ವೇತನಾನುದಾನ ಒದಗಿಸಿ, ಕನ್ನಡ ಮಾಧ್ಯಮ ಶಾಲೆ ಉಳಿಸಿ|ಅನುದಾನರಹಿತ ಶಾಲಾ ಕಾಲೇಜು ಶಿಕ್ಷಕರ ಅಳಲು|ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ
ಸತತ 29 ವರ್ಷಗಳಿಂದ ವೇತನಾನುದಾನಕ್ಕಾಗಿ ನಿರಂತರ ನ್ಯಾಯಯುತ ಹೋರಾಟ ನಡೆಯುತ್ತಿದೆ. 1995 ರಿಂದ ಆರಂಭವಾದ ಕನ್ನಡ ಮಾಧ್ಯಮದ ಅನುದಾನರಹಿತ ಶಾಲಾಕಾಲೇಜುಗಳನ್ನ ಅನುದಾನಕ್ಕೆ ಒಳಪಡಿಸಬೇಕು ಎಂಬುದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುಚ್ಚುವ ಸ್ಥಿತಿಯಲ್ಲಿರುವ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ನೀಡಬೇಕಾದ ವೇತನಾನುದಾನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟ ಅಹೋರಾತ್ರಿ ಪ್ರತಿಭಟನೆ ಕೈಗೊಂಡಿದೆ.
ಬುಧವಾರದಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ನೂರಾರು ಮಂದಿ ಶಾಲಾ ಕಾಲೇಜುಗಳ ಶಿಕ್ಷಕರು ಬಿರು ಬಿಸಿಲಲ್ಲಿ ಕುಳಿತು ಕನ್ನಡ ಶಾಲೆ ಉಳಿವಿಗಾಗಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ರಾಜ್ಯದ ಎಲ್ಲ ಭಾಗದಲ್ಲೂ ಸರ್ಕಾರವೇ ಶಾಲಾ ಕಾಲೇಜು ತೆರೆದು ಶಿಕ್ಷಣ ನೀಡಲು ಸಾಧ್ಯವಿಲ್ಲ ಹೀಗಾಗಿ ಖಾಸಗಿಯವರು ಮತ್ತು ಮಠಗಳು ಶಾಲಾ ಕಾಲೇಜು ತರೆದು ಶಿಕ್ಷಣ ನೀಡುವ ಮೂಲಕ ಸರ್ಕಾರದ ಹೊರೆ ಕಡಿಮೆ ಮಾಡಿವೆ.
ಸ್ವತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ವೇತನಾನುದಾನ ನೀಡಿದೆ. ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ ಪರಿಶಿಷ್ಟ ಜಾತಿ ಪಂಗಡಕ್ಕೆ ಸೀಮಿತವಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸತತ 29 ವರ್ಷಗಳಿಂದ ವೇತನಾನುದಾನಕ್ಕಾಗಿ ನಿರಂತರ ನ್ಯಾಯಯುತ ಹೋರಾಟ ನಡೆಯುತ್ತಿದೆ. 1995 ರಿಂದ ಆರಂಭವಾದ ಕನ್ನಡ ಮಾಧ್ಯಮದ ಅನುದಾನರಹಿತ ಶಾಲಾಕಾಲೇಜುಗಳನ್ನ ಅನುದಾನಕ್ಕೆ ಒಳಪಡಿಸಬೇಕು ಎಂಬುದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರ ಕನ್ನಡ ಮಾಧ್ಯಮ ಶಾಲೆ ಭಾಷೆ ಉಳಿವಿಗಾಗಿ ಕೇವಲ ಸಾಹಿತ್ಯ,ಸಮ್ಮೇಳನಗಳಿಗೆ ಕನ್ನಡ ರಕ್ಷಣಾ ವೇದಿಕೆಗಳಿಗೆ ಮಾತ್ರ ಒತ್ತು ನೀಡಿದರೆ ಸಾಲದು , ಕಷ್ಟ ದಲ್ಲೂ ಕನ್ನಡ ಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಅನುದಾನರಹಿತ ಶಾಲಾ ಕಾಲೇಜುಗಳನ್ನ ಅನುದಾನಕ್ಕೊಳಪಡಿಸಿ ಇಲ್ಲಿ ಕೆಲಸ ಮಾಡುವ ಸಾವಿರಾರು ಶಿಕ್ಷಕರು ಮತ್ತು ವ್ಯಾಸಂಗಮಾಡುವ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇನ್ನು ಶಿಕ್ಷಣ ನೀಡುವ ಎಲ್ಲ ವಿದ್ಯಾ ಸಂಸ್ಥೆಗಳಿಗೂ ಅನುದಾನ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನ ಸರ್ಕಾರ ಪಾಲಿಸುತ್ತಿಲ್ಲ ಎಂದು ಹೇಳಿದ ಪ್ರತಿಭಟನಾಕಾರರು, 2006 ರಲ್ಲಿ ಇದ್ದ ಸಮ್ಮಿಶ್ರ ಸರ್ಕಾರವು 1987 ರಿಂದ 1995 ರ ವರೆಗೂ ಸ್ಥಾಪಿತ ಎಲ್ಲ ವರ್ಗದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿದೆ.
ಅಲ್ಲಿಂದ ಇಲ್ಲಿಯವರೆಗೆ ಅನುದಾನ ನೀಡಿಲ್ಲ ಎಂದು ಹೇಳಿದರು. 2010 ರಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಕನ್ನಡದ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ ಎಂದು ಪ್ರತಿಭಟನಾಕಾರರು ತಮ್ಮ ಅಲವತ್ತು ತೋಡಿಕೊಂಡಿದ್ದಾರೆ.

ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರು ಸಿಬ್ಬಂದಿವರ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಾಕ್ಷರತಾ ಸಚಿವ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ಅನುದಾನಕ್ಕೊಳಪಡಿಸುವ ಭರವಸೆ ನೀಡಿತ್ತು.
ಎಲ್ಲ ಭಾಗ್ಯಗಳನ್ನ ನೀಡಿರುವ ಸಿದ್ದರಾಮಯ್ಯ ಸರ್ಕಾರ ವೇತನಾನುದಾನ ಭಾಗ್ಯ ಕಲ್ಪಿಸಿ ಕನ್ನಡ ಶಾಲೆಗಳ ಉಳಿವಿಗೆ ನೆರವಾಗಬೇಕೆಂಬುದು ಪ್ರತಿಭಟನಾನಿರತರ ಒಕ್ಕೊರಲ ಮನವಿಯಾಗಿತ್ತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅನುನಾನರಹಿತ ಶಾಲಾಕಾಲೇಜು ಒಕ್ಕೂಟದ ಗೌರವಾಧ್ಯಕ್ಷ ಜಾಲಮಂಗಲ ನಾಗರಾಜು,ಪ್ರಧಾನ ಕಾರ್ಯದರ್ಶಿ ಐಎಸ್ ಹೊರಗಿನ ಮಠ, ಸಂತೋಷ್ , ಪ್ರದೀಪ್ ,ನಂಜುಂಡಸ್ವಾಮಿ ರಾಜ್ಯಾಧ್ಯಕ್ಷ ಬಿಸಿ ಶಿವಪ್ಪ, ಅನಿಲ್ ಜಾಧವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ,
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ






