DistrictShivamogga

ಹುಬ್ಬಳ್ಳಿಯ ಮಾನ್ಯತಾ ಪಾಟೀಲ್‌ ಮರ್ಯಾದೆ ಹತ್ಯೆ ಪ್ರಕರಣ|ಒಂದು ಕೋಟಿರೂ. ಪರಿಹಾರ ನೀಡಲು ಎಂ ಗುರುಮೂರ್ತಿ ಆಗ್ರಹ

ಸಂತ್ರಸ್ತ ಕುಟುಂಬಕ್ಕೆ ಮತ್ತು ದಲಿತ ಯುವಕನಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಘೋಷಿಸಿರುವ ಐದು ಲಕ್ಷ ರೂಪಾಯಿಗಳ ಪರಿಹಾರವು ಅತ್ಯಲ್ಪವಾಗಿದ್ದು, ಸರ್ಕಾರ ಕೂಡಲೇ ಕನಿಷ್ಠ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಎಂ ಗುರುಮೂರ್ತಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಮಾನ್ಯತಾ ಪಾಟೀಲ್‌ ಮರ್ಯಾದೆ ಹತ್ಯೆಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಖಂಡಿಸಿದ್ದಾರೆ‌.

ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಯುವಕನನ್ನು ಮದುವೆಯಾಗಿದ್ದಕ್ಕಾಗಿ ಆಕೆಯ ತಂದೆಯೇ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.

ಸಂತ್ರಸ್ತ ಕುಟುಂಬಕ್ಕೆ ಮತ್ತು ದಲಿತ ಯುವಕನಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಘೋಷಿಸಿರುವ ಐದು ಲಕ್ಷ ರೂಪಾಯಿಗಳ ಪರಿಹಾರವು ಅತ್ಯಲ್ಪವಾಗಿದ್ದು, ಸರ್ಕಾರ ಕೂಡಲೇ ಕನಿಷ್ಠ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಎಂ ಗುರುಮೂರ್ತಿ ಆಗ್ರಹಿಸಿದರು.

ವಕೀಲ ಕೆ ಪಿ ಶ್ರೀಪಾಲ್‌ ಸೇರಿದಂತೆ ಹಲವು ಡಿಎಸ್‌ಎಸ್‌ ಮುಖಂಡರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button