲ್ ದಾಟದ ಮಕ್ಕಳಿಂದ ಲೇಖನಗಳ ಸಮರ್ಪಣೆ|ಜುಲೈ 16ಕ್ಕೆ “ಸವಿಯೋಲೆ” ಕಿರುಹೊತ್ತಿಗೆ ಬಿಡುಗಡೆ

"ಸವಿಯೋಲೆ" ಪೋದಾರ್ ಶಾಲೆಯ 8, 9, ನೇ ತರಗತಿಯ 58 ವಿದ್ಯಾರ್ಥಿಗಳೇ ಬರೆದ ಲೇಖನಗಳ ಸಂಗ್ರಹ ರೂಪ. ತಂದೆ ತಾಯಿ , ಮನಸ್ಸು, ವೈದ್ಯರು, ಪತ್ರಕರ್ತರು, ಅವಿಭಕ್ತ ಕುಟುಂಬ ಕುರಿತು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಶಿಷ್ಠವಾಗಿ ಕೃತಜ್ಞತೆಯನ್ನು ಲೇಖನದ ಮೂಲಕ ತಿಳಿಸಿದ್ದಾರೆ.

ಶಿವಮೊಗ್ಗ: ಮುಗ್ದ ಮನಸಿನ ಮಕ್ಕಳಿಂದ ಮನಸಾರೆ ಧನ್ಯವಾದ ತಿಳಿಸುವ ಚಟುವಟಿಕೆ ನೀಡುವ ಮೂಲಕ ಮಕ್ಕಳಿಂದ ಬರೆಸಿ, ಲೇಖನಗಳನ್ನು ಸಂಗ್ರಹಿಸಿರುವ ಪೋದಾರ್ ಇಂಟರ್ ನ್ಯಾಶನಲ್ ಶಾಲೆಯು ಅದನ್ನು ” ಸವಿಯೋಲೆ ” ಎಂಬ ಹೆಸರಿನಲ್ಲಿ ಕಿರು ಹೊತ್ತಿಗೆಯನ್ನು ಪ್ರಕಟಿಸಲು ಮುಂದಾಗಿದೆ.

ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿರುವ ಪೋದಾರ್ ಇಂಟರ್ ನ್ಯಾಶನಲ್ ಶಾಲೆ ವತಿಯಿಂದ ಜುಲೈ 16 ರಂದು ಈ ಕಿರುಹೊತ್ತಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಮಂಗಳವಾರ ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎನ್.ಆರ್.ಪುರ ರಸ್ತೆಯ ವಡ್ಡಿನಕೊಪ್ಪದಲ್ಲಿರುವ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು, ಪೋಷಕರು, ಪುಸ್ತಕ ಬಿಡುಗಡೆಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ಹಂಚಿಕೊಂಡರು.

“ಸವಿಯೋಲೆ” ಪೋದಾರ್ ಶಾಲೆಯ 8, 9, ನೇ ತರಗತಿಯ 58 ವಿದ್ಯಾರ್ಥಿಗಳೇ ಬರೆದ ಲೇಖನಗಳ ಸಂಗ್ರಹ ರೂಪ. ತಂದೆ ತಾಯಿ , ಮನಸ್ಸು, ವೈದ್ಯರು, ಪತ್ರಕರ್ತರು, ಅವಿಭಕ್ತ ಕುಟುಂಬ ಕುರಿತು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಶಿಷ್ಠವಾಗಿ ಕೃತಜ್ಞತೆಯನ್ನು ಲೇಖನದ ಮೂಲಕ ತಿಳಿಸಿದ್ದಾರೆ.

ಪ್ರಾಂಶುಪಾಲ ಸುಕೇಶ್ ಶೇರಿಗಾರ್

150 ಪುಟವುಳ್ಳ ಪುಸ್ತಕವನ್ನ ಯಾಜಿ ಪ್ರಕಾಶನ ಒಂದು ಸಾವಿರ ಪುಸ್ತಕ ಪ್ರಕಟಿಸಿದೆ.

ಮಕ್ಕಳ ಮನದಾಳದ ಮಾತುಗಳ ಅಕ್ಷರರೂಪವನ್ನು ತಿದ್ದಿ ತೀಡುವ ಕೆಲಸವನ್ನು ಕನ್ನಡ ಸಂಸ್ಕೃತ ,ಶಿಕ್ಷಕ ಶ್ರೀಧರ್ ಭಟ್ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ಪುಸ್ತಕ ರೂಪದಲ್ಲಿ ಹೊರಬರಲು ಸಜ್ಜಾಗಿದೆ.

ಇನ್ನು ಲೇಖಕಿ ವಿಜಯ ಶ್ರೀಧರ್ ಅವರು ಮುನ್ನುಡಿ ಬರೆದಿದ್ದು, ಬೆನ್ನುಡಿಯನ್ನು ಸಮನ್ವಯ ಕಾಶಿ ಬರೆದಿದ್ದಾರೆ ಎಂದು ಶಿಕ್ಷಕ ನಾಗರಾಜ್ ವಿವರಿಸಿದರು.

ಶಿವಮೊಗ್ಗದ ಖ್ಯಾತ ಲೇಖಕಿ ವಿಜಯಾ ಶ್ರೀಧರ್ ಹಾಗೂ ಚಿಂತಕ ಸಮನ್ವಯ ಕಾಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿನಿ ಸ್ಮಯ

ವಿದ್ಯಾರ್ಥಿನಿ, ಸ್ಮಯ ಪತ್ರಕರ್ತರಿಗೆ ಥ್ಯಾಂಕ್ಸ್ ಹೇಳಿದ ಲೇಖನ ಬರೆದಿದ್ದರೆ, ಪ್ರತೀಕ್ಷಾ ಅವಿಭಕ್ತ ಕುಟುಂಬದ ಮಹತ್ವ, ಅಮೂಲ್ಯ ತಂದೆ ತಾಯಿಗೆ ಧನ್ಯವಾದ ಅರ್ಪಿಸಿದ್ದರೆ, ಕೀರ್ತಿ ಮನಸ್ಸಿಗೊಂದು ಥ್ಯಾಂಕ್ಸ್ ಹೇಳಿ ಲೇಖನ ಮಂಡಿಸಿದ್ದಾರೆ.

ಪೋಷಕ ನಾಗರಾಜ್ ಮಾತನಾಡಿ, ಮಕ್ಕಳು ಮೊಬೈಲ್ ಗೀಳು ಹೆಚ್ಚಾಗಿರುವ ಸಂದರ್ಭದಲ್ಲಿ ಬರವಣಿಗೆ ಕೌಶಲ್ಯ, ಸೃಜನಶೀಲತೆಗೆ ಒತ್ತು ನೀಡಿ ಮಕ್ಕಳ ಮನಸಿನ ಭಾವನೆಗಳನ್ನ ಅಕ್ಷರರೂಪದಲ್ಲಿ ವ್ಯಕ್ತಪಡಿಸಲು ಪೋದಾರ್ ಶಾಲೆ ವೇದಿಕೆ ಒದಗಿಸಿ ಮಾದರಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಸಾನ್ವಿ ಯು
ವಿದ್ಯಾರ್ಥಿನಿ ಸಾನ್ವಿ ಯು

ಪೋದಾರ್ ಶಾಲೆಯ ವಿಭಿನ್ನ ಪ್ರಯತ್ನ ಇತರ ಶಾಲೆಗಳಿಗೆ ಪ್ರೇರಣೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಪೋದಾರ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಇಡೀ ಪತ್ರಿಕಾಗೋಷ್ಠಿ ನಡೆಸಿಕೊಟ್ಟಿದ್ದು ವಿಶೇಷ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಸುಕೇಶ್ ಶೇರಿಗಾರ್, ಶಿಕ್ಷಕರಾದ ಶ್ರೀಧರ್, ಶ್ರೀಪತಿ, ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button