ಪ್ರಧಾನಿ ಮೋದಿ ಭಾವಚಿತ್ರ ಅಶ್ಲೀಲವಾಗಿ ಚಿತ್ರಿಸಿದ ಪ್ರಕರಣ|ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ನಂಜೇಗೌಡ|ಆರೋಪಿ ಬಂಧನಕ್ಕೆ ಬಿಜೆಪಿ ಆಗ್ರಹ,ದೂರು ದಾಖಲು
ನಂಜೇಗೌಡ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಂದು ದೇಶದ ಮಹಿಳೆಯೊಂದಿಗೆ ಪ್ರಣಯದಲ್ಲಿರುವಂತೆ ಚಿತ್ರಿಸಿ ಅದಕ್ಕೆ ಕೀಳುಮಟ್ಟದಲ್ಲಿ ಕ್ಯಾಪ್ಷನ್ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನ ಎಐ ಮೂಲಕ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಬಂಧಿಸಬೇಕೆಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕವು ಆಗ್ರಹಿಸಿದೆ.

ಈ ಕುರಿತು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಶರತ್ ಎಸ್.ವಿ ಕಲ್ಯಾಣಿ ಎಂಬುವವರು ಜಯನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

ನಂಜೇಗೌಡ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಂದು ದೇಶದ ಮಹಿಳೆಯೊಂದಿಗೆ ಪ್ರಣಯದಲ್ಲಿರುವಂತೆ ಚಿತ್ರಿಸಿ ಅದಕ್ಕೆ ಕೀಳುಮಟ್ಟದಲ್ಲಿ ಕ್ಯಾಪ್ಷನ್ ನೀಡಲಾಗಿದೆ ಎಂದು ಶರತ್ ಎಸ್.ವಿ ಕಲ್ಯಾಣಿ ದೂರಿನಲ್ಲಿ ತಿಳಿಸಿದ್ದಾರೆ.

ಇಂತಹ ಪೋಸ್ಟ್‌ಗಳಿಂದ ಗೌರವಾನ್ವಿತ ಹುದ್ದೆಯಲ್ಲಿರುವ ಮೋದಿಯವರ ಘನತೆಗೆ ಕುಂದು ಉಂಟು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಕೃತ ಪೋಸ್ಟ್ ಮಾಡಿದ ಆರೋಪಿಯನ್ನು ಬಂಧಿಸಲು ಅವರು ಆಗ್ರಹಿಸಿದ್ದಾರೆ.
ಜಯನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಸಂದರ್ಭದಲ್ಲಿ ಬಿಜೆಪಿ ಮುಖಂಡ ದಿನೇಶ್ ಆಚಾರ್ಯ ಮತ್ತಿತರರು ಇದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







