ಸರ್ಕಾರಿ ನೌಕರರು ಮಾಡರ್ನ ಡ್ರೆಸ್ ಧರಿಸಿ ಕಚೇರಿಗೆ ಬರುವಂತಿಲ್ಲ|ಸಭ್ಯ ಉಡುಪು ಧರಿಸಲು ಸರ್ಕಾರದ ಸುತ್ತೋಲೆ|ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಷಡಕ್ಷರಿ ಸ್ವಾಗತ
ಕಚೇರಿ ಅವಧಿಯಲ್ಲಿ ಅಧಿಕೃತ ಕಾರ್ಯಕ್ಕೆ ಪೂರ್ವಾನುಮತಿ ಪಡೆದು ಉದ್ದೇಶ ನಮೂದಿಸಿಯೇ ಹೊರಗೆ ಹೋಗತಕ್ಕದ್ದು. ಕರ್ತವ್ಯದ ವೇಳೆ ಏನಾದರೂ ಅನಾಹುತಗಳಾದರೆ ಯಾರು ಹೊಣೆ ಹೀಗಾಗಿ ಪರಿಷ್ಕೃತ ಆದೇಶದ ಪಾಲನೆ ಎಲ್ಲ ಸರ್ಕಾರಿ ನೌಕರರ ಜವಾಬ್ದಾರಿ ಕೂಡ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.
ಇನ್ನು ಮೇಲೆ ಸ್ಟೈಲ್ ಆಗಿ ಮಾಡರ್ನ ಡ್ರೆಸ್ ಹಾಕ್ಕೊಂಡು ಕಚೇರಿಗೆ ಬರುವಂತಿಲ್ಲ ಎಂದು ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಭ್ಯ ಉಡುಪು ಧರಿಸಿ ಕಚೇರಿಗೆ ಬರಬೇಕು ಇಲ್ಲವಾದರೇ ಕ್ರಮ ಕೈಗೊಳ್ಳುವದಾಗಿ ಖಡಕ ಎಚ್ಚರಿಕೆ ನೀಡಿದೆ.
ಸರ್ಕಾರಿ ನೌಕರರು ಇನ್ಮುಂದೆ ಸಭ್ಯ ಉಡುಪು ಧರಿಸಬೇಕು|
ಜೀನ್ಸ್, ಟೀಷರ್ಟ ಧರಿಸಿ ಬಂದರೇ ಕಠಿಣ ಕ್ರಮ|
ಸರ್ಕಾರಿ ನೌಕರರಿಗೆ ಕೊನೆಗೂ ವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಈವರೆಗೆ ಜೀನ್ಸ್ ಟೀಷರ್ಟ, ಆಧುನಿಕ ಉಡುಪು ಧರಿಸಿ ಬರುತ್ತಿದ್ದ ನೌಕರರು ಇನ್ಮುಂದೆ ಫಾರ್ಮಲ್ ಷರ್ಟ್ ಪ್ಯಾಂಟ್ ತೊಡಬೇಕಿದೆ.

ಹೆಂಗಸರಿಗೂ ಸಹ ಸೀರೆ, ಚೂಡಿದಾರದಂತಹ ಸಭ್ಯ ಉಡುಪು ಧರಿಸಿ ಬರಲು ಸೂಚಿಸಲಾಗಿದೆ. ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಅದೇ ರೀತಿ ಸರ್ಕಾರಿ ನೌಕರರು ಕಚೇರಿ ಸಮಯದಲ್ಲಿ ಸಮಯಪಾಲನೆ ಶಿಸ್ತು ಕಡ್ಡಾಯ, ಸಾರ್ವಜನಿಕರೊಂದಿಗೆ ಸೌಜನ್ಯಯುತ ವರ್ತನೆ ತೋರಬೇಕು.

ಅನುಮತಿಯಿಲ್ಲದೇ ಹೊರಹೋಗುವ ಸಿಬ್ಬಂದಿ ಮೇಲೆ ಮೇಲಾಧಿಕಾರಿ ನಿಗಾವಹಿಸಬೇಕು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಈ ಬಗ್ಗೆ ಸುತ್ತೋಲೆಯಿದ್ದರೂ ಲೆಕ್ಕಿಸದೇ ಸೂಚನೆಗಳ ಪಾಲನೆಯಾಗ್ತಾ ಇರಲಿಲ್ಲ ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಎಲ್ಲ ಅಂಶಗಳನ್ನೊಳಗೊಂಡ ಪರಿಷ್ಕೃತ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಿದೆ.
ಸರ್ಕಾರಿ ನೌಕರರಿಗೆ ಸಭ್ಯ ಉಡುಪು ಧರಿಸಲು ಸೂಚನೆ|
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸ್ವಾಗತ|
ಸರ್ಕಾರಿ ನೌಕರರಿಗೆ ಸಭ್ಯ ಉಡುಪು ಕಡ್ಡಾಯ ಮತ್ತು ಪರಿಷ್ಕೃತ ಶಿಸ್ತುಪಾಲನೆ ಸುತ್ತೋಲೆಯನ್ನ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸ್ವಾಗತಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ನ್ಯೂಇಂಡಿಯಾ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ 2013 ರಲ್ಲೇ ಆದೇಶ ಹೊರಡಿಲಾಗಿತ್ತು.
ಕಚೇರಿ ಅವಧಿಯಲ್ಲಿ ಅಧಿಕೃತ ಕಾರ್ಯಕ್ಕೆ ಪೂರ್ವಾನುಮತಿ ಪಡೆದು ಉದ್ದೇಶ ನಮೂದಿಸಿಯೇ ಹೊರಗೆ ಹೋಗತಕ್ಕದ್ದು. ಕರ್ತವ್ಯದ ವೇಳೆ ಏನಾದರೂ ಅನಾಹುತಗಳಾದರೆ ಯಾರು ಹೊಣೆ ಹೀಗಾಗಿ ಪರಿಷ್ಕೃತ ಆದೇಶದ ಪಾಲನೆ ಎಲ್ಲ ಸರ್ಕಾರಿ ನೌಕರರ ಜವಾಬ್ದಾರಿ ಕೂಡ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.
ಒಟ್ಟಾರೇ, ಸರ್ಕಾರಿ ನೌಕಕರು ಸಮಯಕ್ಕೆ ಸರಿಯಾಗಿ ಬರದೇ ಬೇಕಾಬಿಟ್ಟಿಯಾಗಿ ಬರೋದು, ಕೆಲಸದ ನೆಪದಲ್ಲಿ ಹೊರಗೆ ಉಳಿಯೋದು, ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರೋದು ಮತ್ತು ಹುದ್ದೆಗೆ ಅಗೌರವ ತೋರುವ ಆಧುನಿಕ ಉಡುಪು ಧರಿಸಿ ಸಾರ್ವಜನಿಕರಿಗೆ ಇರುಸುಮುರುಸು ಉಂಟುಮಾಡುವ ಎಲ್ಲದಕ್ಕೂ ಈ ಸುತ್ತೋಲೆ ಬ್ರೇಕ್ ಹಾಕಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.

ಕ್ರಿಸ್ಮಸ್ ಹಬ್ಬದ ಅಂಗವಾಗಿ ನಾಡಿನ ಜನತೆಗೆ ಶುಭ ಹಾರೈಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ







